ಮಾನಸಿಕ ಒತ್ತಡವಿಲ್ಲದ ಜೀವನಕ್ಕಾಗಿ ಅಡುಗೆ ಮನೆಯಲ್ಲಿ ಉಪ್ಪನ್ನು ಹೀಗೆ ಬಳಸಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

Written by Soma Shekar

Published on:

---Join Our Channel---

ಜೀವನದಲ್ಲಿ ನಾವು ಸಂತೋಷವಾಗಿರಬೇಕೆಂದರೆ ನಮಗೆ ಯಾವುದೇ ರೀತಿಯಲ್ಲಿ ಮಾನಸಿಕ ಒತ್ತಡ ಇರಬಾರದು. ಆದರೆ ಅನೇಕ ಸಂದರ್ಭಗಳಲ್ಲಿ ನಾವು ಬಯಸಿದ್ದು ಸಿಗದೇ ಹೋದಾಗ ಮಾನಸಿಕ ಒತ್ತಡ ಎನ್ನುವುದು ಉಂಟಾಗುತ್ತದೆ. ಇದಕ್ಕೆ ಕಾರಣ ಪರಿಸ್ಥಿತಿಗಳು ಮಾತ್ರವೇ ಅಲ್ಲ ವಾಸ್ತು ದೋಷಗಳು ಕೂಡಾ ಕಾರಣವಾಗುತ್ತದೆ. ಆದ್ದರಿಂದಲೇ ತಜ್ಞರು ಮನೆಯನ್ನು ವಾಸ್ತುವಿನ ಪ್ರಕಾರ ಅಲಂಕರಿಸಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ತಲೆದೋರುತ್ತವೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಬಹಳ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ‌

ಅಡುಗೆ ಮನೆಯಲ್ಲಿ ಉಪ್ಪು ಬಹಳ ಮುಖ್ಯ. ಅದಕ್ಕೆ ಸಂಬಂಧಿಸಿದ ಕೆಲವು ವಾಸ್ತು ದೋಷಗಳು ಹಾಗೂ ನಂಬಿಕೆ ಗಳ ಕುರಿತಾಗಿ ನಾವಿಂದು ತಿಳಿಯೋಣ. ಅಡುಗೆ ಮಾಡುವ ಸಮಯದಲ್ಲಿ ಉಪ್ಪು ಆಗಾಗ ನೆಲದ ಮೇಲೆ ಬೀಳುವುದು ಉಂಟು. ವಾಸ್ತು ಹಾಗೂ ಜ್ಯೋತಿಷ್ಯದ ಪ್ರಕಾರ ಉಪ್ಪು ಹೀಗೆ ನೆಲದ ಮೇಲೆ ಬೀಳುವುದು ಶ್ರೇಯಸ್ಕರವಲ್ಲ ಎನ್ನಲಾಗಿದೆ. ಉಪ್ಪು ಶುಕ್ರ ಹಾಗೂ ಚಂದ್ರನಿಗೆ ಸಂಬಂಧಿಸಿದ್ದು, ಅದು ನೆಲದ ಮೇಲೆ ಬಿದ್ದರೆ ಈ ಎರಡು ಗ್ರಹಗಳ ಸಂಬಂಧಿಸಿದ ಅಶುಭ ಫಲ ಗಳಿಗೆ ಕಾರಣವಾಗಬಹುದು ಎನ್ನಲಾಗಿದೆ.

ಉಪ್ಪಿನ ಜೊತೆಗೆ ಬೆಸೆದಿರುವ ನಂಬಿಕೆಗಳು.

  • ಅಜಾಗರೂಕ ಕೈಗಳಿಂದ ಉಪ್ಪನ್ನು ಮುಟ್ಟಬೇಡಿ ಇದರಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
  • ಉಪ್ಪು ನೆಲದ ಮೇಲೆ ಬಿದ್ದಿರುವಾಗ ಅದನ್ನು ಕಂಡರೆ ಪಾದಗಳಿಂದ ಅದನ್ನು ಸ್ಪರ್ಶ ಮಾಡಬೇಡಿ. ಅಲ್ಲದೆ ಪಾದಗಳಿಂದ ಶುಭ್ರ ಮಾಡಬೇಡಿ ಇದು ಕೂಡಾ ಅಶುಭವನ್ನು ಉಂಟು ಮಾಡುತ್ತದೆ ಎನ್ನಲಾಗಿದೆ.
  • ವಾರಕ್ಕೊಮ್ಮೆ ಮನೆಯ ಮೂಲೆಗಳಲ್ಲಿ ಉಪ್ಪನ್ನು ಹಾಕಿ, ಹಾಗೆ ಮಾಡುವುದರಿಂದ ಮನೆಯಲ್ಲಿನ ದೋಷಗಳು ನಿವಾರಣೆಯಾಗಿ, ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಯನವಾಗುತ್ತದೆ ಎನ್ನಲಾಗಿದೆ.
  • ಹಿಂದೂ ನಂಬಿಕೆಯ ಪ್ರಕಾರ ಉಪ್ಪನ್ನು ಸಾಲವಾಗಿ ಪಡೆಯಬಾರದು, ಉಪ್ಪಿ ಕೊಂಡು ಅಂಗಡಿಯಲ್ಲಿ ಸಾಲ ಹೇಳಬಾರದು. ನೀವು ಅಂಗಡಿ ಮಾಲೀಕರಾಗಿದ್ದರೆ ಉಪ್ಪನ್ನು ಸಾಲವಾಗಿ ನೀಡಬೇಡಿ. ಇದು ಅಶುಭ ಎನ್ನಲಾಗಿದೆ.

Leave a Comment