ಮಹೇಶ್ ಬಾಬು ಜೊತೆ ನಟಿಸೋಕೆ ಶ್ರೀಲೀಲಾ 1ಕೋಟಿ ಕೇಳಿದ್ದು ನಿಜಾನಾ? ಅಸಲಿ ವಿಚಾರ ಆದ್ರೂ ಏನು?

Written by Soma Shekar

Published on:

---Join Our Channel---

ಕನ್ನಡದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟು ಅನಂತರ ನೆರೆಯ ತೆಲುಗು, ತಮಿಳು ಭಾಷೆಗಳಿಗೆ ಹಾರಿದ ಅನೇಕ ನಟಿಯರು ನಮ್ಮಲ್ಲಿದ್ದಾರೆ. ವಿಶೇಷವೆಂದರೆ ಈ ನಟಿಯರು ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರಾಗಿ ಜನಪ್ರಿಯತೆ ಪಡೆದು, ದೊಡ್ಡ ಮಟ್ಟಕ್ಕೆ ಬೆಳೆದು, ಬಹು ಬೇಡಿಕೆಯ ನಟಿಯರಾಗಿ ಬಿಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ನಟಿ ರಶ್ಮಿಕಾ ಮಂದಣ್ಣ. ಆದರೆ ಈಗ ಕನ್ನಡದಿಂದ ಸಿನಿ ರಂಗಕ್ಕೆ ಅಡಿಯಿಟ್ಟು ಮತ್ತೊಬ್ಬ ನಟಿಗೆ ತೆಲುಗು ಸಿನಿಮಾಗಳಲ್ಲಿ ಭರ್ಜರಿ ಅವಕಾಶಗಳು ಅರಸಿ ಬರುತ್ತಿವೆ‌. ಸ್ಟಾರ್ ಗಳ ಪಕ್ಕ ನಾಯಕಿಯಾಗುವ ಅದೃಷ್ಟ ಖುಲಾಯಿಸಿದೆ ಕೂಡಾ.

ಹೌದು, ಕಿಸ್ ಸಿನಿಮಾದ ಬೆಡಗಿ ಶ್ರೀ ಲೀಲಾ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಇಂಡಸ್ಟ್ರಿ ಗೆ ಅಡಿಯಿರಿಸಿದ್ದಾರೆ. ಸಿನಿಮಾ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲವಾದರೂ ನಟಿ ಶ್ರೀಲೀಲಾಗೆ ಮಾತ್ರ ಅದೃಷ್ಟ ಒಲಿದು ಬಂದಿದೆ. ತೆಲುಗಿನಲ್ಲಿ ಶ್ರೀಲೀಲಾಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಅರಸಿ ಬರುತ್ತಿದೆ. ಇನ್ನು ಈಗ ಒಂದು ಹೊಸ ಸದ್ದು ಸಖತ್ ಸದ್ದು ಮಾಡಿದೆ. ನಟಿ ಶ್ರೀಲೀಲಾಗೆ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗಿದೆ.

ವಿಶೇಷವೆಂದರೆ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಶ್ರೀಲೀಲಾ ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡಿದೆ. ಹೌದು, ಸುದ್ದಿಗಳ ಪ್ರಕಾರ ಶ್ರೀಲೀಲಾ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಒಂದು ಕೋಟಿ ಸಂಭಾವನೆ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಇಷ್ಟು ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆಯನ್ನು ಶ್ರೀಲೀಲಾ ಇಟ್ಟಿದ್ದಾದರೂ ಏಕೆ?? ಎನ್ನುವುದು ಒಂದು ಕಡೆ ಪ್ರಶ್ನೆಯಾದರೆ, ಇನ್ನೊಂದು ಕಡೆ ಇದು ನಿಜವೇನಾ? ಎನ್ನುವ ಪ್ರಶ್ನೆ ಮತ್ತೊಂದು ಕಡೆ ಮೂಡಿದೆ.

ಹಾಗಾದರೆ ಇದರ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿಯೋಣ, ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಅವರ ಸಿನಿಮಾಗಳಲ್ಲಿ ಇಬ್ಬರು ನಾಯಕಿಯರು ಇರುವುದು ಒಂದು ಟ್ರೆಂಡ್ ಆಗಿದೆ. ಅವರ ಈ ಹಿಂದಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್ ( ಅ, ಆ ),ಪ್ರಣೀತಾ ( ಅತ್ತಾರಿಂಟಿಕಿ ದಾರೇದಿ), ಈಶಾ‌ ರೆಬ್ಬಾ ( ಅರವಿಂದ ಸಮೇತ ) , ಹೀಗೆ ಎರಡನೇ ನಾಯಕಿಯರು ಇದ್ದು, ಆ ಸಿನಿಮಾಗಳು ಹಿಟ್ ಆದರೂ ಸಹಾ ಎರಡನೇ ನಾಯಕಿಯರಿಗೆ ದೊಡ್ಡ ಮಟ್ಟದ ಹೆಸರೇನು ಸಿಕ್ಕಿಲ್ಲ.

ಈಗ ಮಹೇಶ್ ಬಾಬು ಅವರ ಹೊಸ ಸಿನಿಮಾ ಕೂಡಾ ತ್ರಿವಿಕ್ರಮ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿದ್ದು, ಇದರಲ್ಲಿ ಶ್ರೀಲೀಲಾ ಅವರಿಗೆ ಎರಡನೇ ನಾಯಕಿಯ ಪಾತ್ರಕ್ಕೆ ಅವಕಾಶ ದಕ್ಕಿದೆ ಎನ್ನಲಾಗಿದ್ದು, ನೇರವಾಗಿ ಅದಕ್ಕೆ NO ಹೇಳುವುದು ಹೇಗೆ ಎನ್ನುವ ಕಾರಣದಿಂದ ಶ್ರೀಲೀಲಾ ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದೆ. ಅಲ್ಲದೇ ಶ್ರೀಲೀಲಾ ಕೈಯಲ್ಲಿ ಪ್ರಸ್ತುತ ನಾಲ್ಕು ಹೊಸ ಪ್ರಾಜೆಕ್ಟ್ ಗಳು ಇವೆ ಎನ್ನಲಾಗಿದೆ.

Leave a Comment