ಮಹಾ ಶಿವರಾತ್ರಿ ಪುಣ್ಯ ದಿನದಂದು ಅವಳಿ ಮಕ್ಕಳ ತಾಯಿಯಾದ ನಟಿ ಅಮೂಲ್ಯ ಜಗದೀಶ್

Entertainment Featured-Articles News

ಕನ್ನಡ ಸಿನಿ ರಂಗದ ಗೋಲ್ಡನ್ ಕ್ವೀನ್ ಖ್ಯಾತಿಯ ನಟಿ ಅಮೂಲ್ಯ ಅವರು ಗರ್ಭಿಣಿಯಾಗಿರುವ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಕೆಲವು ದಿನಗಳ ಹಿಂದೆಯಷ್ಟೇ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಜೊತೆ ಇರುವ ಬೇಬಿ ಬಂಪ್ ಫೋಟೋವನ್ನು ಸಹಾ ಶೇರ್ ಮಾಡಿಕೊಂಡಿದ್ದರು. ಅವರ ಅಭಿಮಾನಿಗಳು, ಕನ್ನಡ ಸಿನಿರಂಗದ ಕಲಾವಿದರಿಂದ, ಕೊರೊನಾ ವಾರಿಯರ್ಸ್ ಗಳಿಂದ ಹೀಗೆ ವಿವಿಧ ರೀತಿಯಲ್ಲಿ ಸೀಮಂತ ಕಾರ್ಯಕ್ರಮಗಳು ಸಹಾ ನಡೆದಿತ್ತು, ಈ ವಿಚಾರಗಳು ಸುದ್ದಿಯಾಗಿದ್ದವು.

ಇಂದು ಶಿವರಾತ್ರಿ ಯ ಈ ಪರ್ವದಿನದಂದು ನಟಿ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಅವರ ಪತಿ ಜಗದೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ, ಸಂತೋಷದ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದು, ಶುಭ ಹಾರೈಕೆಗಳು ಹರಿದು ಬರುತ್ತಿದ್ದು , ಅಮೂಲ್ಯ ಅವರ ಅಭಿಮಾನಿಗಳು ಸಹಾ ಸಂತೋಷದಿಂದ ಶುಭ ಕೋರಿದ್ದಾರೆ.

ಅಮೂಲ್ಯ ಅವರ ಪತಿ ಜಗದೀಶ್ ಅವರು ತಮ್ಮ ಪೋಸ್ಟ್ ನಲ್ಲಿ, “ಮಹಾಶಿವರಾತ್ರಿಯ ಪುಣ್ಯ ದಿನದಂದು ಅವಳಿ ಮಕ್ಕಳೊಂದಿಗೆ Amulya ಆಶೀರ್ವದಿಸಲ್ಪಟ್ಟಿದ್ದಾರೆ .ಶಿವರಾತ್ರಿಯ ಶುಭ ದಿನದಂದು ಮಹಾದೇವನ ಆಶೀರ್ವಾದವಾಗಿದ್ದು ಸಂತೋಷ ತಂದಿದೆ. ತಾಯಿ ಮತ್ತು ಮಕ್ಕಳಿಬ್ಬರೂ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು, ಈ ಜೀವನದ ಪ್ರಯಾಣದುದ್ದಕ್ಕೂ ನಮ್ಮ ಮೇಲೆ ನಿಮ್ಮ ಶುಭ ಹಾರೈಕೆಗಳಿರಲಿ” ಎಂದು ಬರೆದುಕೊಂಡಿದ್ದಾರೆ.

ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದ ನಟಿ ಅಮೂಲ್ಯ ಅವರು ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು. ಅನಂತರ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡ ಅಮೂಲ್ಯ ಅವರು ತಮ್ಮ ವಿವಾಹದ ನಂತರ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ತಮ್ಮ ಮಾವ ಹಾಗೂ ಪತಿಗೆ ರಾಜಕೀಯದ ವಿಚಾರದಲ್ಲಿ ಬೆಂಬಲ ನೀಡುತ್ತಾ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ.

Leave a Reply

Your email address will not be published.