ಮಲಗಿದ್ದವನ ಬಳಿ ಬಂದ ಚಿರತೆಗಳ ದಂಡು: ಮುಂದೇನಾಯ್ತು?? ವೈರಲ್ ಆಯ್ತು ವೀಡಿಯೋ

Written by Soma Shekar

Published on:

---Join Our Channel---

ಜನಪ್ರಿಯ ಸ್ಟ್ಯಾಂಡ್ ಕಮಿಡಿಯನ್ ಹಾಗೂ ನಟನಾಗಿಯೂ ಸಹ ಹೆಸರನ್ನು ಮಾಡಿರುವ ಸುನಿಲ್ ಗ್ರೋವರ್ ಅವರಯ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ನಿಯಮಿತವಾಗಿ ಕೆಲವು ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಸಹ ಅವರು ಒಂದು ವಿಶೇಷವಾದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋ ಇದೀಗ ಸಾಕಷ್ಟು ಜನರ ಗಮನವನ್ನು ಸೆಳೆಯುತ್ತಿದೆ ಮಾತ್ರವೇ ಅಲ್ಲದೆ ಜನರು ಈ ವಿಡಿಯೋವನ್ನು ನೋಡಿ ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ವೀಡಿಯೋ ವೈರಲ್ ಆಗುತ್ತಾ ಸಾಗಿದೆ.

ಸುನಿಲ್ ಗ್ರೋವರ್ ಅವರು ಈ ಬಾರಿ ಚಿರತೆಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೋಡಿದಾಗ ವ್ಯಕ್ತಿಯೊಬ್ಬರು ಮಲಗಿರುವಾಗ, ಅವರ ಮುಂದೆ ಚಿರತೆಗಳು ಮಲಗಿರುವುದನ್ನು ಕಾಣಬಹುದು. ಆ ವ್ಯಕ್ತಿಯು ಕಣ್ಣು ಬಿಟ್ಟು ನೋಡಿದಾಗ ಎದುರಿಗೆ 3 ಚಿರತೆಗಳು ಮಲಗಿರುವುದು ಕಾಣುತ್ತದೆ. ಆತ ತನ್ನ ಹಾಸಿಗೆಯನ್ನು ಇನ್ನು ಸ್ವಲ್ಪ ನೀಟಾಗಿ ಹಾಕಿ ಚಿರತೆ ಮಲಗಿಕೊಳ್ಳಲು ಜಾಗ ಮಾಡಿಕೊಡುತ್ತಾರೆ. ಆಗ ಹತ್ತಿರಕ್ಕೆ ಬಂದ ಚಿರತೆಯನ್ನು ಪ್ರೀತಿಯಿಂದ ಆ ವ್ಯಕ್ತಿ ಮುದ್ದಿಸುತ್ತಾರೆ. ಅದು ಕೂಡಾ ಮುದ್ದಾದ ಸಾಕು ಪ್ರಾಣಿಯ ಹಾಗೆ ಅವರ ಜೊತೆ ಮಲಗಿ ಕೊಳ್ಳುತ್ತದೆ.

https://www.instagram.com/p/CR38Hhtg3Mc/?utm_medium=copy_link

ಉಳಿದ ಚಿರತೆಗಳು ಸಹಾ ಒಂದೊಂದಾಗಿ ಮೇಲೆದ್ದು ಬೆಚ್ಚಗೆ ಮಲಗಲು ಆತನ ಇನ್ನಷ್ಟು ಹತ್ತಿರಕ್ಕೆ ಬಂದು ಆತನ ಜೊತೆ ಮಲಗಿಕೊಂಡು ನಿದ್ರಿಸುತ್ತವೆ. ಸುನೀಲ್ ಗ್ರೋವರ್ ಅವರು ಹಂಚಿಕೊಂಡ ಈ ವಿಡಿಯೋವನ್ನು ಈಗಾಗಲೇ ಹನ್ನೊಂದು ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಸಾವಿರಾರು ಜನರು ಕಾಮೆಂಟ್ಗಳನ್ನು ಮಾಡಿದ್ದಾರೆ. ಚಿರತೆಗಳ ಜೊತೆ ಮಲಗಿರುವ ವ್ಯಕ್ತಿಯ ಧೈರ್ಯವನ್ನು ಮೆಚ್ಚಿದ್ದಾರೆ ಅನೇಕರು. ಇನ್ನು ಕೆಲವರು ಕಾಮೆಂಟ್ ಗಳ ಮೂಲಕ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಆತ ಅವುಗಳಿಗೆ ಆಹಾರವಾಗದಿರಲಿ ಎಂದಿದ್ದಾರೆ. ಒಟ್ಟಾರೆ ವಿಡಿಯೋ ಮಾತ್ರ ಭರ್ಜರಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ.

Leave a Comment