ಮಹೇಶ್ ಬಾಬು ಜೊತೆಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ? ಅನು ಸಿರಿಮನೆ ಕೊಟ್ರು ಭರ್ಜರಿ ಸರ್ಪ್ರೈಸ್ !!

Entertainment Featured-Articles News
60 Views

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ದೊಡ್ಡ ಹೆಸರು ಮಾಡಿ, ಅಷ್ಟೇ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿರುವ ಧಾರಾವಾಹಿ ಎಂದರೆ ಜೊತೆ ಜೊತೆಯಲಿ. ಈ ಧಾರಾವಾಹಿ ಆರಂಭವಾದ ಮೊದಲನೇ ವಾರದಲ್ಲಿ ಕಿರುತೆರೆ ಲೋಕದಲ್ಲಿ ಒಂದು ಹೊಸ ದಾಖಲೆಯನ್ನು ಬರೆದಿತ್ತು. ಅಷ್ಟು ಮಾತ್ರವೇ ಅಲ್ಲದೆ ಹಲವು ತಿಂಗಳುಗಳ ಕಾಲ ನಂಬರ್ ವನ್ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ನಟ-ನಟಿಯರು ತಮ್ಮ ಪಾತ್ರಗಳ ಮೂಲಕವೇ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಾಯಕಿ ಅನುಸಿರಿಮನೆ ಪಾತ್ರದ ಮೂಲಕ ಕಿರುತೆರೆಗೆ ಪ್ರವೇಶ ನೀಡಿದವರು ಮೇಘಾ ಶೆಟ್ಟಿ. ಅನು ಸಿರಿಮನೆ ಪಾತ್ರದ ಮೂಲಕ ಮನೆ ಮಗಳಂತೆ ಹೆಸರನ್ನು ಮಾಡಿದ ಮೇಘಾ ಶೆಟ್ಟಿ,‌ ದಿನಕಳೆದಂತೆ ಕರ್ನಾಟಕದ ಜನತೆಯ ಮೆಚ್ಚುಗೆ ಮತ್ತು ಆದರಗಳನ್ನು ಪಡೆದುಕೊಂಡು ಸಾಕಷ್ಟು ಜನಪ್ರಿಯತೆ ತನ್ನದಾಗಿಸಿಕೊಂಡಿದ್ದಾರೆ. ಕಿರುತೆರೆಯಿಂದ ತನ್ನ ನಟನಾ ವೃತ್ತಿಯನ್ನು ಆರಂಭಿಸಿದ ಮೇಘಾ ಶೆಟ್ಟಿಯವರು ಅನಂತರ ಸ್ಯಾಂಡಲ್ ವುಡ್ ಗೂ ಕಾಲಿಟ್ಟರು.

ಮೇಘಾ ಶೆಟ್ಟಿ ಅವರು ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ನಾಯಕಿಯಾಗಿ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಅದಲ್ಲದೆ ಲವ್ ಮಾಕ್ಟೇಲ್ ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾ ದಿಲ್ ಪಸಂದ್ ನಲ್ಲಿ ಕೂಡಾ ಮೇಘ ಶೆಟ್ಟಿ ನಾಯಕಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮೇಘ ಶೆಟ್ಟಿಯವರು ಮತ್ತೊಂದು ಪ್ಯಾಂಟ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ವಿಷಯ ಕೂಡ ಸಾಕಷ್ಟು ಸುದ್ದಿಯಾಗಿತ್ತು.

ಈಗ ಇವೆಲ್ಲವುಗಳ ನಡುವೆಯೇ ಮೇಘ ಶೆಟ್ಟಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು ಹೊಸ ಸಂಚಲನವನ್ನು ಸೃಷ್ಟಿಸಿದೆ. ಹೌದು, ನಟಿ ಮೇಘ ಶೆಟ್ಟಿಯವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದಾರೆ.

ಮೇಘಾ ಶೆಟ್ಟಿ ಹಾಗೂ ಮಹೇಶ್ ಬಾಬು ಅವರು ಜೊತೆಯಾಗಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸುವ ಜೊತೆಗೆ ನೀವು ಅವರೊಡನೆ ಹೊಸ ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವಿರಾ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಅಲ್ಲದೇ ಇಬ್ಬರ ಜೋಡಿ ಚೆನ್ನಾಗಿದೆ ಎಂದು ಹೊಗಳಿಕೆಯನ್ನು ನೀಡುತ್ತಿದ್ದಾರೆ. ಸದ್ಯಕ್ಕಂತೂ ಮೇಘಾ ಶೆಟ್ಟಿ ಶೇರ್ ಮಾಡಿರುವ ಫೋಟೋಗಳು ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು, ಈ ಫೋಟೋದ ಹಿಂದಿನ ರಹಸ್ಯ ಏನೆಂಬುದನ್ನು ಮೇಘಾ ಶೆಟ್ಟಿಯವರೇ ಹೇಳಬೇಕಿದೆ.

Leave a Reply

Your email address will not be published. Required fields are marked *