ಮನೆಯಲ್ಲಿ ಈ ಗಿಡಗಳು ಇದ್ದರೆ ಎಸಿ ಅಥವಾ ಕೂಲರ್ ಗಳ ಅವಶ್ಯಕತೆ ಖಂಡಿತ ಇರೋದಿಲ್ಲ!!

Entertainment Featured-Articles Health News
61 Views

ಬೇಸಿಗೆಯು ಇನ್ನೇನು ಬರಲಿದೆ ಎನ್ನುವಾಗಲೇ, ಈಗಾಗಲೇ ಬಿಸಿಯ ಬೇಗೆ ಏರಲು ಆರಂಭವಾಗಿದೆ. ಹಗಲಿನ ವೇಳೆ ಉಷ್ಣತೆಯ ಮಟ್ಟ ಏರುತ್ತಿದೆ. ಇನ್ನು ಕೆಲವು ದಿನಗಳಲ್ಲೇ ಬಿಸಿಲ ಬೇಗೆ ಇನ್ನಷ್ಟು ಹೆಚ್ಚುವುದು ಖಂಡಿತ ಎನ್ನುವಂತಿದೆ ವಾತಾವರಣ. ಬಿಸಿಯ ಬೇಗೆಗೆ ಕಂಗೆಟ್ಟ ಕೆಲವರು ಈಗಾಗಲೇ ಕೂಲರ್ ಗಳು ಹಾಗೂ ಎಸಿ ಗಳ ಮೊರೆ ಹೋಗಿದ್ದಾರೆ. ಆದರೆ ಎಸಿ ಮತ್ತು ಕೂಲರ್ ಗಳನ್ನು ಹೆಚ್ಚಾಗಿ ಬಳಸುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಕೂಡಾ ಕೆಲವು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎನ್ನುವ ವಿಷಯ ತಿಳಿದಿದೆಯಾದರೂ, ಬಿಸಿಲ ಬೇಗೆಗೆ ಬೇರೆ ದಾರಿಯಿಲ್ಲದೇ ಇದು ಅನಿವಾರ್ಯ ಎನಿಸಿದೆ.

ಆದರೆ ಕೆಲವು ವಿಶೇಷವಾದ ಸಸ್ಯಗಳನ್ನು ಮನೆಯಲ್ಲಿ ಇಟ್ಟು ಕೊಂಡರೆ ಎಸಿ ಮತ್ತು ಕೂಲರ್ ಗಳ ಅವಶ್ಯಕತೆ ಇಲ್ಲ ಎನ್ನಲಾಗುತ್ತದೆ. ಅಲ್ಲದೇ ಇಂತಹ ಗಿಡಗಳು ನಮಗೆ ತಣ್ಣನೆಯ ಅನುಭೂತಿಯನ್ನು ನೀಡುವುದು ಮಾತ್ರವೇ ಅಲ್ಲದೇ ಕೆಲವು ರೋಗಗಳನ್ನು ಸಹಾ ನಮ್ಮಿಂದ ದೂರ ಇಡುತ್ತವೆ ಎನ್ನಲಾಗಿದೆ. ಅದಲ್ಲದೇ ಇವುಗಳು ಎಸಿ, ಕೂಲರ್ ಗಳ ಹಾಗೆ ಪರಿಸರದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮಗಳನ್ನು ಸಹಾ ಉಂಟು ಮಾಡುವುದಿಲ್ಲ. ಹಾಗಾದರೆ ಬನ್ನಿ ಆ ಗಿಡಗಳು ಯಾವುವು ಎನ್ನುವುದನ್ನು ನಾವು ತಿಳಿಯೋಣ.

ಬೆಂಜಮಿನ್ ಫೈಕಸ್ : ಈ ಗಿಡಗಳನ್ನು ಮನೆಯ ಒಳಗಿನ ವಾತಾವರಣದಲ್ಲಿ ಬೆಳೆಸಿದರೆ, ಇದು ಕೋಣೆಯೊಳಗಿನ ವಾತಾವರಣವನ್ನು ತಂಪಾಗಿ ಇಡುವುದು ಮಾತ್ರವೇ ಅಲ್ಲದೇ, ಮನೆಯನ್ನು ಪ್ರವೇಶಿಸುವ ಬಿಸಿ ಗಾಳಿಯನ್ನು ಸಹಾ ತಣ್ಣಗೆ ಪರಿವರ್ತಿಸುತ್ತದೆ. ಇನ್ನು ವಿಶೇಷ ಏನೆಂದರೆ ಕಲುಷಿತ ಗಾಳಿಯನ್ನು ಸಹಾ ಶುಭ್ರವಾಗಿಸುತ್ತದೆ. ನಮಗೆ ಒಳ್ಳೆಯ ಆಮ್ಲಜನಕ ನೀಡುವ ಈ ಗಿಡವನ್ನು ಬೆಳೆಸಲು ಹೆಚ್ಚು ಖರ್ಚಾಗುವುದಿಲ್ಲ. ಒಂದು ಹೂ ಕುಂಡದಲ್ಲಿ ಇಟ್ಟು ಬೆಳೆಸಿದರೆ ಸಾಕು.

ಸ್ನೇಕ್ ಪ್ಲಾಂಟ್ : ಈ ಗಿಡಗಳಲ್ಲಿ ತೇವಾಂಶ ಬಹಳ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಇದು ಹೊರಗಿನಿಂದ ಮನೆಯೊಳಗೆ ಪ್ರವೇಶಿಸುವ ಬಿಸಿ ಗಾಳಿಯನ್ನು ಸಹಾ ತಂಪಾಗಿ ಬದಲಿಸಿ ಮನೆಯ ವಾತಾವರಣವನ್ನು ತಂಪಾಗಿರಿಸುತ್ತದೆ. ಮನೆಯ ಕಿಟಕಿಯಲ್ಲಿ ಈ ಗಿಡಗಳನ್ನು ಇಟ್ಟರೆ ಹೊರಗಿನಿಂದ ಬೀಸುವ ಗಾಳಿ ತಂಪಾಗಿ ಮನೆಯೊಳಗೆ ಪ್ರವೇಶ ಮಾಡುತ್ತದೆ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ.

ಬೀಸ್ಟನ್ ಫೆರ್ನ್ : ಈ ಗಿಡಗಳು ಕಲುಷಿತವಾಗಿರುವ ಗಾಳಿಯನ್ನು ಶುಭ್ರ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೊರಗಿನಿಂದ ಮನೆಯೊಳಕ್ಕೆ ಪ್ರವೇಶಿಸುವ ವಿಷಕಾರಿ ಗಾಳಿಯನ್ನು ಫಿಲ್ಟರ್ ಮಾಡಿ ಒಳ್ಳೆಯ ಗಾಳಿಯನ್ನು ನಮಗೆ ನೀಡುತ್ತದೆ. ಇದು ಮನೆಯ ವಾತಾವರಣವನ್ನು ತಂಪಾಗಿ ಇಡುತ್ತದೆ. ಆದರೆ ಮುಖ್ಯವಾದ ವಿಷಯವೆಂದರೆ ಇದನ್ನು ಸೂರ್ಯನ ಕಿರಣಗಳಿಗೆ ಹೆಚ್ಚಾಗಿ ಇಡಬಾರದು.

ಬಾಂಬು ಪ್ಲಾಂಟ್ : ಈ ಗಿಡಗಳನ್ನು ಮನೆಗಳಲ್ಲಿ ಮತ್ತು ಕಛೇರಿಗಳಲ್ಲಿ ಇಡುವುದರಿಂದ ಇದು ಅಲಂಕಾರಿಕವಾಗಿ ಕಾಣುವುದು ಮಾತ್ರವೇ ಅಲ್ಲದೇ ತಂಪನ್ನು ಕೂಡಾ ನೀಡುತ್ತದೆ. ಇದಲ್ಲದೇ ಕಲುಷಿತ ಗಾಳಿಯನ್ನು ಸಹಾ ಹೀರಿಕೊಂಡು ಶುದ್ಧ ಗಾಳಿಯನ್ನು ನೀಡುವ ಸಾಮರ್ಥ್ಯವನ್ನು ಕೂಡಾ ಈ ಗಿಡವು ಹೊಂದಿದೆ.

Leave a Reply

Your email address will not be published. Required fields are marked *