ಮಾತಿನ ಭರದಲ್ಲಿ ತನ್ನನ್ನು ತಾನೇ ಕತ್ತೆಗೆ ಹೋಲಿಸಿಕೊಂಡ ಪಾಕ್ ನ ಮಾಜಿ ಪ್ರಧಾನಿ: ವೀಡಿಯೋ ವೈರಲ್

Entertainment Featured-Articles News Viral Video

ಪಾಕಿಸ್ತಾನದ ಮಾಜಿ ಪ್ರಧಾ‌ನಿ ಇಮ್ರಾನ್ ಖಾನ್ ಇತ್ತೀಚಿನ ದಿನಗಳಲ್ಲಿ ತಮ್ಮ ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುದ್ದಿಗಳ ಮುಖ್ಯಾಂಶಗಳಲ್ಲಿ ರಾಜಕೀಯ ವಿಚಾರಗಳಿಂದಾಗಿಯೇ ಸದಾ ಸುದ್ದಿಯಲ್ಲಿ ಇರುವ ಇಮ್ರಾನ್ ಖಾನ್ ಇದೀಗ ಒಂದು ಹೊಸ ವಿಚಾರಕ್ಕಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಾನೇ ನೀಡಿದ ಹೇಳಿಕೆಯಿಂದಾಗಿ ಈಗ ಇಮ್ರಾನ್ ಖಾನ್ ಮುಜುಗರ ಪಡುವಂತಾಗಿರುವುದು, ಟ್ರೋಲ್ ಆಗಿರುವುದು ಕೂಡಾ ವಾಸ್ತವವಾಗಿದೆ.

ಹೌದು, ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡುವ ಭರದಲ್ಲಿ ತನ್ನನ್ನು ತಾನು ಕತ್ತೆಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಇಮ್ರಾನ್ ಖಾನ್ ನೀಡಿರುವ ಹೇಳಿಕೆಯನ್ನು ಕೇಳಿದ ನಂತರ, ವೀಡಿಯೋ ನೋಡಿದ ನಂತರ ನೆಟ್ಟಿವರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇಮ್ರಾನ್ ಖಾನ್ ಅವರು ಇಷ್ಟಕ್ಕೂ ಹೇಳಿದಾದ್ರೂ ಏನು? ಬನ್ನಿ ಅದನ್ನೂ ತಿಳಿಯೋಣ.

ಪಾಕ್ ನ ಮಾಜಿ ಪ್ರಧಾನಿ ಯನ್ನು ಇತ್ತೀಚಿಗೆ ಜುನೈದ್ ಅಕ್ರಮ್, ಮುಜಮ್ಮಿಲ್ ಹಸನ್ ಮತ್ತ ತಲ್ಹಾ ಅವರು ಸಂದರ್ಶನ ಮಾಡಿದ್ದರು. ಸಂದರ್ಶನದ ವೇಳೆ ಇಮ್ರಾನ್ ಖಾನ್ ತಾವು ಯುನೈಟೆಡ್ ಕಿಂಗ್ ಡಂ ನಲ್ಲಿ ಇದ್ದ ದಿನಗಳನ್ನು ಸ್ಮರಿಸುತ್ತಾ ಒಂದಷ್ಟು ವಿಚಾರಗಳನ್ನು ಮಾತನಾಡಿದರು. ಆ ದಿನಗಳ ಬಗ್ಗೆ ಒಂದಷ್ಟು ಚರ್ಚೆಯನ್ನು ಮಾಡಲಾಯಿತು. ಆಗ ಅವರು ನಾನೊಬ್ಬ ಪಾಕಿಸ್ತಾನಿ, ಇಂಗ್ಲೆಂಡ್ ಅನ್ನು ಎಂದೂ ಸಹಾ ನನ್ನ ಮನೆ ಎಂದು ಪರಿಗಣಿಸಿರಲಿಲ್ಲ ಎಂದಿದ್ದಾರೆ.

ಇಮ್ರಾನ್ ಖಾನ್, ನಾನು ಯುಕೆಯಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿಯಾಗಿದ್ದೆ. ನಾನು ಏನು ಬೇಕಾದರೂ ಮಾಡಬಹುದಾಗಿತ್ತು. ನಾನು ಒಬ್ಬ ಇಂಗ್ಲೀಷ್ ಮನುಷ್ಯನಾಗುವುದು ಸಾಧ್ಯವಿರಲಿಲ್ಲ. ನೀವು ಕತ್ತೆಯ ಮೇಲೆ ಗೆರೆಗಳನ್ನು ಹಾಕಿದ ಮಾತ್ರಕ್ಕೆ ಅದು ಜೀಬ್ರಾ ಆಗುವುದಿಲ್ಲ. ಆ ಕತ್ತೆ ಕತ್ತೆಯಾಗಿಯೇ ಉಳಿಯುತ್ತದೆ ಎಂದು ಹೇಳುವ ಮೂಲಕ ಅವರು ತನ್ನನ್ನು ತಾನು ಕತ್ತೆಗೆ ಹೋಲಿಕೆ ಮಾಡಿಕೊಂಡು, ಈಗ ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ಇಮ್ರಾನ್ ಖಾನ್.

Leave a Reply

Your email address will not be published.