ಮಹಾಶಿವನ ಆರಾಧನೆ ಮಾಡುವ ಮುನ್ನ, ಈ ನಿಯಮಗಳನ್ನು ತಪ್ಪದೇ ಪಾಲಿಸಿ

Written by Soma Shekar

Published on:

---Join Our Channel---

ಲಯಕಾರನಾದ ಪರಮ ಶಿವನು ಬಹಳ ದಯೆಯುಳ್ಳ ದೇವನು, ಭಕ್ತರ ಭಕ್ತಿಯಲ್ಲಿ ಕರಗಿ ಕೇಳಿದ ವರ ನೀಡುವ ಬೋಳಾ ಶಂಕರನು ಪರಮ‌ ಶಿವನು. ಮಹಾ ಶಿವನನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಸರ್ವ ದುಃಖಗಳನ್ನು ಹರಿಸುತ್ತಾನೆ ಎನ್ನುವುದು ನಂಬಿಕೆಯಾಗಿದೆ. ಶಿವನ ಆರಾಧನೆಯಿಂದ ಸರ್ವ ಸಂ ಕ ಷ್ಟಗಳು ದೂರವಾಗುತ್ತದೆ. ದೇವರ ದೇವನಾದ ಮಹಾಶಿವನನ್ನು ಭಕ್ತರು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಶಿವ, ಶಂಕರ, ಗಂಗಾಧರ, ನೀಲ ಕಂಠ, ಚಂದ್ರ ಶೇಖರ, ಸೋಮೇಶ್ವರ ಹೀಗೆ ನಾನು ಹೆಸರುಗಳಿಂದ ಕರೆದು ಆರಾಧಿಸುತ್ತಾರೆ.

ಯಾವ ಪ್ರಾಂತ್ಯದಲ್ಲಿ, ಭಕ್ತರಿಂದ ಮಹಾಶಿವನು ಹೇಗೆ ಆರಾಧಿಸಲ್ಪಡುವನೋ ಅಲ್ಲಿ ಅದೇ ಹೆಸರಿನಿಂದಲೇ, ರೂಪದಿಂದಲೇ ಕರೆಯಲ್ಪಟ್ಟು ಪೂಜನೀಯ ಎನಿಸಿಕೊಂಡಿದ್ದಾನೆ. ಆದರೆ ಮಹಾಶಿವನನ್ನು ಆರಾಧನೆ ಮಾಡುವ ಮೊದಲು ನಾವು ಕೆಲವು ವಿಶೇಷ ನಿಯಮಗಳು ಅಥವಾ ಅಂಶಗಳ ಕಡೆಗೆ ಗಮನವನ್ನು ನೀಡಬೇಕಾಗಿದೆ. ಶಿವರಾಧಾನೆ ಎನ್ನುವುದು ಸರಳ ವಿಧಾನವೇ ಆದರೂ, ನಾವು ಕೆಲವು ನಿಯಮಗಳನ್ನು ಪಾಲನೆ ಮಾಡುವುದು ಅನಿವಾರ್ಯ. ಹಾಗಾದರೆ ಯಾವುದು ಆ ಪ್ರಮುಖವಾದ ನಿಯಮಗಳು ಎಂದು ತಿಳಿಯೋಣ ಬನ್ನಿ.

ಎಲ್ಲದಕ್ಕಿಂತ ಮೊದಲು ಶಿವಾರಾಧನೆ ಮಾಡಲು ಶುದ್ಧವಾದ ಮನಸ್ಸು, ಶರೀರ ಎರಡೂ ಮುಖ್ಯ. ಅಲ್ಲದೇ ಶಿವನ ಆರಾಧನೆಯ ವೇಳೆ ಶುಭ್ರವಾದ ವಸ್ತ್ರ ವಿಶೇಷವಾಗಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಆರಾಧನೆಯನ್ನು ಮಾಡಿ. ಶಿವಾರಾಧನೆ ಮಾಡುವಾಗ ನೆಲದ ಮೇಲೆ ಒಂದು ಆಸನವನ್ನು ಹಾಕಿ ಅದರ ಮೇಲೆ ಕುಳಿತು ಆರಾಧನೆಯನ್ನು ಮಾಡುವುದು ಒಂದು ಉತ್ತಮವಾದ ವಿಧಾನ ಎಂದು ಹೇಳಲಾಗಿದೆ. ಸಾಧ್ಯವಾದರೆ ದರ್ಭಾಸನವನ್ನು ಬಳಸಿ.

ಶಿವನನ್ನು ಸದಾ ಪೂರ್ವ ಅಥವಾ ಉತ್ತರ ಮುಖವಾಗಿ ಪೂಜೆ ಮಾಡಬೇಕು. ಶಿವ ಪೂಜೆ ಮಾಡುವ ಸಮಯದಲ್ಲಿ ಮನಸ್ಸಿನಲ್ಲಿ ಯಾವುದೇ ರೀತಿಯ ಕೋ ಪ, ಅ ಸೂ ಯೆ ಅಥವಾ ಬೇರೆ ಯಾವುದೇ ರೀತಿಯ ಮನೋ ವಿ ಕಾ ರಗಳಿಗೆ ಕಾರಣವಾಗುವ ಭಾವನೆಗಳನ್ನು ಹೊಂದಿಲ್ಲದೇ, ಮನಸ್ಸಿನಲ್ಲಿ ಆ ಪರಮ ಶಿವನನ್ನು ತುಂಬಿಕೊಂಡು ಧ್ಯಾನಿಸಬೇಕು, ಆರಾಧಿಸಬೇಕು.

ಶಿವನ ಆರಾಧನೆ ಮಾಡುವ ಸಮಯದಲ್ಲಿ ಮಹಾಶಿವನಿಗೆ ಅತ್ಯಂತ ಪ್ರೀತಿಪಾತ್ರವಾಗಿರುವ ಭಸ್ಮ, ಬಿಲ್ವಪತ್ರೆ ಹಾಗೂ ರುದ್ರಾಕ್ಷಿಯನ್ನು ಸಮರ್ಪಿಸಿ, ನಿಮ್ಮ ಹಣೆಯ ಮೇಲೆ ವಿಭೂತಿಯನ್ನು ಧಾರಣೆ ಮಾಡಿ, ಕೊರಳಿಗೆ ರುದ್ರಾಕ್ಷಿಯನ್ನು ಧರಿಸಿ, ಅನಂತವಾದ ಭಕ್ತಿ ಶ್ರದ್ಧೆಯಿಂದ ಪರಮಶಿವನ ಆರಾಧನೆಯನ್ನು ಮಾಡಿ. ಮಹಾ ಶಿವನ ಪೂಜೆಯಲ್ಲಿ ಎಳ್ಳನ್ನೇ ಆಗಲಿ ಅಥವಾ ಸಂಪಿಗೆಯ ಹೂವನ್ನೇ ಆಗಲೀ ಎಂದೂ ಸಹಾ ಬಳಸಬೇಡಿ.

ಶಿವನ ಅನುಗ್ರಹವನ್ನು ಪಡೆಯಲು ಯಾವಾಗಲೂ ಹಾಲು ಬೆರೆಸಿದ ನೀರಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ವನ್ನು ಮಾಡಿ. ಹಾಲಿನ ಪ್ಯಾಕೆಟ್ ಗಳಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಡಿ. ಶಿವಲಿಂಗಕ್ಕೆ ಅಭಿಷೇಕ ಮಾಡುವುದಕ್ಕೆ ಪ್ರತ್ಯೇಕವಾಗಿ ಒಂದು ಪಾತ್ರೆ ಅಥವಾ ಬಟ್ಟಲನ್ನು ಇಡಿ, ಅದಕ್ಕೆ ಹಾಲನ್ನು ಹಾಕಿದ ನಂತರ ಅಭಿಷೇಕವನ್ನು ಮಾಡಿ. ಶಿವನಿಗೆ ಅಭಿಷೇಕ ಮಾಡುವ ಹಾಲು ಸದಾ ತಣ್ಣಗಿರಲಿ ತಾಜಾ ಇರಲಿ. ಕಾಯಿಸಿ, ಆರಿಸಿದ ಹಾಲನ್ನು ಬಳಸಬೇಡಿ.

ಶಿವಲಿಂಗವನ್ನು ಒಂದು ಕಡೆ ಇಟ್ಟು ಪೂಜೆ ಅಭಿಷೇಕ ಮಾಡಿದ ನಂತರ ಆಗಾಗ ಅದರ ಸ್ಥಾನವನ್ನು ಬದಲಿಸಬೇಡಿ. ಹಾಗೇನಾದರೂ ಬದಲಾಯಿಸುವ ಪರಿಸ್ಥಿತಿ ಬಂದರೆ ಅಥವಾ ಅ‌ನಿವಾರ್ಯವಾದರೆ ಮೊದಲು ಶಿವಲಿಂಗವನ್ನು ಹಾಲು ಮತ್ತು ಗಂಗಾಜಲದಿಂದ ಶುಭ್ರ ಮಾಡಿ, ಆ ಮಹಾಶಿವನಿಗೆ ಕ್ಷಮಾಪಣೆಯನ್ನು ಹೇಳಿ ಸ್ಥಾನವನ್ನು ಬದಲಿಸುವ ಕಾರ್ಯವನ್ನು ಮಾಡಿ.

ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಶಿವನ ಆರಾಧನೆಯನ್ನು ಮಾಡುವ ಪರಿಪಾಠವನ್ನು ರೂಡಿಸಿಕೊಳ್ಳುವುದಾದರೆ, ಯಾವುದೇ ಕಾರಣಕ್ಕೂ ಶಿವಲಿಂಗವನ್ನು ಒಂಟಿಯಾಗಿ ಇಡಬೇಡಿ. ಆ ಮಹಾಶಿವನ ಜೊತೆಗೆ ಆತನ ವಾಹನ ನಂದಿ, ಪತ್ನಿ ಮಹಾದೇವಿ ಪಾರ್ವತಿ ಹಾಗೂ ಶಿವಪುತ್ರ ಗಣೇಶನನ್ನು ಕೂಡಾ ಪ್ರತಿಷ್ಠಾಪನೆ ಮಾಡಿ ಆರಾಧನೆಯನ್ನು ಮಾಡಿ.

Leave a Comment