ಮನೆ ಗುಡಿಸಿ, ಆಫೀಸ್ ಕ್ಲೀನ್ ಮಾಡಿದ್ರೆ ಲಕ್ಷಗಳ ಸಂಬಳ: ವರ್ಷಕ್ಕೆ ಕೋಟಿಗಳಲ್ಲಿ ಪ್ಯಾಕೇಜ್

Entertainment Featured-Articles News

ಪೌರ ಕಾರ್ಮಿಕರು, ಕಸಗುಡಿಸುವವರು, ಸಫಾಯಿ ಕರ್ಮಚಾರಿಗಳು, ಇವರಿಲ್ಲದೇ ಹೋದರೆ ನಗರ ಮತ್ತು ಪಟ್ಟಣಗಳಲ್ಲಿ ಜನರು ತಮ್ಮ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಿಲ್ಲ. ಇವರೇನಾದರೂ ಒಂದು ವೇಳೆ ತಮ್ಮ ಕೆಲಸವನ್ನು ಮಾಡದೇ ಹೋದರೆ ಗಬ್ಬು ನಾರುವ ರಸ್ತೆಗಳು ಒಂದೆಡೆಯಾದರೆ ಇನ್ನೊಂದು ಕಡೆ ರಸ್ತೆಗಳೆಲ್ಲವೂ ಸಹಾ ಡಂಪಿಂಗ್ ಯಾರ್ಡ್‌ಗಳಾಗಿ ಮಾರ್ಪಡುತ್ತವೆ ಎನ್ನುವುದರಲ್ಲಿ ಸಂದೇಶಹವೇ ಬೇಡ. ಆದರೆ ಇಂತಹ ಸ್ವಚ್ಚತಾ ಕರ್ಮಚಾರಿಗಳಿಗೆ ನೀಡುತ್ತಿರುವ ಕೂಲಿ ಅಥವಾ ವೇತನ ಮಾತ್ರ ಬಹಳ ಕಡಿಮೆ ಎನ್ನುವುದು ಆಗಾಗ ಕೇಳಿ ಬರುವ ಆರೋಪವಾಗಿದೆ.

ಆದ ಕಾರಣ ಅವರು ಯಾವಾಗಲೂ ಪ್ರತಿಭಟನೆ, ಆಂದೋಲನ ಮತ್ತು ಧರಣಿಗಳನ್ನು ನಡೆಸುತ್ತಾರೆ. ನೈರ್ಮಲ್ಯ ಕಾರ್ಮಿಕರನ್ನು ಕಾಯಂಗೊಳಿಸಬೇಕು ಮತ್ತು ಕನಿಷ್ಠ ಮಾಸಿಕ ವೇತನ ನೀಡಬೇಕು ಎಂದು ಅವರು ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತಲೇ ಇರುತ್ತಾರೆ. ಹೀಗೆ ನಮ್ಮಲ್ಲಿ ಪೌರ ಕಾರ್ಮಿಕರು ವೇತನಕ್ಕಾಗಿ ದನಿ ಎತ್ತುವಾಗಲೇ ಮತ್ತೊಂದು ಕಡೆ ಅಲ್ಲಿನ ನೈರ್ಮಲ್ಯ ಕಾರ್ಮಿಕರಿಗೆ ಲಕ್ಷಗಟ್ಟಲೆ ಸಂಬಳ ನೀಡಲಾಗುತ್ತಿದೆ. ಸ್ವಚ್ಚತಾ ಪರಿಚಾಕರಾಗಿ ಕೆಲಸ ಮಾಡುವವರು ಸಾಮಾನ್ಯ ಕೆಲಸ ಮಾಡುವವರಿಗಿಂತ ಹೆಚ್ಚು ಸಂಪಾದಿಸುತ್ತಾರೆ.

ಹೌದು, ಮೇಲಿನ ಮಾತನ್ನು ಕೇಳಿದಾಗ ನಿಮಗೆ ಅಚ್ಚರಿ ಎನಿಸಿದರೂ ಸಹಾ ಇದು ವಾಸ್ತವ ವಿಷಯವಾಗಿದೆ. ಹಾಗಾದರೆ ಏನೀ ಆಸಕ್ತಿಕರ ವಿಚಾರ ಎನ್ನುವುದರ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ. ಆಸ್ಟ್ರೇಲಿಯಾದಲ್ಲಿ ಸ್ವಚ್ಛತಾ ಕಾರ್ಮಿಕರ ಕೊರತೆ ಇದೆ. ಇಲ್ಲಿ ಸ್ವಚ್ಚತಾ ಪರಿಚಾರಕರಾಗಿ ಕೆಲಸ ಮಾಡುವ ಕೆಲಸಗಾರರಿಲ್ಲ, ಇದರಿಂದಾಗಿ ಅಲ್ಲಿ ಎಲ್ಲೆಂದರಲ್ಲಿ ಕಸ ಶೇಖರಣೆಯಾಗುತ್ತಿದೆ. ಸ್ವಚ್ಛತಾ ಕಾರ್ಯಕ್ಕೆ ಯಾರೂ ಮುಂದಾಗದ ಕಾರಣ ಅಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಹೆಚ್ಚಿನ ಸಂಬಳ ನೀಡಿದರೂ ಪರವಾಗಿಲ್ಲ ಎಂದು ತೀರ್ಮಾನಿಸಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ. ಅಲ್ಲದೇ ಗಂಟೆಗೆ ಇಷ್ಟು ಎಂದು ದೊಡ್ಡ ಮೊತ್ತದ ಸಂಬಳವನ್ನು ನೀಡುತ್ತಿದ್ದಾರೆ. ಇಂತಹುದೊಂದು ಬೆಳವಣಿಗೆಯ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ ಪ್ರತಿ ತಿಂಗಳು ಸ್ವಚ್ಚತಾ ಪರಿಚಾರಕರು ಸರಾಸರಿ 8 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನೈರ್ಮಲ್ಯ ಕಾರ್ಮಿಕರ ಸಮಸ್ಯೆ 2021 ರಿಂದ ಆಸ್ಟ್ರೇಲಿಯಾವನ್ನು ಕಾಡುತ್ತಿದೆ.

ಸಿಡ್ನಿ ಮೂಲದ ಕ್ಲೀನಿಂಗ್ ಕಂಪನಿ ಅಬ್ಸೊಲ್ಯೂಟ್ ಡೊಮೆಸ್ಟಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ಜೋ ವೆಸ್ ಈ ಬಗ್ಗೆ ವಿವರಿಸಿದ್ದಾರೆ. ಅವರು ಮಾತನಾಡುತ್ತಾ, ಸ್ವಚ್ಚತಾ ಕಾರ್ಯಕ್ಕೆ ಯಾರೂ ಸಿಗದ ಕಾರಣದಿಂದಾಗಿ ಗಂಟೆಗೆ 45 ಡಾಲರ್‌ಗೆ ಜನರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ. ಅಂದರೆ ನಮ್ಮ ಕರೆನ್ಸಿಯಲ್ಲಿ 3600 ರೂಪಾಯಿ. ಒಂದು ವರ್ಷದ ಹಿಂದೆ ಗಂಟೆಗೆ 2700 ರೂ. ನೀಡಲಾಗುತ್ತಿತ್ತು. ಆದರೆ ಈಗ 3500 ರಿಂದ 3600 ಕೊಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಕೆಲವು ಕಂಪನಿಗಳು, 4700 ರೂಪಾಯಿಗಳನ್ನು ಪಾವತಿಸಲು ಹಿಂಜರಿಯುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published.