ಮಳೆಗಾಲದಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವರೇ?ಹಾಗಾದರೆ ಫಾಲೋ ಮಾಡಿ ಈ ಸರಳ ಟಿಪ್ಸ್

0 8

ಮಳೆಗಾಲ ಬಂತು ಎಂದರೆ ಅದರ ಜೊತೆಗೆ ಕೆಲವು ರೋಗಗಳ ಆಗಮನ ಕೂಡಾ ಆಗುತ್ತದೆ ಎನ್ನಲಾಗುತ್ತದೆ. ಈ ಕಾಲದಲ್ಲಿ ಸೊಳ್ಳೆಗಳು ಹೆಚ್ಚು, ಅವು ಕಚ್ಚುವುದರಿಂದ ಮಲೇರಿಯಾ , ಡೆಂಗ್ಯೂ, ಚಿಕನಗುನ್ಯಾ ದಂತಹ ರೋಗಗಳ ಭೀ ತಿ ಯೂ ಹೆಚ್ಚಾಗುತ್ತದೆ. ಅಲ್ಲದೇ ಈ ವೇಳೆಯಲ್ಲಿ ಉಷ್ಣಾಂಶದಲ್ಲಿ ಉಂಟಾಗುವ ಏರಿಳಿತದ ಕಾರಣ ಶೀತ, ನೆಗಡಿ , ಕೆಮ್ಮುಗಳಿಂದ ಮಕ್ಕಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪ್ರಸ್ತುತ ಒಂದು ಕಡೆ ಕೊರೊನಾ ಆ ತಂಕ ಕೂಡಾ ಇರುವುದರಿಂದ ವೈದ್ಯರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲಹೆಗಳನ್ನು ನೀಡುತ್ತಿದ್ದಾರೆ.

ಮಳೆಗಾಲದಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಕಠಿಣವಾದ ಕಾರ್ಯ ಎಂದೇ ಹೇಳಬಹುದು. ಆಡುವ ಮಕ್ಕಳು ಈ ಕಾಲದಲ್ಲಿ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದ್ದರಿಂದಲೇ ಬಹಳಷ್ಟು ಮನೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ನಿಮ್ಮ ಮನೆಗಳಲ್ಲಿ ಸಹಾ ಮಕ್ಕಳಿದ್ದರೆ ಕೆಲವು ಸುಲಭವಾದ ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಕ್ಕಳನ್ನು ಅನಾರೋಗ್ಯದಿಂದ ದೂರವಿಡಬಹುದಾಗಿದೆ. ಆ ಕೆಲವು ಸರಳವಾದ ಟಿಪ್ಸ್ ಗಳ ಮಾಹಿತಿ ಇಲ್ಲಿದೆ.

ಧರಿಸುವ ವಸ್ತ್ರ ಕಡತಕ್ಕೆ ಗಮನವಿರಲಿ:
ಮಳೆಗಾಲದಲ್ಲಿ ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸ ಬೇಕಾಗಿದೆ. ಈ ಕಾಲದಲ್ಲಿ ಒಮ್ಮೆ ಬಿಸಿಲು, ಮತ್ತೊಮ್ಮೆ ಚಳಿ ಹೀಗೆ ಉಷ್ಣಾಂಶದಲ್ಲಿ ಏರಿಳಿತಗಳು ಉಂಟಾಗುತ್ತಲೇ ಇರುತ್ತದೆ. ಅಲ್ಲದೇ ಈ ಕಾಲದಲ್ಲಿ ಸೊಳ್ಳೆಗಳು ಹೆಚ್ಚಾಗಿರುತ್ತದೆ. ಆದ್ದರಿಂದಲೇ ಮಕ್ಕಳಿಗೆ ಹೆಚ್ಚಾಗಿ ಬೆಚ್ಚಗಿಡುವ ಹತ್ತಿ ಬಟ್ಟೆಯನ್ನು ಧರಿಸಲು ನೀಡುವುದು ಉತ್ತಮವಾಗಿರುತ್ತದೆ. ಅವರ ದೇಹವನ್ನು ಸರಿಯಾದ ರೀತಿಯಲ್ಲಿ ಮುಚ್ಚುವ ವಸ್ತ್ರಗಳನ್ನು ಧರಿಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕು.

ಸೊಳ್ಳೆಗಳಿಂದ ರಕ್ಷಣೆ ನೀಡಬೇಕು: ಮಳೆಗಾಲದಲ್ಲಿ ಸೊಳ್ಳೆಗಳು ಬಹಳ ಸುಲಭವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದಲೇ ನಿಮ್ಮ ಮನೆಯ ಸುತ್ತಮುತ್ತಲೂ ನೀರು ಸಂಗ್ರಹವಾಗದಂತೆ ಎಚ್ಚರವನ್ನು ವಹಿಸಿ. ಕೋಣೆಗಳಲ್ಲಿ ಸೊಳ್ಳೆಗಳನ್ನು ದೂರ ಮಾಡುವ ಲಿಕ್ವಿಡ್ ಗಳನ್ನು ಬಳಸಿ. ಮಕ್ಕಳ ದೇಹವನ್ನು ಮುಚ್ಚುವ ಬಟ್ಟೆಗಳನ್ನು ಬಳಸಿ. ರಾತ್ರಿ ವೇಳೆ ಆದಷ್ಟು ಸೊಳ್ಳೆ ಪರದೆಯನ್ನು ಬಳಸುವುದು ಸೂಕ್ತ.

ಪ್ರತಿದಿನ ಸ್ನಾನ ಮಾಡುವುದು ಅತ್ಯಾವಶ್ಯಕ:
ಮಳೆಗಾಲದಲ್ಲಿಯೂ ಎಂದಿನಂತೆ ಮಕ್ಕಳು ಪ್ರತಿದಿನ ಸ್ನಾನವನ್ನು ಮಾಡುವುದು ಅವರ ಆರೋಗ್ಯಕ್ಕೆ ಉತ್ತಮ. ಮಕ್ಕಳಿಗೆ ಸ್ನಾನ ಮಾಡಿಸುವ ಮೊದಲು ಬೆಚ್ಚಗಿನ ಎಣ್ಣೆಯಿಂದ ಅವರ ದೇಹಕ್ಕೆ ಮಾಲಿಶ್ ಮಾಡುವುದು ಒಂದು ಉತ್ತಮವಾದ ಅಭ್ಯಾಸವಾಗಿರುತ್ತದೆ. ಇದು ಅವರ ದೇಹಾರೋಗ್ಯವನ್ನು ಕಾಪಾಡಲು ನೆರವನ್ನು ನೀಡುತ್ತದೆ.

Leave A Reply

Your email address will not be published.