ತೆಲುಗು ಸಿನಿಮಾ ರಂಗದಲ್ಲಿನ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ ನಟ ಮಹೇಶ್ ಬಾಬು. ನಟ ಮಹೇಶ್ ಬಾಬು ಅವರ ಹೊಸ ಸಿನಿಮಾ ಎಂದ ಕೂಡಲೇ ಒಂದು ನಿರೀಕ್ಷೆ ಸಹಜವಾಗಿಯೇ ಹುಟ್ಟುಕೊಳ್ಳುತ್ತದೆ. ಮಹೇಶ್ ಬಾಬು ಅವರ ಅಭಿಮಾನಿಗಳಂತೂ ತಮ್ಮ ಅಭಿಮಾನ ನಟನ ಸಿನಿಮಾಗಳಿಗಾಗಿ ಕಾಯುತ್ತಲಿರುತ್ತಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ಮುಂದಿನ ಹೊಸ ಸಿನಿಮಾಕ್ಕೆ ಮಹೇಶ್ ಬಾಬು ನಾಯಕನಾಗಲಿದ್ದಾರೆ ಎನ್ನಲಾಗಿದೆ.
ರಾಜಮೌಳಿ ಅವರ ನಿರ್ದೇಶನದಲ್ಲಿ ಮಹೇಶ ಬಾಬು ನಾಯಕನಾಗಲಿರುವ ವಿಚಾರವನ್ನು ಅಧಿಕೃತವಾಗಿ ನಟ ಮಹೇಶ್ ಬಾಬು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳುವ ಮೂಲಕ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದರು. ರಾಜಮೌಳಿ ಸಿನಿಮಾ ಎಂದ ಮೇಲೆ ಸಹಜವಾಗಿಯೇ ಕುತೂಹಲ ಕೆರಳುವುದು. ಪ್ರಸ್ತುತ ರಾಜಮೌಳಿ ಅವರು ತಮ್ಮ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ನ ಬಿಡುಗಡೆ ಹಾಗೂ ಪ್ರಮೋಷನ್ ಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.
ಆರ್ ಆರ್ ಆರ್ ನಂತರವೇ ಅವರು ಈ ಹೊಸ ಸಿನಿಮಾಕ್ಕೆ ಚಾಲನೆ ನೀಡಬಹುದು ಎನ್ನಲಾಗಿದೆ. ಆದರೆ ಇವೆಲ್ಲವುಗಳ ನಡುವೆಯೇ ರಾಜಮೌಳಿ ನಿರ್ದೇಶನ ಮಾಡಲಿರುವ, ಮಹೇಶ್ ಬಾಬು ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ ಸಿನಿಮಾದ ಕುರಿತಾದ ಒಂದು ಹೊಸ ವಿಷಯ ಹೊರ ಬಂದಿದ್ದು, ಅದು ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹೌದು ಏಕೆಂದರೆ ಈ ಸಿನಿಮಾದಲ್ಲಿ ಮಹೇಶ್ ಬಾಬು ಎದುರಿಗೆ ದಕ್ಷಿಣ ಸಿನಿ ರಂಗದ ಮತ್ತೋರ್ವ ಸ್ಟಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯಾರು ಆ ಸ್ಟಾರ್ ನಟ ಎನ್ನುವ ಪ್ರಶ್ನೆ ನಿಮಗೆ ಮೂಡಿದ್ದರೆ ಉತ್ತರ ಇಲ್ಲಿದೆ. ಮಹೇಶ್ ಬಾಬು ನಾಯಕನಾಗಲಿರುವ ಈ ಹೊಸ ಸಿನಿಮಾದಲ್ಲಿ ದಕ್ಷಿಣ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ, ವೈವಿದ್ಯಮಯ ಪಾತ್ರಗಳ ಮೂಲಕ ವಿಶಿಷ್ಟ ನಟ ಎನಿಸಿಕೊಂಡಿರುವ ತಮಿಳು ಸಿನಿಮಾಗಳ ಸ್ಟಾರ್ ನಟ ವಿಕ್ರಂ ಖಳ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ದೊಡ್ಡ ಸದ್ದನ್ನು ಮಾಡಿದೆ.
ನಾಯಕ ನಟನಾಗಿ ತಾರಾ ವರ್ಚಸ್ಸನ್ನು ಪಡೆದುಕೊಂಡಿರುವ ನಟ ವಿಕ್ರಮ್ ತೆಲುಗು ಸಿನಿಮಾ ದಲ್ಲಿ ವಿಲನ್ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂದರೆ ಸಹಜವಾಗಿಯೇ ನಿರೀಕ್ಷೆಗಳು ದುಪ್ಪಟ್ಟಾಗಿದೆ. ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ಖಳ ನಟನಾಗಿ ರಾಣಾ ದಗ್ಗುಬಾಟಿ ಪಡೆದ ಮೆಚ್ಚುಗೆಗಳನ್ನು ನಾವು ಮರೆಯುವಂತಿಲ್ಲ. ಈಗ ಅಂತಹುದೇ ಹೆಸರನ್ನು ವಿಕ್ರಮ್ ಕೂಡಾ ಪಡೆಯುವರಾ?? ಎನ್ನುವುದಕ್ಕೆ ಕಾಯಲೇಬೇಕಾದ ಅನಿವಾರ್ಯತೆ ಇದೆ.