ನಟಿ ರಶ್ಮಿಕಾ ಮಂದಣ್ಣ ಹತ್ತು ಹಲವು ವಿಷಯಗಳ ಕಾರಣ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇಷ್ಟು ದಿನ ಸಿನಿಮಾಗಳ ವಿಚಾರದಲ್ಲಿ ಸಖತ್ ಸದ್ದು ಮಾಡುತ್ತಿದ್ದ ರಶ್ಮಿಕಾ ಈಗ ಜಾಹೀರಾತುಗಳಲ್ಲಿ ಸಹಾ ಮಿಂಚುತ್ತಿದ್ದಾರೆ. ವಿಶೇಷ ಎಂದರೆ ಈ ಜಾಹೀರಾತುಗಳ ಕಾರಣದಿಂದಾಗಿಯೂ ಸಹಾ ರಶ್ಮಿಕಾ ಟ್ರೋಲ್ ಆಗುತ್ತಿದ್ದಾರೆ. ರಶ್ಮಿಕಾ ಏನೇ ಮಾಡಿದರೂ, ಯಾವುದೇ ಮಾತಾಡಿದರೂ ಸಹಾ ಅದು ದೊಡ್ಡ ಸುದ್ದಿಯಾಗುವುದು ಸಾಮಾನ್ಯವಾಗಿದೆ. ಕನ್ನಡ, ತೆಲುಗು, ತಮಿಳು ಈಗ ಹಿಂದಿ ಹೀಗೆ ಎಲ್ಲೆಡೆ ರಶ್ಮಿಕಾ ಜನಪ್ರಿಯತೆ ಹೆಚ್ಚಿದಂತೆ, ಅವರ ಬ್ರಾಂಡ್ ವ್ಯಾಲ್ಯೂ ಕೂಡಾ ಹೆಚ್ಚಾಗಿದೆ.
ತನ್ನ ಈ ಖ್ಯಾತಿ ಹಾಗೂ ಜನಪ್ರಿಯತೆಯ ಕಾರಣದಿಂದಾಗಿ ರಶ್ಮಿಕಾ ಸುಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿಯಾಗಿದ್ದಾರೆ. ರಶ್ಮಿಕಾ ಜನಪ್ರಿಯತೆಯನ್ನು ಬಳಸಿಕೊಂಡು ತಮ್ಮ ಉತ್ಪನ್ನಗಳ ಮಾರ್ಕೆಟಿಂಗ್ ಮಾಡಲು ಹಲವು ಜನಪ್ರಿಯ ಕಂಪನಿಗಳು ಮುಂದೆ ಬಂದಿವೆ. ರಶ್ಮಿಕಾ ಮಂದಣ್ಣ ಈಗಾಗಲೇ ಸುಪ್ರಸಿದ್ಧ ಫುಡ್ ಬ್ರಾಂಡ್ ಆಗಿರುವ ಮ್ಯಾಕ್ ಡೊನಾಲ್ಡ್ಸ್ ನ ರಾಯಭಾರಿಯಾಗಿದ್ದಾರೆ. ಈಗ ಮ್ಯಾಕ್ಡೊನಾಲ್ಡ್ಸ್ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮ್ಯಾಕ್‌ಡೊನಾಲ್ಡ್ಸ್ ರಶ್ಮಿಕಾ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಮ್ಯಾಕ್‌ಡೊನಾಲ್ಡ್ಸ್ ದಿ ರಶ್ಮಿಕಾ ಮೀಲ್ ಹೆಸರಿನಲ್ಲಿ ಆಹಾರವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಹೊಸ ಜಾಹೀರಾತು ಎಲ್ಲೆಲ್ಲೂ ರಾರಾಜಿಸುತ್ತಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅಮೆರಿಕ ಮೂಲದ ಮ್ಯಾಕ್ ಡೊನಾಲ್ಡ್ಸ್ ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿದ್ದು, ಬಹಳ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗ ಈ ಕಂಪನಿಯು ಪರಿಚಯಿಸಿರುವ ದಿ ರಶ್ಮಿಕಾ ಮೀಲ್ ಜಾಹೀರಾತಿನಲ್ಲಿ ನಟಿ ರಶ್ಮಿಕಾ ಕಾಣಿಸಿಕೊಂಡು ಆಹಾರದ ಕುರಿತಾಗಿ ವಿವರಣೆಯನ್ನು ನೀಡಿದ್ದಾರೆ.
ಜಾಹೀರಾತಿನಲ್ಲಿ ರಶ್ಮಿಕಾ ದಿ ರಶ್ಮಿಕಾ ಮೀಲ್ ಹೇಗೆ ಸೇವಿಸಬೇಕು ಎನ್ನುವ ವಿಚಾರವನ್ನು ಹೇಳುತ್ತಾ, “ಮೊದಲಿಗೆ ಸ್ಪೈಸೀ ಫ್ರೈಡ್ ಚಿಕನ್ ತಿನ್ನಬೇಕು. ಬಳಿಕ ಮಿಕ್ಸ್ ಸ್ಪೈಸಿ ಚಿಕನ್ ಬರ್ಗರ್ ಜೊತೆ ಪಿರಿಪಿರಿ ಫ್ರೈಸ್ ಸೇವಿಸಬೇಕು. ಅದಾದ ಮೇಲೆ ನಿಂಬೂ ಫಿಜ್ ಕುಡಿಯಬೇಕು. ಕೊನೆಯಲ್ಲಿ ಮ್ಯಾಕ್ ಫ್ಲರಿ ಐಸ್ ಕ್ರೀಮ್ ರುಚಿಯನ್ನು ಸವಿಯಬೇಕು” ಎಙದು ರಶ್ಮಿಕಾ ಮಂದಣ್ಣ ವಿವರಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹದೊಂದು ಪ್ರಯತ್ನಕ್ಕೆ ಮುಂದಡಿಯಿಟ್ಟಿ ಮ್ಯಾಕ್ ಡೊನಾಲ್ಡ್ಸ್.
ಮ್ಯಾಕ್ ಡೊನಾಲ್ಡ್ಸ್ ಮಾಡಿರುವ ಈ ಹೊಸ ಪ್ರಯತ್ನಕ್ಕೆ ಯಾವ ಮಟ್ಟದ ಯಶಸ್ಸು ಸಿಗಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ. ಆದರೆ ನಟಿ ರಶ್ಮಿಕಾ ಮಂದಣ್ಣ ಪಡೆದುಕೊಂಡಿರುವಂತಹ ದೊಡ್ಡ ಮಟ್ಟದ ಜನಪ್ರಿಯತೆಯನ್ನು, ಜನಪ್ರಿಯ ಕಂಪನಿಗಳು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಬಹಳಷ್ಟು ಗಮನವನ್ನು ನೀಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.