ಮನೆಯ ಸುತ್ತಮುತ್ತ ಈ ಗಿಡಗಳಿದ್ದರೆ ಬಡತನ ಕಟ್ಟಿಟ್ಟ ಬುತ್ತಿ ಎನ್ನುತ್ತಿದೆ ವಾಸ್ತು ಶಾಸ್ತ್ರ

Written by Soma Shekar

Published on:

---Join Our Channel---

ವಾಸ್ತು ಶಾಸ್ತ್ರವು ಭಾರತದ ಪುರಾತನ ಗ್ರಂಥವಾಗಿದೆ. ಇದರಲ್ಲಿ ನಮ್ಮ ಜೀವನವನ್ನು ನಾವು ಸಂತೋಷವಾಗಿರಿಸಿಕೊಳ್ಳಲು ಅಗತ್ಯವಿರುವ ವಿಷಯಗಳನ್ನು ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಲಾಗಿದೆ. ಇದರ ಪ್ರಕಾರ ಮನೆಯ ಸುತ್ತ ಮುತ್ತಲಿನ ಪರಿಸರವು ವಾಸ್ತು ಪ್ರಕಾರ ಇದ್ದಾಗ ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿಗಳು ನೆಲೆಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಮರ ಗಿಡಗಳು ಹಾಗೂ ಸಸ್ಯಗಳು ಸಹಾ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ.

ಕೆಲವು ಸಸ್ಯಗಳು ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೆರವಾದರೆ ಇನ್ನೂ ಕೆಲವು ಗಿಡಗಳು ನಕಾರಾತ್ಮಕತೆಯನ್ನು ಉಂಟು ಮಾಡುತ್ತವೆ. ಆದ್ದರಿಂದಲೇ ಮನೆಯ ಸುತ್ತ ಮುತ್ತ ಅಂತಹ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುವ ಗಿಡಗಳು ಇದ್ದರೆ ಅವುಗಳನ್ನು ತೆಗೆಯಬೇಕಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾದರೆ ಅಂತಹ ಗಿಡಗಳು ಯಾವುವು?? ಎನ್ನುವ ವಿಚಾರವನ್ನು ನಾವೀಗ ತಿಳಿಯೋಣ ಬನ್ನಿ.

ಹುಣಸೇ ಗಿಡ : ಹುಣಸೆ ಹಣ್ಣು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೂ ವಾಸ್ತು ಪ್ರಕಾರ ಅದು ಅಶುಭ. ಇದು ಮನೆಯ ಸುತ್ತ ಮುತ್ತ ಇದ್ದರೆ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುವುದರಿಂದ ಮನೆಯಲ್ಲಿನ ಸದಸ್ಯರು ನಾನಾ ಕಾಯಿಲೆಗಳಿಗೆ ತುತ್ತಾಗುವರು ಹಾಗೂ ಕುಟುಂದಲ್ಲಿ ವೈಮನಸ್ಯಗಳಿಗೂ ಅದು ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ಹುಣಸೆ ಗಿಡ ಇದ್ದರೆ ಅದನ್ನು ತೆಗೆದು ಹಾಕುವುದು ಉತ್ತಮ.

ಅರಳಿ ಮರ : ಇದಕ್ಕೆ ಧಾರ್ಮಿಕವಾಗಿ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ಮರವನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ಆದರೆ ಮನೆಯಲ್ಲಿ ಈ ಗಿಡವನ್ನು ಬೆಳೆಸುವುದು ಮಾತ್ರ ಸರಿಯಲ್ಲ ಎನ್ನುವ ವಾಸ್ತು ತಜ್ಞರು, ಈ ಮರವಿದ್ದರೆ ಅದು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಇದರ ಬಗ್ಗೆ ಗಮನ ಹರಿಸಿ.

ಕ್ಯಾಕ್ಟಸ್ ಗಿಡ : ವಾಸ್ತು ಪ್ರಕಾರ ಮನೆಯ ಅಂಗಳದಲ್ಲಿ ಯಾವುದೇ ರೀತಿಯ ಮುಳ್ಳಿನ ಗಿಡವಿದ್ದರೂ ಸಹಾ ಅದು ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ. ಆದ್ದರಿಂದ ಇಂತಹ ಸಸ್ಯಗಳು ಇದ್ದರೆ ಕುಟುಂಬದ ಸದಸ್ಯರ ನಡುವೆ ವೈಮನಸ್ಸು ಉಂಟಾಗುತ್ತದೆ. ಆದ್ದರಿಂದ ಕ್ಯಾಕ್ಟಸ್ ಆಗಿರಲಿ ಅಥವಾ ಇನ್ನಾವುದೇ ಮುಳ್ಳಿನ ಗಿಡವೇ ಆಗಿರಲಿ ಮನೆಯಂಗಳದಲ್ಲಿ ಇರದೇ ಇರುವುದೇ ಉತ್ತಮ ಎನ್ನುತ್ತದೆ ವಾಸ್ತು ಶಾಸ್ತ್ರ.

ಖರ್ಜೂರದ ಗಿಡ : ಮನೆಯಲ್ಲಿ ಖರ್ಜೂರದ ಗಿಡವನ್ಬು ನೆಡುವುದು ಶುಭವಲ್ಲ ಎನ್ನುತ್ತಾರೆ ವಾಸ್ತು ತಜ್ಞರು. ಇದು ಕೂಡಾ ಮುಳ್ಳನ್ನು ಹೊಂದಿರುವ ಸಸ್ಯವಾಗಿದ್ದು, ಇಂತಹ ಗಿಡವನ್ನು ಬೆಳೆಸಿದರೆ ಇದು ಆ ಮನೆಯ ಕುಟುಂಬದ ಸದಸ್ಯರ ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಖರ್ಜೂರ ಆರೋಗ್ಯದ ದೃಷ್ಟಿಯಿಂದ ಹಿತಕರವಾದರೂ, ಮನೆಯಲ್ಲಿ ಬೆಳೆಸುವುದು ಶುಭವಲ್ಲ.

ದೈತ್ಯ ಕ್ಯಾಲೋಟ್ರೋಪ್ : ಈ ಸಸ್ಯದಿಂದ ಹಾಲು ಹೊರಗೆ ಬರುತ್ತದೆ. ಆದ್ದರಿಂದ ಇದು ನಕಾರಾತ್ಮಕ ಎನ್ನುವ ವಾಸ್ತು ತಜ್ಞರು ಇದು ಸಹಾ ಕುಟುಂಬದ ಸದಸ್ಯರ ಆರ್ಥಿಕ ಅಥವಾ ಇನ್ನಿತರ ಯಾವುದೇ ರೀತಿಯ ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ ಎಂದೇ ಹೇಳುತ್ತಾರೆ. ವಾಸ್ತು ಪ್ರಕಾರ ಈ ಸಸ್ಯಗಳನ್ನು ಆದಷ್ಟು ಮನೆಯಿಂದ ಅಥವಾ ಮನೆಯ ಸುತ್ತ ಮುತ್ತ ಬೆಳೆಸದಿರುವುದೇ ಉತ್ತಮ ಎನ್ನಲಾಗಿದೆ.

Leave a Comment