ಮನೆ ಮಾತ್ರವಲ್ಲ ದೇಗುಲಕ್ಕೆ ಹೋಗಿ ದೇವರ ಪೂಜೆ, ದರ್ಶನ ಮಾಡಿದರೆ ಸಿಗುವ ಫಲಗಳು ತಿಳಿದರೆ ಅದು ಅಭ್ಯಾಸವೇ ಆಗುತ್ತದೆ

0 2

ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆರಾಧನೆಗೆ ವಿಶೇಷವಾದ ಸ್ಥಾನ ಮತ್ತು ಮಹತ್ವವಿದೆ. ಪ್ರತಿ ಮನೆಯಲ್ಲಿಯೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ದೇವರ ಆರಾಧನೆಯನ್ನು ಮಾಡಲಾಗುತ್ತದೆ. ಆದರೆ ಬಹಳಷ್ಟು ಜನರು ಕೇವಲ ತಮ್ಮ ಮನೆಯಲ್ಲಿ ಮಾತ್ರವೇ ದೇವರನ್ನು ಪೂಜಿಸುತ್ತಾರೆ ಮತ್ತು ಅವರು ದೇವಾಲಯಗಳಿಗೆ ಹೋಗುವುದಿಲ್ಲ. ಒಂದು ವೇಳೆ ದೇವಸ್ಥಾನಕ್ಕೆ ಹೋಗಲೇಬೇಕಾಗಿ ಬಂದರೂ ಅದು ಕೇವಲ ಯಾವುದಾದರೂ ಹಬ್ಬಕ್ಕೋ ಅಥವಾ ಇನ್ಯಾವುದೋ ವಿಶೇಷ ಉದ್ದೇಶದಿಂದಲೋ ಮಾತ್ರವೇ ಹೋಗುತ್ತಾರೆ.

ಇನ್ನೂ ಕೆಲವೊಮ್ಮೆ ಜೀವನದಲ್ಲಿ ಯಾವುದಾದರೂ ಜಟಿಲವಾದ ಸಮಸ್ಯೆ ಎದುರಾದರೆ ಆಗಲೂ ದೇವಾಲಯಕ್ಕೆ ಬಂದು ದೇವರ ಮುಂದೆ ಕೈ ಜೋಡಿಸಿ ಕಷ್ಟ ಬಗೆಹರಿಸೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆದರೆ ನಿಮಗೆ ತಿಳಿದಿದೆಯೋ ಅಥವಾ ತಿಳಿದಿಲ್ಲವೋ, ದೇವಾಲಯಕ್ಕೆ ಭೇಟಿ ನೀಡುವುದರಿಂದ ನಮಗೆ ಹಲವಾರು ಪ್ರಯೋಜನಗಳಿವೆ. ಆದ ಕಾರಣ ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ಆಗಾಗ ದೇವಾಲಯಕ್ಕೆ ಸಹಾ ಭೇಟಿ ನೀಡುವುದು, ದೇವರ ದರ್ಶನವನ್ನು ಮಾಡುವುದು ಅಗತ್ಯವಾಗಿರುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಂತನನ್ನು ದೇಗುಲಗಳಲ್ಲಿ ಪ್ರಾಣ-ಪ್ರತಿಷ್ಠೆ ಮಾಡಿ ಆರಾಧನೆ ಆರಂಭಿಸಲಾಗುತ್ತದೆ. ಆದ್ದರಿಂದಲೇ ದೇವಾಲಯದಲ್ಲಿ ದೇವತೆಗಳು ನೆಲೆಸಿದ್ದಾರೆ ಎನ್ನುವುದು ಒಂದು ನಂಬಿಕೆಯಾಗಿದೆ. ಇದೇ ಕಾರಣದಿಂದಾಗಿಯೇ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವುದರಿಂದ ಹಲವಾರು ಲಾಭಗಳಿವೆ. ಹಾಗಾದರೆ ಆಗಾಗ ದೇವಸ್ಥಾನಕ್ಕೆ ಏಕೆ ಹೋಗಬೇಕೆಂದು ತಿಳಿಯೋಣ ಬನ್ನಿ.

ದೇವಾಲಯದಲ್ಲಿ ದೇವತೆಗಳು ಮತ್ತು ದೇವತೆಗಳು ನೆಲೆಸಿರುತ್ತಾರೆ : ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿಗ್ರಹಗಳಲ್ಲಿ ದೇವರು ನೆಲೆಸಿರುತ್ತಾನೆ. ಏಕೆಂದರೆ ದೇವಾನುದೇವತೆಗಳ ಪೂಜೆಯನ್ನು ಇಲ್ಲಿ ಅರ್ಚಕರು ಮಾಡುತ್ತಾರೆ. ಮನೆಯಲ್ಲಿ ಹಾಗೆ ಪೂಜಿಸಲು ಸಾಧ್ಯವಿಲ್ಲ. ಅಲ್ಲದೇ ದೇಗುಲಗಳಲ್ಲಿ ಪ್ರಾರ್ಥನೆ, ಧ್ಯಾನ, ಕೀರ್ತನೆ, ಯಾಗ, ಪೂಜೆ, ಆರತಿ, ಶಂಖ,ಗಂಟೆ ಮುಂತಾದವುಗಳ ಮಧ್ಯೆ ಆರಾಧನೆ ನಡೆಯುತ್ತದೆ.

ಈ ಕಾರಣದಿಂದಾಗಿಯೇ ದೇವಾಲಯಗಳಲ್ಲಿ ಒಂದು ದಿವ್ಯವಾದ ವಾತಾವರಣ ನೆಲೆಸಿದ್ದು, ಇಂತಹ ವಾತಾವರಣದಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದರಿಂದ ಅದು ನಮ್ಮ ಮನಸ್ಸಿಗೆ ಒಂದು ಶಾಂತಿಯನ್ನು ನೀಡುತ್ತದೆ. ನಕರಾತ್ಮಕ ಆಲೋಚನೆಗಳಿಂದ ಸ್ವಲ್ಪ ಸಮಯ ನಾವು ಹೊರಗಿರುತ್ತೇವೆ. ಅಲ್ಲದೇ ದೇಗುಲದ ವಾತಾವರಣವು ಮನಸ್ಸಿಗೆ ಹಿತವನ್ನು ಸಹಾ ನೀಡುತ್ತದೆ.

ದೇವಸ್ಥಾನದಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ:
ದೇವಾಲಯದ ನಿರ್ಮಾಣ ಕಾರ್ಯ ವಾಸ್ತು ಪ್ರಕಾರ ನಡೆದಿರುತ್ತದೆ. ಪ್ರತಿದಿನ ಅಲ್ಲಿ ಧೂಪ ದೀಪಗಳನ್ನು ಬೆಳಗಿಸಲಾಗುವುದು. ನಿತ್ಯ ಶಂಖ ಮತ್ತು ಗಂಟೆಯ ನಾದ ಮೊಳಗುತ್ತದೆ. ಇವೆಲ್ಲವೂ ದೇಗುಲದ ವಾತಾವರಣವನ್ನು ಶುದ್ಧವಾಗಿಡುವ ಜೊತೆಗೆ ಮನಸ್ಸಿಗೊಂದು ನೆಮ್ಮದಿಯನ್ನು ನೀಡುತ್ತದೆ. ದೇವಸ್ಥಾನದ ಪರಿಸರದಲ್ಲಿ ಧನಾತ್ಮಕ ಶಕ್ತಿ ನೆಲೆಸಿದ್ದು, ಇದು ನಕಾರಾತ್ಮಕತೆ ದೂರವಾಗಿಸುತ್ತದೆ. ಇದರಿಂದಾಗಿ ವ್ಯಕ್ತಿಯಲ್ಲಿ ಸಕಾರಾತ್ಮಕತೆಯ ಅನುಭೂತಿ ಮೂಡುತ್ತದೆ.

Leave A Reply

Your email address will not be published.