ಬಾಲಿವುಡ್ ನ ಕ್ಯೂಟ್ ಕಪಲ್ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯು ಬಹಳ ಅದ್ದೂರಿಯಾಗಿ ನಡೆದಿದೆ. ಡಿಸೆಂಬರ್ 7 ರಿಂದ 10 ರ ವರೆಗೆ ಈ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನೆರವೇರಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಹೊಟೇಲ್ ನಲ್ಲಿ ನಡೆದಿದ್ದು, ಮದುವೆಗೆ ಹಲವು ಸೆಲೆಬ್ರಿಟಿಗಳು ಹಾಜರಾಗಿರಲಿಲ್ಲ. ಆದರೆ ಸೆಲೆಬ್ರಿಟಿಗಳ ಕಡೆಯಿಂದ ವಿಶೇಷವಾಗಿ ಕತ್ರೀನಾ ಅವರ ಮಾಜಿ ಬಾಯ್ ಫ್ರೆಂಡ್ ಗಳ ಕಡೆಯಿಂದು ದುಬಾರಿ ಬೆಲೆಯ ಅಪರೂಪದ ಉಡುಗೊರೆಗಳು ದೊರೆತಿವೆ ಎನ್ನುವುದು ಆಸಕ್ತಿಕರವಾಗಿದೆ.
ಹೌದು ಈ ಮಾತು ನಿಜ. ನಟಿ ಕತ್ರೀನಾ ಕೈಫ್ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆಗೆ ಪ್ರೀತಿಯಲ್ಲಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಆ ಪ್ರೀತಿ ಮುರಿದು ಬಿತ್ತು. ಬ್ರೇಕಪ್ ಆದರೂ ಕೂಡಾ ಇಬ್ಬರ ನಡುವೆ ಒಳ್ಳೆಯ ಸ್ನೇಹ ಮಾತ್ರ ಹಾಗೇ ಉಳಿದಿದೆ. ಇದಾದ ನಂತರ ಕತ್ರೀನಾ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದರು. ಆದರೆ ಅದು ಕೂಡಾ ಹೆಚ್ಚು ದಿನ ಉಳಿಯಲಿಲ್ಲ ಎನ್ನುವುದು ಗೊತ್ತಿರುವ ವಿಷಯವಾಗಿದೆ. ಆದರೆ ಸ್ನೇಹ ಮಾತ್ರ ಹಾಗೇ ಉಳಿದಿದೆ.
ಇನ್ನು ಈಗ ಕತ್ರೀನಾ ವಿಕ್ಕಿ ಯ ಮದುವೆಯ ವಿಶೇಷ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ವಿಕ್ಕಿ-ಕತ್ರೀನಾ ಜೋಡಿಗೆ ಮೂರು ಕೋಟಿ ರೂ.ಗಳ ರೇಂಜ್ ರೋವರ್ ಕಾರನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ. ವಿಕ್ಕಿ-ಕತ್ರೀನಾ ಮದುವೆ ಹಿನ್ನಲೆಯಲ್ಲಿ ಸಲ್ಮಾನ್ ರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಆದರೆ ನಟ ಸಲ್ಮಾನ್ ಅದ್ಯಾವುದರ ಬಗ್ಗೆಯೂ ಕೂಡಾ ತಲೆ ಕೆಡಿಸಿಕೊಳ್ಳಲಿಲ್ಲ. ಮಾಜಿ ಗೆಳತಿಗೆ ದುಬಾರಿ ಉಡುಗೊರೆ ನೀಡಿದ್ದಾರೆ.
ನಟ ರಣಬೀರ್ ಕಪೂರ್ ಅವರು ಕೂಡಾ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಏಕೆ ಅನ್ನೋದಾದ್ರೆ ನಟ ರಣಬೀರ್ ಕಪೂರ್ ಅವರು ತಮ್ಮ ಮಾಜಿ ಗೆಳತಿಗೆ ಮದುವೆ ಸಂದರ್ಭದಲ್ಲಿ 2.7 ಕೋಟಿ ರೂ. ಮೌಲ್ಯದ ಡೈಮಂಡ್ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ತಿಳಿದು ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಉಡುಗೊರೆ ಗಳ ಬಗ್ಗೆ ಇನ್ನೂ ವಿಕ್ಕಿ-ಕತ್ರೀನಾ ಜೋಡಿ ಏನೂ ಹೇಳಿಲ್ಲ.