ಮಾಜಿ ಮಾವ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಭೇಟಿ: ಅಭಿಮಾನಿಗಳಿಗೆ ಹೆಚ್ಚಿದ ಕುತೂಹಲ

Entertainment Featured-Articles News
89 Views

ಟಾಲಿವುಡ್ ನ ಕ್ಯೂಟ್ ಕಪಲ್ ಸಮಂತಾ ನಾಗಚೈತನ್ಯ ಜೋಡಿಯು ಅಕ್ಟೋಬರ್ ಆರಂಭದಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಿರುವ ವಿಚಾರವನ್ನು ಘೋಷಣೆ ಮಾಡಿದಾಗ ಅಪಾರ ಅಭಿಮಾನಿಗಳ ಹೃದಯಕ್ಕೆ ಈ ಮಾತು ಘಾ ಸಿಯನ್ನು ಉಂಟು ಮಾಡಿತ್ತು. ಇನ್ನು ವಿಚ್ಚೇದನದ ಸುದ್ದಿಯ ನಂತರವೂ ಈ ಇಬ್ಬರ ಬಗ್ಗೆ ಮಾದ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಆಗುತ್ತಲೇ ಇವೆ. ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಹೊಸ ಹೊಸ ಸಿನಿಮಾಗಳ ಪ್ರಾಜೆಕ್ಟ್‌ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ.

ಸಮಂತಾ ಇತ್ತೀಚಿಗೆ ತಮ್ಮ ಮಾಜಿ ಮಾವ ನಾಗಾರ್ಜುನ ಅವರ ಸ್ಟುಡಿಯೋ ಗೆ ಭೇಟಿ ನೀಡಿದ್ದು, ಈ ವಿಷಯ ಈಗ ಕುತೂಹಲವನ್ನು ಮೂಡಿಸಿದೆ. ಹೌದು ಸಮಂತಾ ಇತ್ತೀಚಿಗೆ ತಮ್ಮ ಮಾವ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೊಗೆ ಭೇಟಿಯನ್ನು ನೀಡಿದ್ದರು. ಸಮಂತಾ ಈ ಭೇಟಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ನಾಗಾರ್ಜುನ ಅವರ ಜೊತೆ ಮಾತನಾಡಲು ಹೋಗಿದ್ದರಾ?? ನಾಗಚೈತನ್ಯ ಹಾಗೂ ಸಮಂತಾ ನಡುವೆ ಮತ್ತೆ ಎಲ್ಲವೂ ಸರಿ ಹೋಗಲಿದೆಯಾ?? ಎನ್ನುವ ಪ್ರಶ್ನೆಗಳು ಹರಿದಾಡಿದ್ದವು.

ಆದರೆ ಇವೆಲ್ಲವುಗಳ ಬೆನ್ನಲ್ಲೇ ಎಲ್ಲಾ ಪ್ರಶ್ನೆ ಹಾಗೂ ಅನುಮಾನಗಳಿಗೆ ಉತ್ತರ ಸಿಕ್ಕಿದೆ. ಸಮಂತಾ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ನೀಡಿದ್ದು ತಮ್ಮ ವೈಯಕ್ತಿಕ ವಿಚಾರವಾಗಿ ಅಲ್ಲ ಬದಲಿಗೆ ತಮ್ಮ ಕೆಲಸದ ವಿಚಾರವಾಗಿ ಎನ್ನುವ ಮಾಹಿತಿಗಳು ಸಹಾ ಹೊರಗೆ ಬಂದಿವೆ. ಹಾಗಾದರೆ ಸಮಂತಾ ಅವರಿಗೆ ಅನ್ನಪೂರ್ಣ ಸ್ಟುಡಿಯೋ ದಲ್ಲಿ ಅಂತಹ ಕೆಲಸವಾದರೂ ಏನಿತ್ತು ?? ಎನ್ನುವ ವಿಚಾರವನ್ನು ಈಗ ತಿಳಿಯೋಣ ಬನ್ನಿ.

ಸಮಂತಾ ನಟನೆಯ ಶಾಕುಂತಲಂ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸಿನಿಮಾದ ಡಬ್ಬಿಂಗ್ ಕಾರ್ಯಗಳು ಆರಂಭವಾಗಿದೆ. ಈ ಸಿನಿಮಾದ ಡಬ್ಬಿಂಗ್ ಕೆಲಸಗಳು ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಸಮಂತಾ ಅವರು ತನ್ನ ಪಾತ್ರದ ಡಬ್ಬಿಂಗ್ ಕೆಲಸವನ್ನು ಮಾಡುವುದಕ್ಕಾಗಿ ಸ್ಟುಡಿಯೋ ಗೆ ಬಂದಿದ್ದರು. ಆದರೆ ಸಮಂತಾ ಸ್ಟುಡಿಯೋಗೆ ಭೇಟಿ ನೀಡಿದ ಬೆನ್ನಲ್ಲೇ ಅದು ಬಹಳಷ್ಟು ಗಾಸಿಪ್ ಗಳನ್ನು ಬಹಳ ಬೇಗ ಹುಟ್ಟು ಹಾಕಿತು.

Leave a Reply

Your email address will not be published. Required fields are marked *