ಮಹಿಳೆಯನ್ನು ಹಾರಲು ಬಿಡಿ, ರೆಕ್ಕೆ ಕತ್ತರಿಸಬೇಡಿ: ಹಿಜಾಬ್ ಬಗ್ಗೆ ಮಿಸ್ ಯೂನಿವರ್ಸ್ ಹರ್ನಾಜ್ ಪ್ರತಿಕ್ರಿಯೆ

Entertainment Featured-Articles News

ಹಿಜಾಬ್ ವಿ ವಾ ದ ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವೇ ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಬಹುದೊಡ್ಡ ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ಪ್ರಸ್ತುತ ಪರಿಸ್ಥಿತಿಗಳು ಹಾಗೂ ಬೆಳವಣಿಗೆಗಳನ್ನು ಗಮನಿಸಿದಾಗ,‌ ಈ ವಿ ವಾ ದವು ಸದ್ಯಕ್ಕೆ ಮುಗಿಯುತ್ತದೆ ಎನ್ನುವ ಯಾವುದೇ ಸೂಚನೆಗಳಾಗಲೀ ಇಲ್ಲ. ದಿನದಿಂದ ದಿನಕ್ಕೆ ಹಿಜಾಬ್ ವಿಚಾರವು ಮತ್ತಷ್ಟು ಜಠಿಲವಾಗುತ್ತಾ ಸಾಗಿದೆ. ಇನ್ನು ಈ ವಿಚಾರವಾಗಿ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಮಾದ್ಯಮಗಳ ಮುಂದೆ, ಸೋಶಿಯಲ್ ಮೀಡಿಯಾಗಳ ಮುಖಾಂತರ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಾಜಕೀಯ ನಾಯಕರು, ಸಿನಿಮಾ‌ ಮಂದಿ ಹಾಗೂ ಇತರೆ ಮಂದಿ ಈ ವಿಚಾರದ ಬಗ್ಗೆ ಪರ, ವಿ ರೋ ಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದು ಇನ್ನೂ ಮುಂದುವರೆದಿದೆ ಕೂಡಾ. ಇದೇ ಕಾರಣದಿಂದಲೇ ಹಿಜಾಬ್ ನ ವಿಚಾರವು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಇದೇ ವಿಷಯವಾಗಿ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದು ಬಂದಿರುವ ಭಾರತದ ಸುಂದರಿ ಹರ್ನಾಜ್ ಸಂದು ತಮ್ಮ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹರ್ನಾಜ್ ಹಿಜಾವ್ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಮಿಸ್ ಯೂನಿವರ್ಸ್ ಹರ್ನಾಜ್ ಅವರಿಗೆ ಹಿಜಾಬ್ ನ ವಿಚಾರವಾಗಿ ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ‌ ಈ ವೇಳೆ ಕಾರ್ಯಕ್ರಮದ ಆಯೋಜಕರು ಯಾವುದೇ ರಾಜಕೀಯದ ವಿಚಾರವಾಗಿ ಪ್ರಶ್ನೆಗಳನ್ನು ಕೇಳಬಾರದು ಎನ್ನುವ ಸೂಚನೆಯನ್ನು ಪತ್ರಕರ್ತರಿಗೆ ನೀಡಿದ್ದಾರೆ. ಆದರೂ ತನಗೆ ಎದುರಾದ ಪ್ರಶ್ನೆಗೆ ಹರ್ನಾಜ್ ಉತ್ತರವನ್ನು ನೀಡಿದ್ದಾರೆ. ಹಾರ್ನಾಜ್ ಸಂದು ಮಹಿಳೆಯರನ್ನೇಕೆ ಹೀಗೆ ಟಾರ್ಗೆಟ್ ಮಾಡಲಾಗುತ್ತಿದೆ ? ಎಂದು ಪ್ರಶ್ನೆಯೊಂದನ್ನು ಮಾಡಿದ್ದಾರೆ.

ಮಿಸ್ ಯೂನಿವರ್ಸ್ ಹರ್ನಾಜ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಹಿಜಾಬ್ ವಿಚಾರದಲ್ಲಿ ಏಕೆ ಹೀಗೆ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮಹಿಳೆಯರನ್ನು ಅವರ ಇಷ್ಟದಂತೆ ಬದುಕುವುದಕ್ಕೆ ಬಿಡಿ. ಮಹಿಳೆಯರು ತಮ್ಮ ಜೀವನದಲ್ಲಿ ಒಂದು ಸಾಧನೆ ಮಾಡಲು, ಅವರು ತಮ್ಮ ಗುರಿಯನ್ನು ತಲುಪಲು ಇಂತಹ ಕಾರಣಗಳನ್ನು ನೀಡಿ ಅಡ್ಡಿ ಉಂಟು ಮಾಡಬೇಡಿ. ಮಹಿಳೆಯನ್ನು ಸ್ವಚ್ಛಂದವಾಗಿ ಹಾರಾಡಲು ಬಿಡಿ, ಆಕೆಯ ರೆಕ್ಕೆ ಕತ್ತರಿಸುವ ಕೆಲಸ ಮಾಡಬೇಡಿ ಎಂದಿದ್ದಾರೆ.

Leave a Reply

Your email address will not be published.