ಮಳೆಯ ಕುರಿತಾಗಿ ಬಹಳ ಆಘಾತಕಾರಿ ಭವಿಷ್ಯವಾಣಿ ನುಡಿದ ಕೋಡಿ ಮಠದ ಶ್ರೀಗಳು

Written by Soma Shekar

Published on:

---Join Our Channel---

ರಾಜ್ಯದ ಹಲವೆಡೆಗಳಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಜನರನ್ನು ಈಗಾಗಲೇ ಸಾಕಷ್ಟು ಹೈರಾಣಾಗಿ ಮಾಡಿದೆ. ಜನರು ಈ ಮಳೆ ಯಾವಾಗ ನಿಲ್ಲುತ್ತದೆ ಎಂದು ಕಾಯುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಬಹಳಷ್ಟು ಕಡೆಗಳಲ್ಲಿ ಕೆರೆ ,ಕಟ್ಟೆ , ಬಾವಿಗಳು ತುಂಬಿ ಹೋಗಿದೆ. ಮಳೆ ಕಾಣದ ಪ್ರದೇಶಗಳಲ್ಲಿ ಕೂಡಾ ಭಾರಿ ಮಳೆ ಉಂಟಾಗಿದ್ದು, ಹಳೆಯ ಮನೆಗಳು ಕುಸಿದು ಬಿದ್ದಿದ್ದು, ಜನರು ಮಳೆಗೆ ಹಿಡಿ ಶಾಪ ಹಾಕುವಂತಾಗಿದೆ.

ಮಳೆಯ ಆರ್ಭಟ ಆದಷ್ಟು ಬೇಗ ನೀಡಲಿ ಎಂದು ಪ್ರಾರ್ಥನೆ ಮಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಸುಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ಕೋಡಿ ಮಠದ ಡಾ. ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಕುರಿತಾಗಿ ಭವಿಷ್ಯವಾಣಿ ಒಂದನ್ನ ನುಡಿದಿದ್ದಾರೆ. ಕೋಡಿ ಶ್ರೀ ಗಳು ತಮ್ಮ ಈ ಭವಿಷ್ಯವಾಣಿಯ ಮೂಲಕ ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಕುರಿತಾಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಕಾರ್ತಿಕ ಮುಗಿಯುವ ವರೆಗೂ ಮಳೆ ನಿಲ್ಲುವುದಿಲ್ಲ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ಇನ್ನು ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ, ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಪ್ರಸ್ತುತ ಪ್ರಕೃತಿ ವಿಕೋಪಗೊಂಡಿದೆ. ಈಗ ನಾವೇನು ಮಾಡಲಾಗುವುದಿಲ್ಲ. ಇನ್ನೂ ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಶ್ರೀಗಳು ಜನತೆಗೆ ಮಳೆಯ ಕುರಿತಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಕೋಡಿಮಠದ ಶ್ರೀಗಳು ಭವಿಷ್ಯವಾಣಿಯನ್ನು ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ.

ಕಳೆದ ವರ್ಷ ಕೂಡಾ ಅವರು ಮಳೆಯ ಕುರಿತಾಗಿ ಭವಿಷ್ಯವಾಣಿಯನ್ನು ನೀಡಿದರಲ್ಲದೇ, ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತಾಗಿಯೂ ಅವರು ಬಹಳಷ್ಟು ವಿಚಾರಗಳನ್ನು ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ಕೊರೋನಾದ ಕುರಿತಾಗಿಯೂ ಸಹಾ ಆಗಾಗ ಅವರು ಭವಿಷ್ಯವಾಣಿಯ ಮೂಲಕ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದನ್ನು ಸಹಾ ನಾವಿಲ್ಲಿ ಸ್ಮರಿಸಬಹುದಾಗಿದೆ.

Leave a Comment