ಮಾದ್ಯಮಗಳು ಅ”ತ್ಯಾ ಚಾರಿಗಳನ್ನು ಮಹಿಷಾಸುರರು ಎನ್ನುವ ಉಲ್ಲೇಖ ಮಾಡಬಾರದು: ಆ ದಿನಗಳು ನಟ ಚೇತನ್

Written by Soma Shekar

Published on:

---Join Our Channel---

ಮೈಸೂರಿನಲ್ಲಿ ಯುವತಿಯೊಡನೆ ನಡೆದಂತಹ ಒಂದು ಆ ಘಾ ತಕಾರಿ ಘಟನೆಯ ಕುರಿತಾಗಿ ಇಡೀ ರಾಜ್ಯ ಬೆಚ್ಚಿ ಬಿದ್ದಿದೆ. ಅಲ್ಲದೆ ಈ ಘಟನೆ ಮೈಸೂರು ನಗರದಲ್ಲಿ ಒಂದು ತಲ್ಲಣವನ್ನು ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಕುರಿತಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ರಾಜಕೀಯ ನಾಯಕರು ಸಹ ಇದರ ಬಗ್ಗೆ ಮಾತನಾಡುತ್ತಾ ಸರ್ಕಾರದ ವೈಫಲ್ಯ ಈಗ ಘಟನೆಗೆ ಕಾರಣ ಎನ್ನುವುದಾಗಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮೈಸೂರಿನಲ್ಲಿ ಪೊಲೀಸ್ ಇಲಾಖೆಯು ಘಟನೆಗೆ ಸಂಬಂಧಿಸಿದಂತಹ ಆ ರೋ ಪಿಗಳನ್ನು ಆದಷ್ಟು ಬೇಗ ಬಂಧಿಸುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಮಾಧ್ಯಮಗಳಲ್ಲಿ ಮೈಸೂರಿನಲ್ಲಿ ನಡೆದ ಈ ದು ರ್ಘ ಟ ನೆಯ ವಿಷಯ ಸಾಕಷ್ಟು ಚರ್ಚೆಗೆ ಒಳಪಡುತ್ತಿದೆ.

ಈ ವೇಳೆಯಲ್ಲಿ ಕನ್ನಡ ಚಿತ್ರರಂಗದ ನಟ ಹಾಗೂ ಸಾಮಾಜಿಕ ಹೋರಾಟಗಾರ ಎಂದು ಕೂಡಾ ಗುರುತಿಸಲ್ಪಟ್ಟಿರುವ ಆ ದಿನಗಳು ಸಿನಿಮಾದ ಖ್ಯಾತಿಯ ನಟ ಚೇತನ್ ಅವರು, ಮಾಧ್ಯಮಗಳು ಮೈಸೂರಿನಲ್ಲಿ ದು ಷ್ಕೃ ತ್ಯವನ್ನು ಮಾಡಿದಂತಹ ಆರೋಪಿಗಳನ್ನು ಮಹಿಷಾಸುರ ನಿಗೆ ಹೋಲಿಕೆ ಮಾಡಿರುವುದಕ್ಕೆ ತಮ್ಮ ಅಸಮಾಧಾನವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಆ ಪಾ ದಿತರನ್ನು ಮಹಿಷಾಸುರನಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎನ್ನುತ್ತಾ ಅವರು ಒಂದು ಪೋಸ್ಟ್ ಮಾಡುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ನಟ ಚೇತನ್ ಅವರು ತಮ್ಮ ಪೋಸ್ಟ್ ನಲ್ಲಿ,
“ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿ/ಗಳು ಮೈಸೂರಿನ ಅ ತ್ಯಾ ಚಾರಿಗಳನ್ನು ‘ಮಹಿಷಾಸುರರು’ ಎಂದು ಉಲ್ಲೇಖಿಸುತ್ತಿದ್ದಾರೆ. ನಮ್ಮ ದಲಿತ / ಆದಿವಾಸಿ / ಬಹುಜನ ಜನಗಳಿಗೆ ಮಹಿಷಾಸುರ, ಮೇಲ್ವರ್ಗದ ಬ್ರಾಹ್ಮಣ್ಯದ ಶಕ್ತಿಯಿಂದ ಕೊಲ್ಲಲ್ಪಟ್ಟ ಹಿಂದುಳಿದ ವರ್ಗದ, ಮೂಲನಿವಾಸಿ ರಾಜನಾಗಿದ್ದ ಮತ್ತು ಅವರನ್ನು ಅನ್ಯಾಯವಾಗಿ ‘ರಾ ಕ್ಷ ಸ’ ಎಂದು ಪರಿಗಣಿಸಲಾಗಿತ್ತು. ಕರ್ನಾಟಕದ ಮಾಧ್ಯಮಗಳು ಇಂತಹ ಅವಹೇಳನಕಾರಿ ಉಲ್ಲೇಖಗಳಿಂದ ದೂರವಿರಬೇಕು.” ಎಂದು ಬರೆದುಕೊಂಡಿದ್ದಾರೆ.

Leave a Comment