ಮನೆಯಿಂದ ಹೊರಟ ತರಕಾರಿ ತರಲು, ಮನೆಗೆ ಮರಳಿದ ಕೋಟ್ಯಾಧೀಶನಾಗಿ!! ಅದೃಷ್ಟ ಅಂದ್ರೆ ಇದು.

0 2

ಅದೃಷ್ಟ ಎನ್ನುವುದು ಯಾರಿಗೆ? ಹೇಗೆ? ಎಲ್ಲಿ?? ಒಲಿದು ಬರುತ್ತದೆ ಎಂದು ಯಾರಿಂದಲೂ ಕೂಡಾ ಊಹೆ ಮಾಡುವುದು ಸಹಾ ಸಾಧ್ಯವಿಲ್ಲ. ಅದೂ ಅಲ್ಲದೇ ದೇವರು ಒಲಿದರೆ ಅದೃಷ್ಟವು ನಿಮ್ಮ ಮನೆ ಬಾಗಿಲನ್ನು ತಟ್ಟುತ್ತದೆ ಎಂದು ಹೇಳಲಾಗುತ್ತದೆ. ಅದು ಮಾತ್ರವೇ ಅಲ್ಲದೇ ದೇವರು ಕರುಣಿಸಿದರೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನೇ ಆತ ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ ಹಾಗೂ ಅನೇಕರು ಅದನ್ನು ನಂಬುತ್ತಾರೆ. ನಮ್ಮ ಸಾಮರ್ಥ್ಯವನ್ನು ಮೀರಿದ ಅದೃಷ್ಟವನ್ನು ದೇವರು ಕರುಣಿಸುತ್ತಾನೆ. ಈಗ ಇಂತಹದೇ ಒಂದು ಅದೃಷ್ಟವು ಕೇರಳದ ಸದಾನಂದನ್ ಅವರಿಗೆ ಒಲಿದು ಬಂದಿದೆ.

ವೃತ್ತಿಯಿಂದ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಮಾಡುವ ಸದಾನಂದನ್ ಅವರು ತಾನು ಬಹುಕೋಟಿ ಮೊತ್ತದ ಲಾಟರಿಯಲ್ಲಿ ಮೊದಲ ಬಹುಮಾನವನ್ನು ಪಡೆಯುತ್ತೇನೆ ಎಂದು ಕನಸಿನಲ್ಲಿ ಸಹಾ ಊಹಿಸಿರಲಿಲ್ಲ. ಕೇರಳದ ಕುಂದಾಯಂಪದಿ ನಿವಾಸಿಯಾಗಿರುವ ಸದಾನಂದನ್ ಭಾನುವಾರ ಬೆಳಿಗ್ಗೆ 300 ರೂಪಾಯಿಗಳನ್ನು ನೀಡಿ ಲಾಟರಿಯನ್ನು ಖರೀದಿ ಮಾಡಿದ್ದರು. ಅವರು ಈ ಲಾಟರಿ ಟಿಕೇಟನ್ನು, ಬಹುಮಾನ ಘೋಷಣೆಯಾಗುವ ಕೆಲವೇ ಗಂಟೆಗಳ ಮೊದಲು ಖರೀದಿ ಮಾಡಿದ್ದರು ಎನ್ನಲಾಗಿದ್ದು, ಸದಾನಂದನ್ ಅವರು ಈ ಲಾಟರಿ ಯನ್ನು ಕೊಂಡು ಕೊಂಡಿದ್ದರು ಎನ್ನಲಾಗಿದೆ.‌

ಮೊದಲ ಬಹುಮಾನವಾಗಿ ಬರೋಬ್ಬರಿ 12 ಕೋಟಿ ರೂಪಾಯಿಗಳನ್ನು ಲಾಟರಿಯಿಂದ ಪಡೆದುಕೊಂಡಿದ್ದಾರೆ. ಸದಾನಂದನ್ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ, ಅಂದು ಬೆಳಿಗ್ಗೆ ಮಾರುಕಟ್ಟೆಯಿಂದ ಮನೆಗೆ ಬೇಕಾದ ತರಕಾರಿ ಹಾಗೂ ಅನ್ಯ ಸಾಮಗ್ರಿಗಳನ್ನು ತರಲು ಹೋಗುತ್ತಿದ್ದಾಗ, ದಾರಿಯಲ್ಲಿ ಲಾಟರಿ ಟಿಕೇಟನ್ನು ಕೊಂಡುಕೊಂಡೆ ಎನ್ನುವ ಮಾತನ್ನು ಹೇಳಿದ್ದಾರೆ. ಅದೇ ಅವರಿಗೆ ಅದೃಷ್ಟವನ್ನು ಹೊತ್ತು ತಂದಿದೆ.

ಸದಾನಂದನ್ ಅವರು ಕಳೆದ ಕೆಲವು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಈ ಬಾರಿ ಅವರ ಅದೃಷ್ಟ ಖುಲಾಯಿಸಿದ್ದು, ಬರೋಬ್ಬರಿ 12 ಕೋಟಿ ಗಳನ್ನು ಗೆದ್ದುಕೊಂಡಿದ್ದಾರೆ. ಲಾಟರಿ ಮೂಲಕ ತನಗೆ ಬಂದಿರುವ ಬಹುಮಾನದ ಹಣವನ್ನು ತಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸುವುದಕ್ಕಾಗಿ ಸದುಪಯೋಗ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಈ ವಿಶೇಷ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿತ್ತು.

ಸದಾನಂದನ್ ತನಗೆ 12 ಕೋಟಿ ಜಾಕ್ಪಾಟ್ ಹೊಡೆದಿದೆ ಎಂದಾಗ ಒಂದು ಕ್ಷಣ ನಂಬುವುದು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಈ ಲಾಟರಿಯಲ್ಲಿ ಎರಡನೇ ಬಹುಮಾನ 3 ಕೋಟಿ ಮತ್ತು ಮೂರನೇ ಬಹುಮಾನ 60 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಕಂಪನಿಯು ಮೊದಲು 24 ಲಕ್ಷ ಟಿಕೆಟ್ ಗಳನ್ನು ಮುದ್ರಿಸಿತ್ತು. ಎಲ್ಲಾ ಟಿಕೆಟ್ ಗಳು ಮಾರಾಟವಾದ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ 8ಲಕ್ಷ, ಅನಂತರ 9.4 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡಿತ್ತು. ಕಳೆದ ಸೆಪ್ಟೆಂಬರಿನಲ್ಲಿ ಸಹಾ ಆಟೋ ಚಾಲಕ ಒಬ್ಬರಿಗೆ 12 ಕೋಟಿ ಲಾಟರಿ ಬಂದಿತ್ತು ಎನ್ನಲಾಗಿದೆ.

Leave A Reply

Your email address will not be published.