ಕನ್ನಡ ಕಿರುತೆರೆಯ ವಿಚಾರಕ್ಕೆ ಬಂದಾಗ ವಿವಿಧ ಖಾಸಗಿ ವಾಹಿನಿಗಳಲ್ಲಿ ವೈವಿದ್ಯಮಯ ಎನಿಸುವಂತಹ ಹತ್ತು ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಲೇ ಇರುತ್ತವೆ. ಅವುಗಳಲ್ಲಿ ಒಂದು ಕಡೆ ಧಾರಾವಾಹಿಗಳು ತಮ್ಮದೇ ಆದಂತಹ ಯಶಸ್ಸನ್ನು ಪಡೆದುಕೊಂಡು ಭರ್ಜರಿಯಾಗಿ ಮುಂದೆ ಸಾಗುತ್ತಿದ್ದರೆ, ಇನ್ನೊಂದು ಕಡೆ ವೈವಿಧ್ಯಮಯವಾದ ಕಾನ್ಸೆಪ್ಟ್ ಗಳೊಂದಿಗೆ ಮೂಡಿ ಬರುವ ರಿಯಾಲಿಟಿ ಶೋಗಳು ತಮ್ಮದೇ ಆದಂತಹ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿವೆ. ಪ್ರಾಮುಖ್ಯತೆಯ ಜೊತೆಗೆ ರಿಯಾಲಿಟಿ ಶೋ ಗಳು ಅಸಂಖ್ಯಾತ ಅಭಿಮಾನಿಗಳು ಹಾಗೂ ಪ್ರೇಕ್ಷಕರನ್ನು ಪಡೆದುಕೊಳ್ಳುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ.
ಇಂತಹ ರಿಯಾಲಿಟಿ ಶೋಗಳಲ್ಲಿ ಒಂದಾಗಿ ಅಪಾರ ಜನ ಮೆಚ್ಚುಗೆಯನ್ನು ಪಡೆದಿದ್ದ ಶೋ ನನ್ನಮ್ಮ ಸೂಪರ್ ಸ್ಟಾರ್. ಕಳೆದ ಕೆಲವು ತಿಂಗಳುಗಳಿಂದಲೂ ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ ಬಂದಿದ್ದ, ಈ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿನ್ನೆ ಮುಗಿದಿದೆ. ಆರಂಭದಿಂದಲೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಈ ಶೋ ಯಶಸ್ಸನ್ನು ಪಡೆದುಕೊಂಡಿತ್ತು. ಒಂದು ಹೊಸ ರೀತಿಯ ಕಾರ್ಯಕ್ರಮವು ಜನರ ಗಮನವನ್ನು ತನ್ನ ಕಡೆಗೆ ಸೆಳೆದಿತ್ತು. ಮಾದ್ಯಮಗಳ ಸುದ್ದಿಗಳಲ್ಲಿ ಸಹಾ ಸದ್ದು ಮಾಡಿತ್ತು.
ಇನ್ನು ಈ ಶೋ ನಲ್ಲಿ ಫೈನಲ್ ಹಂತಕ್ಕೆ ತಲುಪಿದ್ದ ಆರು ಜನ ಸ್ಪರ್ಧಿಗಳಲ್ಲಿ ಸೂಪರ್ ಸ್ಟಾರ್ ಟೈಟಲ್ ಯಾರು ಪಡೆಯಲಿದ್ದಾರೆ?? ಯಾರು ಈ ಬಾರಿ ವಿನ್ನರ್ ಆಗಲಿದ್ದಾರೆ? ಎನ್ನುವ ಪ್ರೇಕ್ಷಕರ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ. ಹೌದು, ವಂಶಿಕ ಅಂಜನಿ ಕಶ್ಯಪ್ ಈ ಬಾರಿ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ, ಸೂಪರ್ ಸ್ಟಾರ್ ಟೈಟಲ್ ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಗೆಲುವಿನ ನಗೆಯನ್ನು ಬೀರಿದ್ದಾರೆ ವಂಶಿಕಾ.
ಸೂಪರ್ ಸ್ಟಾರ್ ಟೈಟಲ್ ಜೊತೆಗೆ ಯಶಸ್ವಿನಿ ಹಾಗೂ ವಂಶಿಕ ಅವರು ಬಹುಮಾನದ ಮೊತ್ತವಾದ 5 ಲಕ್ಷ ರೂಪಾಯಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಮಾತಿನಮಲ್ಲಿ ಎಂದೇ ಕರೆಸಿಕೊಳ್ಳುತ್ತಿದ್ದ ವಂಶಿಕ ಟೈಟಲ್ ಗೆಲ್ಲುವ ಮೂಲಕ ಪ್ರೇಕ್ಷಕರಿಗೆ ಖುಷಿಯನ್ನು ನೀಡಿದ್ದಾರೆ. ಇದೇ ವೇಳೆ ಪುನೀತ ಮತ್ತು ಆರ್ಯ ಜೋಡಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ವಿಂದ್ಯಾ ಮತ್ತು ರೋಹಿತ್ ಜೋಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.