ಮನೇಗೆ ನುಗ್ಗಿ, ನಿನ್ನ ಜುಟ್ಟು ಹಿಡಿದು ಒದ್ದು ಹೊರಗೆ ಹಾಕ್ತೀನಿ: ಬಿಗ್ ಬಾಸ್ ಸ್ಪರ್ಧಿಗೆ ಸಲ್ಮಾನ್ ಎಚ್ಚರಿಕೆ

Written by Soma Shekar

Published on:

---Join Our Channel---

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ತನ್ನ 15 ನೇ ಸೀಸನ್ ನಲ್ಲಿದೆ. ಬಿಗ್ ಬಾಸ್ 15 ಇನ್ನೇನು ಕೊನೆಯ ಹಂತಕ್ಕೆ ತಲುಪಿದ್ದು, ಕೆಲವೇ ವಾರಗಳಲ್ಲಿ ಶೋ ಮುಗಿಯಲಿದೆ ಕೂಡಾ. ಪ್ರತಿಬಾರಿ ಸಾಕಷ್ಟು ಸದ್ದನ್ನು ಮಾಡುತ್ತಿದ್ದ ಬಿಗ್ ಬಾಸ್ ಈ ಬಾರಿ ಮಾತ್ರ ತನ್ನ ಚಾರ್ಮನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಬಿಗ್ ಬಾಸ್ ಮೇಕರ್ಸ್ ಬಿಗ್ ಬಾಸ್ ನ ಟಿ ಆರ್ ಪಿ ಮೇಲಕ್ಕೆತ್ತಲು ಈ ಬಾರಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇನ್ನು ಸದ್ಯಕ್ಕಂತೂ ಬಿಗ್ ಬಾಸ್ ಮನೆಯ ಒಳಗೆ ವಾತಾವರಣ ಮಾತ್ರ ಬಹಳ ಬಿಸಿಯಾಗಿದೆ.

ಈ ವಾರ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಅವರು ಕೂಡಾ ಸಿಕ್ಕಾಪಟ್ಟೆ ಬಿಸಿಯಾಗಿರುವುದು ಈಗಾಗಲೇ ಪ್ರೋಮೋಗಳಲ್ಲಿ ಕಾಣಿಸಿಕೊಂಡಿದ್ದು, ಇಂದಿನ ವೀಕೆಂಡ್ ಯುದ್ಧ ಹೇಗಿರಲಿದೆ ಎನ್ನುವ ಕುತೂಹಲವನ್ನು ಮೂಡಿಸಿದೆ. ದೈಹಿಕ ಹೊ ಡೆ ದಾಟದ ಕಾರಣದಿಂದ ಒಬ್ಬ ಸ್ಪರ್ಧಿಯನ್ನು ಸಲ್ಮಾನ್ ಇಂದು ಮನೆಯಿಂದ ಹೊರಗೆ ಹಾಕಲಿದ್ದಾರೆ ಎನ್ನಲಾಗಿದೆ, ಇದೇ ವೇಳೆ ಮತ್ತೊಬ್ಬ ಸ್ಪರ್ಧಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ ಪ್ರೋಮೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಮರಾಠಿ ಬಿಗ್ ಬಾಸ್ ನಲ್ಲಿ ಭಾರೀ ಸದ್ದು ಮಾಡಿದ್ದ ಅಭಿಜಿತ್ ಬಿಚುಕ್ಲೇ ಎನ್ನುವವರನ್ನು ಹಿಂದಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಲಾಗಿತ್ತು. ಅವರು ಎಂಟ್ರಿ ಕೊಟ್ಟ ದಿನದಿಂದಲೂ ನಾಲಗೆ ಮೇಲೆ ಹತೋಟಿ ಇರಲಿ ಎನ್ನುವ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೂ ಬಿಚುಕ್ಲೇ ಅದನ್ನು ಮರೆತು ಅನ್ಯ ಸ್ಪರ್ಧಿ ಗಳ‌ ಬಗ್ಗೆ ತೀರಾ ಕೆಳಮಟ್ಟದ ಮಾತುಗಳ ಮೂಲಕ ನಿಂದಿಸಿದ್ದು ಮಾತ್ರವೇ ಅಲ್ಲದೇ ಸ್ಪರ್ಧಿಗಳ ಕುಟುಂಬದವರನ್ನು ನಿಂದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಟ್ಟಾಗಿರುವ ಸಲ್ಮಾನ್ ಖಾನ್ ಅಭಿಜಿತ್ ಬಿಚುಕ್ಲೇಯನ್ನು ಕುರಿತಾಗಿ ನಿನ್ನ ಮನೆಯವರ ಬಗ್ಗೆ ಹೀಗೆ ಮಾತನಾಡಿದ್ರೆ ಸುಮ್ನೆ ಇರ್ತೀಯಾ?? ನೀನು ಆಡಿರೋ ಮಾತುಗಳನ್ನು ಹೇಳೋಕೆ ಕೂಡಾ ಸಾಧ್ಯ ಇಲ್ಲ ಎನ್ನುವಾಗಲೇ ಬಿಚುಕ್ಲೇ ನಾನು ಮಾತನಾಡಬಹುದಾ?? ಎಂದಾಗ ಸಲ್ಮಾನ್ ಖಾನ್ ಮಾತಾಡಿದ್ರೆ ಮನೆ ಒಳಗೆ ನುಗ್ಗಿ ನಿನಗೆ ಬಾರಿಸ್ತೀನಿ, ನಿನ್ನ ಜುಟ್ಟು ಹಿಡಿದು ಮನೆಯಿಂದ ಹೊರಗೆ ಹಾಕ್ತೀನಿ ಎಂದು ಬಹಳ ಕೋ ಪದಿಂದ ಎಚ್ಚರಿಕೆ ನೀಡಿದ್ದಾರೆ.

Leave a Comment