ಮಾಜಿ ಸಚಿವ ಜನಾರ್ಧನ ರೆಡ್ಡಿ ಮಗನನ್ನು ಹಾಡಿ ಹೊಗಳಿ, ಉತ್ತಮ ನಟ ಎಂದ ಎಸ್ ಎಸ್ ರಾಜಮೌಳಿ!!

Entertainment Featured-Articles News

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಮುಹೂರ್ತವು ಇಂದು ಬೆಂಗಳೂರಿನಲ್ಲಿ ಒಂದು ಅದ್ದೂರಿ ಕಾರ್ಯಕ್ರಮದ ಮೂಲಕ ನಡೆದಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಕ್ಷಿಣ ಭಾರತದ ಸಿನಿಮಾರಂಗದ ಜನಪ್ರಿಯ ನಿರ್ದೇಶಕ, ಬಾಹುಬಲಿ ಸಿನಿಮಾ ಖ್ಯಾತಿಯ ಎಸ್ ಎಸ್ ರಾಜಮೌಳಿ ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾ ಆರಂಭಕ್ಕೆ ಚಾಲನೆ ನೀಡಿ ಶುಭವನ್ನು ಕೋರಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡಾ ಭಾಗವಹಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ಕಿರೀಟಿ ರೆಡ್ಡಿಯವರನ್ನು ಪರಿಚಯಿಸುವ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನಲ್ಲಿ ಕಿರೀಟಿ ರೆಡ್ಡಿ ಅದ್ಭುತವಾದ ಸ್ಟಂಟ್ಗಳನ್ನು ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಟೀಸರ್ ನೋಡಿದ ನಂತರ ನಿರ್ದೇಶಕ ರಾಜಮೌಳಿ ಅವರು ಕಿರೀಟಿ ರೆಡ್ಡಿಯನ್ನು ಹಾಡಿ ಹೊಗಳಿದ್ದಾರೆ. ರಾಜಮೌಳಿ ಮಾತನಾಡುತ್ತಾ ಕಿರೀಟಿ ಒಬ್ಬ ಪ್ರತಿಭಾವಂತ, ಆರ ಚೆನ್ನಾಗಿ ನಟಿಸುತ್ತಾನೆ, ಡ್ಯಾನ್ಸ್ ಮಾಡುತ್ತಾನೆ ಒಂದು ಒಳ್ಳೆಯ ತಂಡ ಸಿಕ್ಕಿದೆ. ಸಿನಿಮಾಗೆ ದೊಡ್ಡ ಯಶಸ್ಸು ಸಿಗಲಿ ಎಂದು ಶುಭವನ್ನು ಹಾರೈಸಿದ್ದಾರೆ.

ಇದೇ ವೇಳೆ ರಾಜಮೌಳಿಯವರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಟಿ ಶ್ರೀಲೀಲಾ ಅವರನ್ನು ಅದ್ಭುತವಾದ ನಟಿ ಎಂದು ಹೊಗಳಿದ್ದಾರೆ, ಕಿರೀಟಿ ರೆಡ್ಡಿ ನಟಿಸುತ್ತಿರುವ ಈ ಸಿನಿಮಾವನ್ನು ಜನಪ್ರಿಯ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಭಾರೀ ವೆಚ್ಚದಲ್ಲಿ, ಬಹಳ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿದ್ದು, ಜನಪ್ರಿಯ ಕಲಾವಿದರ ದೊಡ್ಡ ತಂಡವೇ ಈ ಸಿನಿಮಾದಲ್ಲಿ ಇರಲಿದೆ ಎಂದು ಹೇಳಲಾಗಿದೆ.

Leave a Reply

Your email address will not be published.