ಮಹೇಶ್-ರಾಜಮೌಳಿ ಸಿನಿಮಾದ ಕುರಿತು ಶಾಕಿಂಗ್ ಸುದ್ದಿ: ರಾಜಮೌಳಿ ಇಂತ ನಿರ್ಧಾರ ಮಾಡಿದ್ದೇಕೆ??

Entertainment Featured-Articles Movies News

ಟಾಲಿವುಡ್ ಮಾತ್ರವೇ ಅಲ್ಲದೇ ವಿಶ್ವದ ಗಮನವನ್ನು ಸೆಳೆದಿರುವ ನಿರ್ದೇಶಕ ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾವನ್ನು ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಜೊತೆ ಮಾಡುವ ವಿಚಾರವು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಆದರೆ ಈ ಸಿನಿಮಾ ಪ್ರಾರಂಭಕ್ಕೂ ಮೊದಲೇ ನಟ ಮಹೇಶ್ ಬಾಬು ನಿರ್ದೇಶಕ ತ್ರಿವಿಕ್ರಮ್ ಅವರ ನಿರ್ದೇಶನದ ಹೊಸ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಸಿನಿಮಾ ಪೂರ್ತಿಯಾದ ಮೇಲೆ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ರಾಜಮೌಳಿ ಜೊತೆಗೆ ಸಿನಿಮಾ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಭಾರೀ ನಿರೀಕ್ಷೆಗಳೊಂದಿಗೆ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಬರಲು ಸಜ್ಜಾಗುತ್ತಿರುವಾಗಲೇ ಈ ಸಿನಿಮಾದ ಬಗ್ಗೆ ಒಂದು ಹೊಸ ಸುದ್ದಿ ಹರಿದಾಡತೊಡಗಿದ್ದು, ಅಭಿಮಾನಿಗಳು ಈ ಸುದ್ದಿ ಕೇಳಿ ಶಾ ಕ್ ಆಗಿದ್ದಾರೆ. ನಿರ್ದೇಶಕ ರಾಜಮೌಳಿ ಅವರು ತಮ್ಮ ಯಾವುದೇ ಸಿನಿಮಾ ಆಗಿರಲಿ ಅದನ್ನು ಪೂರ್ತಿ ಮಾಡಲು ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಮಹೇಶ್ ಬಾಬು ಜೊತೆಗಿನ ಸಿನಿಮಾಕ್ಕೆ ಮಾತ್ರ ಕಡಿಮೆ ಸಮಯ ನಿರ್ಧರಿಸಿದ್ದಾರೆ ಎನ್ನುವ ಹೊಸ ವಿಚಾರವು ಕುತೂಹಲ ಕೆರಳಿಸಿದೆ.

ರಾಜಮೌಳಿ ಆಪ್ತರು ಹೇಳಿದ್ದಾರೆ ಎನ್ನುವ ಸುದ್ದಿಯೊಂದನ್ನು ಕೆಲವು ಮಾದ್ಯಮಗಳು ಪ್ರಕಟ ಮಾಡಿವೆ. ಅದರ ಅನ್ವಯ ರಾಜಮೌಳಿ ಅವರು ಸಿನಿಮಾವನ್ನು ಆರರಿಂದ ಎಂಟು ತಿಂಗಳ ಅವಧಿಯಲ್ಲೇ ಸಿನಿಮಾ ಪೂರ್ತಿ ಮಾಡಲಿದ್ದು, ಮಹೇಶ್ ಬಾಬು ಜೊತೆ ನಿರ್ಮಾಣ ಮಾಡಲು ಹೊರಟಿರುವ ಈ ಸಿನಿಮಾ ಮುಂದಿನ ವರ್ಷದ ಕೊನೆಗೆ ಪ್ರೇಕ್ಷಕರ ಮುಂದೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಚಿಂತಿತರಾಗಿದ್ದಾರೆ.

ರಾಜಮೌಳಿ ಎಷ್ಟು ಹೆಚ್ಚು ಸಮಯ ತೆಗೆದುಕೊಂಡರೆ ಅಷ್ಟು ಒಳ್ಳೆಯ ಸಿನಿಮಾ ತೆರೆಗೆ ಬರುತ್ತದೆ ಎನ್ನುವುದನ್ನು ಬಾಹುಬಲಿ ಮತ್ತು ತ್ರಿಬಲ್ ಆರ್ ಸಿನಿಮಾಗಳು ಈಗಾಗಲೇ ಸಾಬೀತು ಮಾಡಿವೆ. ಅಂತಹುದರಲ್ಲಿ ಮಹೇಶ್ ಬಾಬು ಅವರ ಸಿನಿಮಾವನ್ನು ಕಡಿಮೆ ಅವಧಿಯಲ್ಲಿ ನಿರ್ದೇಶನ ಮಾಡುವುದು ಬೇಡ ಎಂದಿರುವ ಅಭಿಮಾನಿಗಳು ಹರಡಿರುವ ಸುದ್ದಿಗಳು ನಿಜ ಆಗಬಾರದೆಂದು ಮನವಿ ಮಾಡುತ್ತಾ, ಕನಿಷ್ಠ ಪಕ್ಷ ಎರಡು ವರ್ಷಗಳಾದರೂ ಸಿನಿಮಾ ಮಾಡಿ ಎಂದು ಹೇಳಿದ್ದಾರೆ.

Leave a Reply

Your email address will not be published.