ಮಾದ್ಯಮಗಳ ಮೇಲೆಯೇ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ: ಕೇಳಿದ್ದಾರೆ ಭಾರೀ ಮೊತ್ತದ ಪರಿಹಾರ

Entertainment Featured-Articles News
41 Views

ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ಆ ರೋ ಪ ವನ್ನು ಹೊತ್ತು ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ಪತಿ. ರಾಜ್ ಕುಂದ್ರಾ. ಈ ವಿಚಾರ ಸುದ್ದಿಯಾದ ಮೇಲೆ ದಿನಕ್ಕೊಂದು ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅಲ್ಲದೇ ಶಿಲ್ಪಾ ಶೆಟ್ಟಿ ಅವರ ಕುಟುಂಬದ ವಿಚಾರವಾಗಿ ಸಹಾ ಕೆಲವು ವಿಚಾರಗಳು ಸುದ್ದಿಯಾದವು. ಈಗ ಇವೆಲ್ಲವುಗಳ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ತಮ್ಮ ಕುಟುಂಬದ ಬಗ್ಗೆ ಸುದ್ದಿಗಳನ್ನು ಮಾಡಿದ ಮಾದ್ಯಮಗಳ ಮೇಲೆಯೇ ಮಾನ ನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಈ ಮೂಲಕ ಶಿಲ್ಪಾ ಶೆಟ್ಟಿ ಮಾದ್ಯಮಗಳ ವಿ ರು ದ್ಧ ಹೋರಾಟಕ್ಕೆ ಇಳಿದಿದ್ದಾರೆ. 29 ಜನ ಪತ್ರಕರ್ತರು ಹಾಗೂ ಮಾದ್ಯಮಗಳ ಮೇಲೆ ಶಿಲ್ಪಾ ಶೆಟ್ಟಿ ಮೊಕದ್ದಮೆಯನ್ನು ಹೂಡಿದ್ದಾರೆ.

ರಾಜ್ ಕುಂದ್ರಾ ವಿಚಾರದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಕುರಿತಾಗಿ ಸುಳ್ಳು ಹಾಗೂ ತಮ್ಮ ಚಾರಿತ್ರ್ಯ ಹರಣ ಮಾಡುವಂತಹ ಸುದ್ದಿಗಳನ್ನು ಬಿತ್ತರಿಸಲಾಗಿದೆ. ತಮ್ಮ ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ಈ ಮಾದ್ಯಮಗಳು ಸುಳ್ಳು ಹಾಗೂ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡಿವೆ ಎನ್ನುವಂತಹ ಆರೋಪವನ್ನು ಮಾಡಿರುವ ಶಿಲ್ಪಾ ಶೆಟ್ಟಿ ಅವರು, ಈ ವೇಳೆ ಮಾನ ನಷ್ಟದ ಪರಿಹಾರವಾಗಿ 25 ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ ಶಿಲ್ಪಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳ ಮೇಲೆ ಸಹಾ ತಮ್ಮ ಕೋಪ ಮತ್ತು ಅಸಮಾಧಾನವನ್ನು ಹೊರಹಾಕಿದ್ದಾರೆ.

ನನ್ನ ಮತ್ತು ನನ್ನ ಪತಿ ನಡುವಿನ ಸಂಬಂಧದ ಕುರಿತು ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿಗಳನ್ನು ಪ್ರಕಟಿಸುವ ಮೂಲಕ ಮಾದ್ಯಮಗಳು ತಮ್ಮ ವೈಯಕ್ತಿಕ ಜೀವನದ ಗೌಪ್ಯತೆಗೆ ಧಕ್ಕೆಯನ್ನು ಉಂಟು ಮಾಡಿವೆ. ಇದರಿಂದಾಗಿ ತನ್ನ ವೈಯಕ್ತಿಕ ಜೀವನದ ಮೇಲೆ ಹಸ್ತಕ್ಷೇಪ ನಡೆಯುತ್ತಿದೆ ಎಂದು ಶಿಲ್ಪಾ ಶೆಟ್ಟಿ ಆರೋಪವನ್ನು ಮಾಡುವ ಮೂಲಕ ಇದಕ್ಕೆ ಕಾರಣವಾದ ಮಾದ್ಯಮಗಳು ಮತ್ತು ಪತ್ರಕರ್ತರ ಮೇಲೆ ಮಾನನಷ್ಟ ಮೊಕದ್ದಮೆ ಯನ್ನು ಹೂಡಿದ್ದಾರೆ. ಇನ್ನೊಂದು ಕಡೆ ನ್ಯಾಯಾಂಗ ಬಂಧನದ ವಿಸ್ತರಣೆಯ ಕಾರಣದಿಂದ ರಾಜ್ ಕುಂದ್ರಾ ಇನ್ನೂ ಜೈಲಿನಲ್ಲೇ ಇದ್ದು ವಿಚಾರಣೆ ಮುಂದುವರೆದಿದೆ.

Leave a Reply

Your email address will not be published. Required fields are marked *