ಮನೆಯ ಮುಂದಿರುವ ತುಳಸಿಯಲ್ಲಿ ಇಂತಹ ಬದಲಾವಣೆ ಕಂಡರೆ ಎಚ್ಚರವಾಗಿರಿ: ಶುಭಾಶುಭ ಸಂಕೇತ ನೀಡುತ್ತದೆ ತುಳಸಿ

Entertainment Featured-Articles News ಜೋತಿಷ್ಯ

ತುಳಸಿ ಗಿಡ ಸಾಮಾನ್ಯವಾಗಿ ಪ್ರತಿಯೊಂದು ಮನೆಯ ಮುಂದೆ ಸಹಾ ಇದ್ದೇ ಇರುತ್ತದೆ. ನಮ್ಮಲ್ಲಿ ಅನೇಕ ಮಹಿಳೆಯರು ಇಂದಿಗೂ ಮುಂಜಾನೆ ತುಳಸಿ ಪೂಜೆಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವಿಯ ಸ್ಥಾನವನ್ನು ನೀಡಲಾಗಿದೆ. ತುಳಸಿಯನ್ನು ಭಕ್ತಿ ಶ್ರದ್ಧೆಯಿಂದ ಆರಾಧನೆ ಮಾಡಲಾಗುತ್ತದೆ.‌ ಧಾರ್ಮಿಕ ವಿಚಾರಗಳು ಅಥವಾ ಪುರಾಣಗಳನ್ನು ಅಧ್ಯಯನ ಮಾಡಿದಾಗ ಅಲ್ಲಿ ತುಳಸಿ ಶ್ರೀ ಮಹಾವಿಷ್ಣು ವಿಗೆ ಅತ್ಯಂತ ಪ್ರಿಯವಾದುದು ಎಂದು ಎನ್ನುವ ಮಾನ್ಯತೆ ಗಳು ಇವೆ. ಆದ್ದರಿಂದಲೇ ಜನರು ತುಳಿಸಿಗೆ ಕೂಡಾ ವಿಶೇಷ ಸ್ಥಾನ ನೀಡಿ, ಪ್ರತಿದಿನ ಅದನ್ನು ಪೂಜಿಸುತ್ತಾರೆ.

ಯಾರ ಮನೆಯ ಅಂಗಳದಲ್ಲಿ ತುಳಸಿ ಇರುತ್ತದೆಯೋ ಅಲ್ಲಿ ತುಳಸಿಯ ಪೂಜೆ ಪ್ರತಿದಿನ ನಡೆಯುತ್ತದೆ. ಮುಂಜಾನೆ ಮತ್ತು ಸಂಜೆ ತುಳಸಿಗೆ ನೀರನ್ನು ಹಾಕುತ್ತಾರೆ. ತುಳಸಿ ಇರುವ ಕಡೆಗಳಲ್ಲಿ ಸುಖ ಮತ್ತು ಸಮೃದ್ಧಿಗಳು ಇರುತ್ತವೆ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಎಲ್ಲಿ ತುಳಸಿ ಹಸಿರಾಗಿ ಇರುವುದೋ ಅಲ್ಲಿ ಮಾತೆ ಮಹಾಲಕ್ಷ್ಮಿಯ ವಾಸವಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಸಹಾ ತುಳಸಿಗೆ ವಿಶೇಷವಾದ ಮಾನ್ಯತೆಯನ್ನು ನೀಡಲಾಗಿದ್ದು, ಪ್ರತಿ ಮನೆಯಲ್ಲೂ ತುಳಿಸಿ ಇರುವುದು ಶ್ರೇಷ್ಠ ಎನ್ನಲಾಗುತ್ತದೆ.

ಶಾಸ್ತ್ರಗಳ ಪ್ರಕಾರ ನಮ್ಮ ಮನೆಯ ಅಂಗಳದಲ್ಲಿ ಇರುವ ತುಳಸಿಯು ನಮಗೆ ಎದುರಾಗಲಿರುವ ತೊಂದರೆ ಅಥವಾ ಸಮಸ್ಯೆಗಳ ಕುರಿತಾಗಿ ಮುನ್ಸೂಚನೆಯನ್ನು ನೀಡುತ್ತದೆ ಎನ್ನಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವ ತುಳಸಿಯಲ್ಲಿ ಆಗುವ ಬದಲಾವಣೆಗಳು ಶುಭ ಹಾಗೂ ಅಶುಭದ ಸಂಕೇತ ನೀಡುತ್ತದೆ ಎಂದು ಹೇಳಲಾಗಿದೆ. ಇಂತಹ ಬದಲಾವಣೆಗಳನ್ನು ಗಮನಿಸಿ ಮುಂದೆ ಬರುವ ಸಮಸ್ಯೆಗಳ ನಿವಾರಣೆಗೆ ಅಗತ್ಯವಿರುವ ಕ್ರಮಗಳನ್ನು ನಾವು ಅನುಸರಿಸಬೇಕಾಗಿರುತ್ತದೆ. ಹಾಗಾದರೆ ಬನ್ನಿ ತುಳಸಿ ನೀಡುವ ಸಂಕೇತಗಳ ಬಗ್ಗೆ ತಿಳಿಯೋಣ.

ತುಳಿಸಿ ಒಣಗಿದರೆ ಬರುತ್ತದೆ ದಾರಿದ್ರ್ಯ : ವಾತಾವರಣದಲ್ಲಿ ಯಾವುದೇ ಬದಲಾವಣೆ ಇಲ್ಲದೇ ಹೋದರೂ ಇದ್ದಕ್ಕಿದ್ದಂತೆ ತುಳಸಿ ಒಣಗಿ, ಅದರ ಎಲೆಗಳು ಉದುರಲು ಆರಂಭಿಸಿತು ಎಂದರೆ ಯಾವುದೋ ಒಂದು ಸಮಸ್ಯೆ ಎದುರಾಗಲಿದೆ ಎನ್ನುವ ಸಂಕೇತವನ್ನು ಅದು ನೀಡುತ್ತದೆ. ತುಳಸಿ ಒಣಗಿದರೆ ಮನೆಯಲ್ಲಿ ದಾರಿದ್ರ್ಯ, ದುಃಖ ಮತ್ತು ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ ಎನ್ನಲಾಗುತ್ತದೆ. ಆಗ ಕೂಡಲೇ ಶ್ರೀ ಮಹಾವಿಷ್ಣು ವಿನ ಆರಾಧನೆ ಮಾಡಬೇಕು. ಒಣಗಿದ ಗಿಡ ತೆಗೆದು ಅಲ್ಲಿ ಹೊಸ ಗಿಡವನ್ನು ನೆಡಬೇಕು.

ತುಳಸಿ ಗಿಡ ಮತ್ತೆ ಮತ್ತೆ ಒಣಗುವುದು : ಒಂದು ವೇಳೆ ಒಣಗಿದ ಗಿಡದ ಬದಲು ಹೊಸದೊಂದು ತುಳಸಿ ಗಿಡವನ್ನು ತಂದು ನೆಟ್ಟ ಮೇಲೂ ಅದು ಮತ್ತೆ ಮತ್ತೆ ಒಣಗಿದರೆ ಇದು ಪಿತೃ ದೋಷದ ಸಂಕೇತವನ್ನು ನೀಡುತ್ತದೆ. ವಾಸ್ತುವಿನ ಪ್ರಕಾರ ಇಂತಹ ಸಂದರ್ಭಗಳಲ್ಲಿ ದಾನವನ್ನು ಮಾಡುವುದು ಒಳ್ಳೆಯದು ಎನ್ನಲಾಗಿದೆ. ಬಡವರಿಗೆ ಧಾನ್ಯ ಹಾಗೂ ಹಣ ದಾನ ನೀಡುವುದು, ಮಂದಿರಗಳಲ್ಲಿ ಪಂಡಿತರಿಗೆ ಕೊಡುಗೆ ನೀಡುವುದು ಈ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಎನ್ನಲಾಗಿದೆ.

Leave a Reply

Your email address will not be published.