ಮಾತನಾಡುತ್ತಿದೆಯಂತೆ ಸಿದ್ದಾರ್ಥ್ ಶುಕ್ಲಾ ಆತ್ಮ: ವಿಚಿತ್ರ ಧ್ವನಿಯ ವೀಡಿಯೋ ಸಿಕ್ಕಾಪಟ್ಟೆ ವೈರಲ್

Written by Soma Shekar

Published on:

---Join Our Channel---

ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿದ್ದ, ಹಿಂದಿ ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಅವರ ಅಚಾನಕ್ ಆದ ಸಾವು ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ಬಾಲಿವುಡ್ ಮಂದಿಗೆ ಕೂಡಾ‌ ಶಾ ಕ್ ನೀಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಇನ್ನೂ ಕೂಡಾ ಅವರ ಅಭಿಮಾನಿಗಳು ಸಿದ್ಧಾರ್ಥ್ ಅವರ ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ನಟನನ್ನು ಸ್ಮರಿಸುತ್ತಲೇ ಇದ್ದಾರೆ. ಅನೇಕರಿಗೆ ಸಿದ್ಧಾರ್ಥ್ ಸಾವನ್ನು ನಂಬುವುದ ಕಷ್ಟವಾಗಿದೆ‌. ಅಲ್ಲದೇ ಅವರ ಸಾವಿನ ಕುರಿತಾಗಿ ಕೆಲವರು ಅನುಮಾನಗಳನ್ನು ಸಹಾ ವ್ಯಕ್ತಪಡಿಸಿದ್ದಾರೆ.

ಸಿದ್ಧಾರ್ಥ್ ಸಾವನ್ನು ಇನ್ನೂ ಅಭಿಮಾನಿಗಳು ಮರೆಯುವ ಮೊದಲೇ ಹೊಸ ವಿಷಯವೊಂದು ಇದೀಗ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಸಿದ್ದಾರ್ಥ ಶುಕ್ಲಾ ಅವರ ಆತ್ಮವು ಮಾತನಾಡುತ್ತಿದೆ ಎನ್ನುವ ವಿಷಯ ಈಗ ಎಲ್ಲರ ಕುತೂಹಲ ಕೆರಳಿಸಿದೆ. ಇಷ್ಟಕ್ಕೂ ಸಿದ್ದಾರ್ಥ್ ಆತ್ಮದ ವಿಚಾರ ಹೇಗೆ ಬಂತು ಎನ್ನುವುದಾದರೆ ಇದಕ್ಕೆ ಕಾರಣವಾಗಿದ್ದು ಪ್ಯಾರಾ ನಾರ್ಮಲ್ ತಜ್ಞ ಎನಿಸಿಕೊಂಡಿರುವ ಸ್ಟೀವ್ ಹಫ್ ಹಂಚಿಕೊಂಡಿರುವ ಒಂದು ವೀಡಿಯೋ ಆಗಿದೆ ಎನ್ನುವುದು ವಾಸ್ತವ ವಿಷಯವಾಗಿದೆ.

ಸ್ಟೀವ್ ಹಫ್ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇವರು ಹೆಸರು ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರವೂ ಕೇಳಿ ಬಂದಿತ್ತು. ಏಕೆಂದರೆ ಆಗ ಸ್ಟೀವ್ ತಾನು ಸುಶಾಂತ್ ಆತ್ಮದ ಜೊತೆ ಮಾತನಾಡಿದೆ ಎಂದು ವೀಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದರು.ಈಗ ಅದನ್ನು ಮತ್ತೊಮ್ಮೆ ಮುಂದುವರೆಸಿರುವ ಅವರು ಈ ಬಾರಿ ಸಿದ್ದಾರ್ಥ್ ಆತ್ಮದ ಜೊತೆ ಮಾತನಾಡಿದ್ದಾಗಿ ಹೇಳಿದ್ದಾರೆ.

ಸ್ವೀವ್ ಹಫ್ ಸಿದ್ಧಾರ್ಥ್ ಆತ್ಮದ ಜೊತೆ ಮಾತನಾಡಿರುವ ವೀಡಿಯೋ ಒಂದು ಶೇರ್ ಮಾಡಿ, ಅದರಲ್ಲಿರುವ ಧ್ವನಿ ಸಿದ್ದಾರ್ಥ್ ಅವರದ್ದು ಎಂದಿದ್ದಾರೆ. ಇನ್ನು ಈ ವೀಡಿಯೋದ ಸಂಭಾಷಣೆಯನ್ನು ನಾವು ಗಮನಿಸಿದಾಗ, ಸ್ಟೀವ್ ಶರೀರ ಬಿಡುವಾಗ ನೀವು ಕೊನೆಯದಾಗಿ ಏನನ್ನು ನೋಡಿದಿರಿ ? ಎಂದು ಆತ್ಮವನ್ನು ಪ್ರಶ್ನೆ ಮಾಡಿದಾಗ ಅದು ನಾನೊಬ್ಬ ದೇವದೂತನನ್ನು ನೋಡಿದೆ ಎನ್ನುವ ಉತ್ತರವನ್ನು ನೀಡಿದೆ. ಸಾಯುವಾಗ ನನಗೆ ತುಂಬಾ ನೋವಾಯಿತೆಂದು ಆತ್ಮ ಹೇಳಿದೆ.

ಇನ್ನು ಸಾಯುವಾಗ ನಾನು ನ ಗ್ನವಾಗಿ ಇದ್ದೆನು.‌ ಈಗ ನಾನು ದೇವರ ಜೊತೆ ಇದ್ದೇನೆ, ಸ್ವರ್ಗದಲ್ಲಿ ಇದ್ದೇನೆ, ನನ್ನ ಬಗ್ಗೆ ಚಿಂತೆ ಮಾಡಬೇಡಿ ಎಂದೆಲ್ಲಾ ಹೇಳಿದೆ ಸಿದ್ಧಾರ್ಥ್ ಆತ್ಮದ್ದು ಎನ್ನಲಾದ ಆ ಧ್ವನಿ. ಇನ್ನು ಯೂಟ್ಯೂಬ್ ನಲ್ಲಿ ಈಗಾಗಲೇ ಈ ವೀಡಿಯೋವನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ‌. ಕೆಲವರು ನಂಬಿದರೆ, ಇನ್ನೂ ಕೆಲವರು ಸ್ಟೀವ್ ಅವರನ್ನು ಟೀಕಿಸುತ್ತಾ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಇದೆಲ್ಲಾ ಸುಳ್ಳೆಂದು ಹೇಳುತ್ತಿದ್ದಾರೆ.

Leave a Comment