ಮಹಾಯುದ್ಧಗಳು ನಡೆದ ದಿನಾಂಕಗಳಲ್ಲಿ ಅಡಗಿದೆ ಮಹಾ ರಹಸ್ಯ: ವೈರಲ್ ಆಯ್ತು ಗಣಿತ ಸೂತ್ರ

Entertainment Featured-Articles News Wonder

ರಷ್ಯಾ ಮತ್ತು ಉಕ್ರೇನ್ ನಡುವೆ ಯು ದ್ಧ ಆರಂಭವಾಗಿ ಈಗಾಗಲೇ 16 ದಿನಗಳು ಕಳೆದಿವೆ. ಅಲ್ಲದೇ ಯು ದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಕಾಣಿಸುತ್ತಿಲ್ಲ. ರಷ್ಯಾ ಉಕ್ರೇನ್ ನ ಮೇಲೆ ನಿರಂತರವಾಗಿ ದಾ ಳಿ ಯನ್ನು ನಡೆಸುತ್ತಿದೆ. ಈ ಭೀಕರ ಯುದ್ಧದ ನಡುವೆಯೇ ಪ್ಯಾಟ್ರಿಕ್ ಬೆಟ್ ಡೇವಿಡ್ ಎನ್ನುವ ಟ್ವಿಟರ್ ಖಾತೆಯ ಬಳಕೆದಾರರು ವಿಶ್ವದ ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ ಹಾಗೂ ರಷ್ಯಾ ಈಗ ಉಕ್ರೇನ್ ಮೇಲೆ ದಾಳಿ ನಡೆಸಿದ ದಿನಾಂಕದ ನಡುವೆ ಇರುವ ವಿಲಕ್ಷಣವಾದ ಸಾಮ್ಯತೆಯೊಂದನ್ನು ಹಂಚಿಕೊಂಡಿದ್ದು ಇದು ಎಲ್ಲರನ್ನೂ ಬೆರಗುಗೊಳಿಸುತ್ತಿದೆ.

ಜುಲೈ 28, 1914 ರಲ್ಲಿ ಆಸ್ಟ್ರಿಯಾ- ಹಂಗೇರಿ ಸರ್ಬಿಯಾದ ಮೇಲೆ ದಾಳಿ ನಡೆಸಿದಾಗ ಮೊದಲ ವಿಶ್ವ ಯು ದ್ಧ ಪ್ರಾರಂಭವಾಗಿತ್ತು. ಪ್ಯಾಟ್ರಿಕ್ ಈ ದಿನಾಂಕವನ್ನು ಕೂಡಿದಾಗ ಅಂದರೆ 28+07+19+14 ಅನ್ನು ಕೂಡಿದಾಗ ಅವರಿಗೆ ಬಂದ ಮತ್ತ 68 ಆಗಿದೆ. ಅನಂತರ ಅವರು ಎರಡನೇ ವಿಶ್ವಯುದ್ಧ ಪ್ರಾರಂಭವಾದ ದಿನಾಂಕವನ್ನು ತೆಗೆದುಕೊಂಡು ಅದನ್ನು ಕೂಡಾ ಸಂಕಲನ ಮಾಡಿದ್ದಾರೆ ಅಂದರೆ 01+08+19+ 39 ಅನ್ನು ಕೂಡಿದಾಗಲೂ ಅವರಿಗೆ ಸಿಕ್ಕಿರುವ ಫಲಿತಾಂಶ 68 ಆಗಿದೆ. ಮೂರನೆಯದಾಗಿ ಅವರು ಸಂಕಲನ ಮಾಡಿದ ದಿನಾಂಕ ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ.

ರಷ್ಯಾವು ಉಕ್ರೇನ್ ನ ಮೇಲೆ ದಾಳಿಯನ್ನು ನಡೆಸಿದ ದಿನಾಂಕವನ್ನು ಬರೆದು ಕೊಂಡು, ಅಂದರೆ 22+02+20+22 ಅನ್ನು ಸಂಕಲನ ಮಾಡಿದ್ದು, ಇಲ್ಲೂ ಸಹಾ ಅವರಿಗೆ ಸಿಕ್ಕ ಉತ್ತರವು 68 ಆಗಿದೆ. ಈ ರೀತಿ ಮೂರು ಯುದ್ಧಗಳ ಸಮಯದಲ್ಲಿ ಯುದ್ಧ ನಡೆದ ದಿನಾಂಕ ಹಾಗೂ ವರ್ಷವನ್ನು ಕೂಡಿದಾಗ ಸಿಕ್ಕ ಉತ್ತರ ಮಾತ್ರ ಒಂದೇ ಆಗಿದೆ ಪ್ಯಾಟ್ರಿಕ್ ಅವರು ಈ ವಿಚಾರವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು ಇದು ಈಗ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.

ಅವರು ಫೋಟೋ ಹಂಚಿಕೊಂಡು ಅದರ ಜೊತೆಗೆ ಪ್ರತಿಯೊಂದು ಸಹಾ ನನಗೆ ಗಣಿತದ ಸೂತ್ರದಂತೆ, ಆದರೆ ಇದು ಬಹಳ ವಿಚಿತ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ಅವರು ಶೇರ್ ಮಾಡಿದ ಫೋಟೋ, ಮಾಡಿದ ಲೆಕ್ಕಾಚಾರವನ್ನು ನೋಡಿ ನೆಟ್ಟಿಗರು ಇದು ಅದ್ಭುತ ಎಂದಿದ್ದಾರೆ. ಅನೇಕ ಮಂದಿ ಅವರ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಬಹಳಷ್ಟು ಜನ ಕಾಮೆಂಟ್ ಮಾಡಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.