ಅದೃಷ್ಟ ಎನ್ನುವುದು ಯಾರಿಗೆ, ಯಾವಾಗ ಒಲಿದು ಬರುತ್ತದೆ ಎಂದು ಯಾರಿಂದಲೂ ಊಹೆಯನ್ನು ಮಾಡುವುದು ಸಾಧ್ಯವಿಲ್ಲ. ಆದ್ದರಿಂದಲೇ ಅದೃಷ್ಟ ಮನೆ ಬಾಗಿಲನ್ನು ತಟ್ಟಿದಾಗ ಅದಕ್ಕೆ ಕೂಡಲೇ ಆಹ್ವಾನವನ್ನು ನೀಡಬೇಕು, ಅದನ್ನು ಸ್ವೀಕರಿಸಬೇಕು ಎಂದು ಹಿರಿಯರು ಹೇಳುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಇನ್ನು ಕೆಲವು ಸಂದರ್ಭಗಳಲ್ಲಿ ಯಾವ ವಸ್ತುಗಳು ಹಳೆಯವು ಬಿಸಾಡಬೇಕು ಎಂದುಕೊಳ್ಳುತ್ತೇವೆಯೋ ಅದೇ ವಸ್ತುಗಳು ಅದೃಷ್ಟವನ್ನು ತಂದು ಕೊಡುವ ಸಾಧ್ಯತೆಗಳು ಇರುತ್ತವೆ. ಅಂತಹ ಘಟನೆಗಳು ಈಗಾಗಲೇ ನಡೆದಿರುವ ಸುದ್ದಿಗಳು ಸಹಾ ಆಗಿವೆ.
ಅಂತಹದೇ ಒಂದು ವಿಚಿತ್ರ ಘಟನೆ ನಡೆದಿದ್ದು ಹಳೆಯ ವಸ್ತುವೊಂದು ಅದೃಷ್ಟವನ್ನು ತಂದುಕೊಟ್ಟಿದೆ. ಅಮೆರಿಕಾದಲ್ಲಿ ಈ ಶಾ ಕಿಂ ಗ್ ಘಟನೆ ನಡೆದಿದ್ದು, ದಂಪತಿಯೊಂದು ತಮ್ಮ ಮನೆಯನ್ನು ಸ್ವಚ್ಛ ಮಾಡಬೇಕೆಂದು ತೀರ್ಮಾನಿಸಿ, ಆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ, ಆಗ ಅವರು ತಮ್ಮ ಮನೆಯಲ್ಲಿ ಒಂದು ಹಳೆಯ ಟ್ರಂಕ್ ಪೆಟ್ಟಿಗೆ ಇರುವುದನ್ನು ನೋಡಿದ್ದಾರೆ. ಮನೆಯನ್ನು ಶುಭ್ರ ಮಾಡುವಾಗ ದೊರಕಿದ ಆ ಹಳೆಯ ಟ್ರಂಕಿನೊಳಗೆ ಏನಿರಬಹುದೆಂಬ ಕುತೂಹಲದಿಂದ ತೆರೆದು ನೋಡಿದಾಗ ಆ ದಂಪತಿ ಶಾಕ್ ಆಗಿದ್ದಾರೆ.
ಹಾಗಾದರೆ ಆ ಟ್ರಂಕ್ ಪೆಟ್ಟಿಗೆಯೊಳಗೆ ಅಂಥದ್ದೇನಿತ್ತು? ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಸ್ಟೋರಿ ಓದಿ. ಅಮೆರಿಕಾದ ಓಹಿಯಾ ಪ್ರಾಂತ್ಯದ ನಿವಾಸಿಗಳಾಗಿರುವ ಒಂದು ದಂಪತಿ ತಮ್ಮ ಮನೆಯನ್ನು ಶುಭ್ರ ಮಾಡುವಾಗ ಮನೆಯ ಒಂದು ಭಾಗದಲ್ಲಿ ಸುಮಾರು 70 ವರ್ಷಗಳಷ್ಟು ಹಳೆಯ ಟ್ರಂಕ್ ಪೆಟ್ಟಿಗೆ ಸಿಕ್ಕಿದೆ. ಆ ಟ್ರಂಕ್ ಸಿಕ್ಕಿದಾಗ ಸಹಜವಾಗಿಯೇ ದಂಪತಿ ಅದರಲ್ಲಿ ಏನಾದರೂ ಆಭರಣಗಳು ಅಥವಾ ಅಮೂಲ್ಯವಾದ ವಸ್ತುಗಳು ಇದ್ಚರೆ ನ್ನಾಗಿರುತ್ತದೆ ಎಂದು ಯೋಚಿಸಿದ್ದಾರೆ.
ಅದೇ ಕುತೂಹಲದಿಂದಲೇ ಅವರು ಮನೆಯಲ್ಲಿ ದೊರೆತ ಆ ಹಳೆಯ ಪೆಟ್ಟಿಗೆಯನ್ನು ತೆರೆದಿದ್ದಾರೆ. ಆದರೆ ಅವರು ಊಹೆ ಮಾಡಿದಂತೆ ನಗ, ನಾಣ್ಯಗಳು ಆ ಪೆಟ್ಟಿಗೆಯಲ್ಲಿ ಇಲ್ಲದೆ ಹೋದರೂ, ಹಳೆಯ ಡಾಲರ್ ಗಳನ್ನು ಒಂದು ಪೇಪರ್ ನಲ್ಲಿ ಸುತ್ತಿರುವುದು ಕಂಡುಬಂದಿದೆ. ಅವುಗಳನ್ನು ಎಣಿಸಿದಾಗ ಒಟ್ಟು 33 ಲಕ್ಷ ಮೊತ್ತ ಇದೆ ಎಂದು ತಿಳಿದುಬಂದಿದೆ. ಅವೆಲ್ಲವೂ 1928-34ರ ನಡುವಿನ ಕರೆನ್ಸಿ ನೋಟುಗಳು ಎಂದು ತಿಳಿದುಬಂದಿದೆ. ಅವರು ಈ ವಿಷಯವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿಕೊಂಡ ಮೇಲೆ ವಿಷಯ ವೈರಲ್ ಆಗಿದ್ದು, ಸ್ಥಳೀಯ ಮಾಧ್ಯಮಗಳು ಕೂಡಾ ಈ ವಿಷಯವನ್ನು ಸುದ್ದಿ ಮಾಡಿವೆ.