ಮಲೆಯಾಳಂ, ಹಿಂದಿ ನಂತರ ಈಗ ಮತ್ತೊಂದು ಭಾಷೆಗೆ ಡಬ್ ಆಯ್ತು ಕನ್ನಡದ ನಾಗಿಣಿ 2 ಸೀರಿಯಲ್!!

0 4

ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ಪ್ರಮುಖ ಮೂಲಗಳು ಎನ್ನುವುದಾದರೆ ಅವು ಧಾರಾವಾಹಿಗಳು ಎಂದು ಅನುಮಾನವೇ ಇಲ್ಲದೇ ಹೇಳಬಹುದು. ಕಿರುತೆರೆಯ ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡುವ ಅನೇಕ ಧಾರಾವಾಹಿಗಳು ಈಗಾಗಲೇ ಪ್ರಸಾರವಾಗುತ್ತಿವೆ. ಅಲ್ಲದೇ ಈ ಧಾರಾವಾಹಿಗಳಲ್ಲಿ ಕೆಲವು ಧಾರಾವಾಹಿಗಳು ಯಶಸ್ಸಿನ ನಾಗಾಲೋಟವನ್ನು ಮಾಡುತ್ತಾ, ಟಾಪ್ ಧಾರಾವಾಹಿಗಳು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ಇಂತಹ ಜನಪ್ರಿಯ ಧಾರಾವಾಹಿಗಳ ಸಾಲಲ್ಲಿ ಅಲೌಕಿಕ ಶಕ್ತಿಗಳ ಕಾಲ್ಪನಿಕ ಕಥೆಯನ್ನು ಆಧರಿಸಿ ಮೂಡಿಬರುತ್ತಿರುವ ನಾಗಿಣಿ 2 ಧಾರಾವಾಹಿ ಕೂಡಾ ಒಂದಾಗಿದೆ.

ನಾಗಿಣಿ 2 ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಸೀರಿಯಲ್ ನ ಮೇಕಿಂಗ್ ಹಾಗೂ ಅದ್ಭುತ ಗ್ರಾಫಿಕ್ಸ್ ಜನರ ಮನಸ್ಸನ್ನು ಗೆದ್ದಿದೆ. ದಿನದಿಂದ ದಿನಕ್ಕೆ ನಾಗಿಣಿ ಧಾರಾವಾಹಿ ಇನ್ನಷ್ಟು, ಮತ್ತಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡು ಸಾಗಿದೆ. ಈಗಾಗಲೇ ನಾಗಿಣಿ 2 ಧಾರಾವಾಹಿಯನ್ನು ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಲಾಗಿದೆ. ಈಗ ಅದರ ಬೆನ್ನಲ್ಲೇ ಹೊಸ ವಿಷಯ ಕೇಳಿ ಬಂದಿದೆ.

ಹೌದು, ಕನ್ನಡದ ಜನಪ್ರಿಯ ಧಾರಾವಾಹಿ ನಾಗಿಣಿ ಈಗ ಮತ್ತೊಂದು ಭಾಷೆಗೆ ಡಬ್ ಆಗಿದೆ. ನಾಗಿಣಿ 2 ಇದೀಗ ತೆಲುಗಿಗೂ ಡಬ್ ಆಗುತ್ತಿದ್ದು, ಶೀಘ್ರದಲ್ಲೇ ತೆಲುಗು ವಾಹಿನಿಯೊಂದರಲ್ಲಿ ಕೂಡಾ ನಾಗಿಣಿ ತೆಲುಗು ಭಾಷೆಯಲ್ಲಿ ಮೂಡಿಬರಲಿದೆ. ನಾಗಿಣಿ 2 ತೆಲುಗು ಡಬ್ಬಿಂಗ್ ವರ್ಷನ್ ನ ಪ್ರೋಮೋ ಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ಈ ಸೀರಿಯಲ್ ನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕನ್ನಡ ಧಾರಾವಾಹಿ ಡಬ್ ಆಗಿರುವುದು ಖುಷಿ ನೀಡಿದೆ.

ಕನ್ನಡದ ಜನಪ್ರಿಯ ನಟರು ನಾಗಿಣಿ 2 ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಟಿ ಆರ್ ಪಿ ಗಳಿಕೆಯಲ್ಲಿ ಕೂಡಾ ಉತ್ತಮ ಸ್ಥಾನವನ್ನು ಪಡೆದುಕೊಂಡಿರುವ ನಾಗಿಣಿ 2 ಈಗಾಗಲೇ ಜನರ ಮನಸ್ಸು ಗೆದ್ದಿದೆ. ನಾಗಿಣಿ 2 ಕನ್ನಡದಲ್ಲಿ ಪಡೆದುಕೊಂಡ ಯಶಸ್ಸು ಈ ಧಾರಾವಾಹಿಯ ಡಬ್ಬಿಂಗ್ ಬಗ್ಗೆ ಒಂದು ರೀತಿಯಲ್ಲಿ ಕಾರಣವಾಗಿದೆ. ಒಟ್ಟಾರೆ ಕನ್ನಡದ ಧಾರಾವಾಹಿ 3 ಭಾಷೆಗಳಿಗೆ ಡಬ್ಬಿಂಗ್ ಆಗಿರುವುದು ಅಭಿಮಾನಿಗಳಿಗೆ ಹಾಗೂ ಧಾರಾವಾಹಿಯ ತಂಡದವರಿಗೆ ಖುಷಿಯನ್ನು ನೀಡಿದೆ.

Leave A Reply

Your email address will not be published.