ಮಲತಂದೆಗೆ ಮೊದಲ ಸಲ ಪ್ರೀತಿಯಿಂದ ಅಪ್ಪ ಎಂದ ನಟಿ ಸುಜಾತ ಮಗ: ರಾಜ ರಾಣಿ ಶೋನಲ್ಲಿ ಹರಿದ ಕಣ್ಣೀರು

Entertainment Featured-Articles Movies News

ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಹಾಗೂ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿಯೂ ಭಾಗವಹಿಸಿದ್ದ ನಟಿ ಸುಜಾತ ಅಕ್ಷಯ್ ಅವರು ಕನ್ನಡ ಕಿರುತೆರೆಯ ಜನಪ್ರಿಯ ನಟಿಯಾಗಿದ್ದಾರೆ. ಇದೀಗ ಅವರು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜೋಡಿಗಳ ರಿಯಾಲಿಟಿ ಶೋ ರಾಜಾ ರಾಣಿಯಲ್ಲಿ ತಮ್ಮ ಪತಿ ಅಕ್ಷಯ್ ಅವರ ಜೊತೆಯಲ್ಲಿ ಭಾಗವಹಿಸಿದ್ದು, ಇದೀಗ ಅವರ ಜೀವನದ ಒಂದು ಮರೆಯಲಾರದ ಕ್ಷಣಕ್ಕೆ ರಾಜಾ ರಾಣಿ ವೇದಿಕೆ ಕಾರಣವಾಗಿದ್ದು, ಸುಜಾತಾ ಮತ್ತು ಅವರ ಪತಿ ಅಕ್ಷಯ್ ಮಾತ್ರವೇ ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಜೋಡಿಗಳು ಸಹಾ ಭಾವುಕರಾದ ಘಟನೆಯೊಂದು ನಡೆದಿದೆ‌.

ನಟಿ ಸುಜಾತ ಅವರ ಮೊದಲ ಮದುವೆ ಅವರಿಗೆ ಕಹಿ ಅನುಭವವನ್ನು ಉಳಿಸಿ ಹೋಗಿದೆ. ಆ ಅನುಭವದ ನಂತರ ಪತಿಯಾದ ದೂರವಾದ ಮೇಲೆ ಅವರು ಇನ್ನು ಜೀವನದಲ್ಲಿ ಮದುವೆ ಎನ್ನುವುದೇ ಬೇಡ, ಮಗನನ್ನು ನೋಡಿಕೊಂಡು ಖುಷಿಯಾಗಿರಲು ನಿರ್ಧರಿಸಿದ್ದರು. ಆಗ ಅವರ ಜೀವನಕ್ಕೆ ಬಂದವರೇ ಅಕ್ಷಯ್ ಅವರು. ರಾಜಾ ರಾಣಿ ಕಾರ್ಯಕ್ರಮದಲ್ಲಿ ಮದುವೆ ರೀ ಕ್ರಿಯೇಷನ್ ಟಾಸ್ಕ್ ನಡೆದಾಗ, ಹಿಂದಿನ ನೆನಪುಗಳನ್ನು ಮಾಡಿಕೊಂಡ ಸುಜಾತ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಎರಡನೇ ಮದುವೆ ಹೇಗಾಯಿತು ಎಂದು ಸಹಾ ಹೇಳಿದ್ದಾರೆ.

ಅಕ್ಷಯ್ ಅವರು ಹಾಗೂ ಸುಜಾತ ಅವರು ಒಂದೇ ಕಡೆ ಕೆಲಸ ಮಾಡುತ್ತಿದ್ದು, ಅವರ ನಡುವೆ ಉತ್ತಮವಾದ ಸ್ನೇಹ ಮೂಡಿತ್ತು. ಆಗಲೇ ಸುಜಾತ ಅವರ ತಂದೆ ಅವರೇಕೆ ಮದುವೆಯಾಗಬಾರದು ಎಂದು ಕೇಳಿದರಂತೆ. ಅದಾದ ನಂತರ ಕುಟುಂಬಗಳ ಒಪ್ಪಿಗೆ ಪಡೆದು ಸುಜಾತ ಹಾಗೂ ಅಕ್ಷಯ್ ಅವರು ಸಪ್ತಪದಿ ತುಳಿದು ಸತಿ ಪತಿಯಾದರಂತೆ. ಮದುವೆಯ ಸಂದರ್ಭದಲ್ಲಿ ತಮ್ಮ ಮಗನನ್ನು ಮದುವೆಗೆ ಕರೆದುಕೊಂಡು ಬರುವುದು ಬೇಡ ಎಂದು ಅನೇಕರು ಸಲಹೆ ನೀಡಿದ್ದರಂತೆ.

ಆದರೆ ತನ್ನ ಪ್ರಾಣವಾದ ಮಗನಿಲ್ಲದೇ ಹೇಗೆ ಎಂದು ಸುಜಾತ ಅವರು ಮಗನನ್ನು ತಮ್ಮ ಮದುವೆಗೆ ಕರೆದುಕೊಂಡು ಬಂದಿದ್ದರು ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಪಿಯುಸಿ ಓದುತ್ತಿರುವ ಸುಜಾತ ಅವರ ಮಗ ಯಶಸ್ ಕ್ಯಾಮರಾ ಮುಂದೆ ಬಂದಿದ್ದು, ಮಗ ಮೊದಲ ಬಾರಿ ಸ್ಕ್ರೀನ್ ಮೇಲೆ ಬರ್ತಿದ್ದಾನೆ ಎನ್ನುವ ವಿಷಯವನ್ನು ಸುಜಾತ ಅವರು ಹಂಚಿಕೊಂಡಿದ್ದಾರೆ. ವೇದಿಕೆಗೆ ಬಂದ ಯಶಸ್ ತಾನು ತಂದೆಯ ಮನೆಯಲ್ಲಿ ಸಹಿಸಿದ ನೋವು ಹೇಳಿ, ತನ್ನ ಅಮ್ಮನಿಗೆ ತಾನು ಇನ್ನೆಂದೂ ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದ್ದರಂತೆ.

ಇದೇ ವೇಳೆ ತಮ್ಮ ತಾಯಿಯನ್ನು ಎರಡನೇ ಮದುವೆಯಾದ ಅಕ್ಷಯ್ ಅವರನ್ನು ಅಕ್ಷಯ್ ಅಂಕಲ್ ಎಂತಲೇ ಕರೆಯುವ ಯಶಸ್ ಅವರು ಅವರ ಬಗ್ಗೆ ಮೆಚ್ಚುಗೆಯ ಮಾತು ಆಡಿದ್ದು, ಅವರು ಅಮ್ಮನನ್ನು ಸದಾ ಖುಷಿಯಾಗಿ ಇಟ್ಟಿದ್ದಾರೆ. ನನಗೆ ಅವರನ್ನು ಕಂಡರೆ ತುಂಬಾ ಇಷ್ಟ ಎಂದೆಲ್ಲಾ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡ ನಂತರ ಸೃಜನ್ ಲೋಕೇಶ್ ಅವರು ಮಾತನಾಡಿ, ಅಕ್ಷಯ್ ಅವರನ್ನು ಅಂಕಲ್ ಅಂತ ಕರೆದಿದ್ದು ಸ್ವಲ್ಪ ಬೇಸರವಾಯಿತು. ಅಪ್ಪನ ಬೆಲೆ ಏನು ಎನ್ನುವುದು ನಮಗೆ ಗೊತ್ತು.

ನಾನಿವತ್ತು ಏನೇ ಮಾಡಿದರೂ, ಅದಕ್ಕೆ ಕಾರಣ ನನ್ನ ಅಪ್ಪ. ತಂದೆಯ ಸ್ಥಾನದಲ್ಲಿ ಅಕ್ಷಯ್ ನಿಮ್ಮನ್ನ ತುಂಬಾ ಕೇರ್ ಮಾಡಿದ್ದಾರೆ. ಆದ್ದರಿಂದ ಅಕ್ಷಯ್ ಅವರಿಗೆ ಅಪ್ಪ ಅಂತ ಕರೆಯಿಸಿಕೊಳ್ಳುವ ಎಲ್ಲಾ ಅರ್ಹತೆ ಇದ್ದು, ಅದು ನಿಮಗೆ ನಿಜ ಅನಿಸಿದರೆ, ಅಕ್ಷಯ್ ಅವರಿಗೆ ಅಪ್ಪ ಅಂತ ಕರೆಯುತ್ತೀರಾ ಎಂದು ಕೇಳಿದಾಗ ಯಶಸ್ ಹೌದು ಎಂದು ಹೇಳಿ ಅಕ್ಷಯ್ ಅವರಿಗೆ, ಥ್ಯಾಂಕ್ಯೂ ಅಪ್ಪ ಎಂದು ಮೊದಲ ಬಾರಿಗೆ ಅವರನ್ನು ಅಪ್ಪ ಎಂದು ಕರೆದಿದ್ದಾರೆ. ಈ ಘಟನೆಯು ಅಲ್ಲಿದ್ದ ಎಲ್ಲರನ್ನೂ ಸಹಾ ಭಾವುಕರನ್ನಾಗಿ ಮಾಡಿದ್ದು ಸುಳ್ಳಲ್ಲ.

Leave a Reply

Your email address will not be published.