ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕೆಲವು ದಿನಗಳ ಹಿಂದೆ ನೀಡಿದ್ದ ಒಂದು ಹೇಳಿಕೆ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವೇ ಅಲ್ಲದೇ ಅದೊಂದು ವಿ ವಾ ದಕ್ಕೆ ಕಾರಣವಾಗಿತ್ತು. ವಿಷಯ ತೀವ್ರವಾಗುತ್ತಿರುವುದನ್ನು ಕಂಡ ನಟಿ ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಾನು ಆಡಿದ ಮಾತಿನ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಲ್ಲದೇ ತನ್ನ ಮಾತಿನಿಂದಾಗಿ ಆಗಿರುವ ವಿ ವಾ ದಕ್ಕೆ ಕ್ಷಮಾಪಣೆ ಕೇಳಿದ್ದರು. ನಿನ್ನೆ ನಟಿಯು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ ನಂತರ ಇದೀಗ ಹಿರಿಯ ನಟ ಪ್ರಕಾಶ್ ರೈ ಸಾಯಿ ಪಲ್ಲವಿಗೆ ಬೆಂಬಲ ಸೂಚಿಸಿ ಮಾಡಿದ ಟ್ವೀಟ್ ವೈರಲ್ ಅಗಿದೆ.
ನಟಿ ಸಾಯಿ ಪಲ್ಲವಿ ಅವರು ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ತೋರಿಸಲಾಗಿರುವ ಹಿಂ ಸೆ ಹಾಗೂ ಗೋರಕ್ಷಕ ಪಡೆಗಳು ನಡೆಸಿದ ಧಾಳಿ ಎರಡೂ ಒಂದೇ ಎನ್ನುವ ಮಾತನ್ನು ಹೇಳಿದ್ದರು. ಈ ಮಾತನ್ನು ಕೇಳಿ ಜನರು ಮತ್ತು ಭಜರಂಗದಳವು ಕಾರ್ಯಕರ್ತರು ತೀವ್ರವಾದ ಸಿ ಟ್ಟು ಮತ್ತು ಅಸಮಾಧಾನವನ್ನು ಹೊರಹಾಕಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು.
ಇದಾದ ನಂತರ ಸಾಯಿ ಪಲ್ಲವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಾವು ಹೇಳಿದ ಮಾತುಗಳನ್ನು ಬೇರೆ ರೀತಿಯಲ್ಲೇ ಅರ್ಥೈಸಲಾಗಿದೆ ಎಂದೂ, ಸ್ಪಷ್ಟನೆ ಯನ್ನು ನೀಡುತ್ತಾ, ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಹಾ ಬದುಕುವ ಹಕ್ಕಿದ್ದು, ಎಲ್ಲರ ಪ್ರಾಣವೂ ಸಹಾ ಮುಖ್ಯವಾದುದು. ಧರ್ಮದ ಹೆಸರಿನಲ್ಲಿ ನಡೆಯುವ ಹಿಂ ಸೆ ಸರಿಯಲ್ಲ. ನಾನು ಹೇಳಿದ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಕೆಲವರು ಹೀಗೆ ವಿ ವಾ ದವನ್ನು ಹುಟ್ಟು ಹಾಕಿದ್ದಾರೆ ಎಂದು ಹೇಳಿದ್ದಾರೆ.
ನಟಿ ಸಾಯಿ ಪಲ್ಲವಿ ಅವರು ಹೀಗೆ ಸ್ಪಷ್ಟನೆಯನ್ನು ನೀಡಿದ ನಂತರ ಈ ವಿಚಾರವಾಗಿ ನಟಿಗೆ ಬೆಂಬಲವನ್ನು ಸೂಚಿಸುತ್ತಾ ನಟ ಪ್ರಕಾಶ್ ರೈ ಅವರು ಟ್ವೀಟ್ ಒಂದನ್ನು ಮಾಡಿದ್ದು, ಮಾನವೀಯತೆಯೇ ಮೊದಲು, ಆದ್ದರಿಂದ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ನಟ ಪ್ರಕಾಶ್ ರೈ ಅವರು ಮಾಡಿದ ಟ್ವೀಟ್ ಬಹಳ ಬೇಗ ವೈರಲ್ ಆಗಿದ್ದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.