ಮನುಷ್ಯರನ್ನು ಕಂಡರೆ ಉಷ್ಟ್ರ ಪಕ್ಷಿಗಳಿಗೆ ಸೆ” ಕ್ಸ್ ಆಸೆ ಹೆಚ್ಚುತ್ತದೆ: ಶಾಕಿಂಗ್ ಸತ್ಯ ಬಿಚ್ಚಿಟ್ಟ ತಜ್ಞರು

Entertainment Featured-Articles News Wonder

ಹಾರಲು ಸಾಧ್ಯವಾಗದಿದ್ದರೂ, ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಓಡಬಲ್ಲ ಪಕ್ಷಿ ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ ಉಷ್ಟ್ರ ಪಕ್ಷಿ. ಅಲ್ಲದೇ ಉಷ್ಟ್ರ ಪಕ್ಷಿ ಜಂಪ್ ಮಾಡುವ ಮೂಲಕ ಸುಮಾರು 3 ರಿಂದ 5 ಅಡಿ ದೂರವನ್ನು ಕವರ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಬಹಳ ವೇಗವಾಗಿ ಸಂಚರಿಸುವ ಸಾಮರ್ಥ್ಯವನ್ನು ಪಡೆದಿರುವ ಈ ಹಕ್ಕಿಯು ಗಂಟೆಗೆ 75 ಕಿಮೀ ದೂರವನ್ನು ಕ್ರಮಿಸಬಲ್ಲದು. ಇದು ಎತ್ತರವಾದ ಮತ್ತು ತೂಕವನ್ನು ಹೊಂದಿರುವ ಪಕ್ಷಿಯಾಗಿದೆ. ಈ ಹಕ್ಕಿಯ ತೂಕ ಸುಮಾರು 100 ರಿಂದ 150 ಕೆಜಿ ತೂಕವನ್ನು ಹೊಂದಿರುತ್ತವೆ ಎನ್ನಲಾಗಿದೆ.

ಈ ಹಕ್ಕಿಗಳು ಗಿಡಗಳನ್ನು, ಕೀಟಗಳನ್ನು ಹಾಗೂ ಸಣ್ಣ ಸಣ್ಣ ಜೀವಿಗಳನ್ನು ತಿಂದು ಬದುಕುತ್ತವೆ. ಸಾಮಾನ್ಯವಾಗಿ ಪಕ್ಷಿಗಳ ಕಾಲಿನಲ್ಲಿ ಮೂರು ಅಥವಾ ನಾಲ್ಕು ಬೆರಳುಗಳು ಇರುತ್ತವೆ. ಆದರೆ ಉಷ್ಟ್ರ ಪಕ್ಷಿಯ ಕಾಲಿನಲ್ಲಿ ಎರಡು ಬೆರಳುಗಳು ಮಾತ್ರ ಇರುತ್ತದೆ. ಸಾಮಾನ್ಯವಾಗಿ ಸದಾ ಶಾಂತವಾಗಿರುವ ಈ ಪಕ್ಷಿಯು ಆತ್ಮರಕ್ಷಣೆ ವಿಚಾರ ಬಂದರೆ ತನ್ನ ಕಾಲಿನ ಒಂದೇ ಒಂದು ಹೊಡೆತದಿಂದ‌ ಮನುಷ್ಯನನ್ನು ಕೊಲ್ಲುವ ಶಕ್ತಿ ಅದಕ್ಕಿದೆ ಎಂದರೆ ಅಚ್ಚರಿ ಆಗಬಹುದು ಆದರೆ ಅದು ವಾಸ್ತವವಾಗಿದೆ.

ಉಷ್ಟ್ರ ಪಕ್ಷಿಯ ಬಗ್ಗೆ ಸಂಶೋಧನೆ ನಡೆಸಿರುವ ತಜ್ಞರು ಇದೀಗ ಒಂದು ಹೊಸ ಶಾಕಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಹೌದು ತಜ್ಞರು ಹೇಳಿರುವ ಈ ವಿಚಾರ ಅಕ್ಷರಶಃ ಶಾ ಕಿಂ ಗ್ ಆಗಿದೆ. ತಜ್ಞರ ಪ್ರಕಾರ ಈ ಪಕ್ಷಿಗಳಿಗೆ ಮನುಷ್ಯರು ಕಾಣಿಸಿದರೆ ಅವರೊಡನೆ ಸೆ” ಕ್ಸ್ ಮಾಡಬೇಕು ಎನ್ನುವ ಆಸೆ ಹೆಚ್ಚಾಗುತ್ತದೆಯಂತೆ. ವರದಿಗಳ ಪ್ರಕಾರ 1990 ರಲ್ಲೇ ಹೊರ ಬಂದಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಪಶು ಪಾಲನೆ ಮಾಡುತ್ತಿದ್ದ ರೈತನೊಬ್ಬ ಉಷ್ಟ್ರ ಪಕ್ಷಿಯಲ್ಲಿನ ಈ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎನ್ನಲಾಗಿದೆ.

ಮಾನವರು ಆಸ್ಟ್ರಿಚ್‌ಗಳ ಸುತ್ತಲೂ ವಾಸಿಸುತ್ತಿದ್ದರೆ ಅವುಗಳ ಲೈಂ ಗಿ ಕ ನಡವಳಿಕೆಯು ಬದಲಾಗುತ್ತದೆ ಎಂದು ಕಂಡುಬಂದಿದೆ. ಅವು ಪದೇ ಪದೇ ತಮ್ಮ ರೆಕ್ಕೆಗಳನ್ನು ಮನುಷ್ಯರ ಮುಂದೆ ಬಡಿಯುತ್ತವೆ, ಕೂತು ಎದ್ದು ಮಾಡುತ್ತವೆ, ಕತ್ತು ಬೀಸುತ್ತಾ..ವಿಶೇಷ ನೃತ್ಯ ಮಾಡುತ್ತವೆ. ಇದನ್ನು ಆಕರ್ಷಿಸುವ ನೃತ್ಯ ಎಂದು ಕರೆಯಲಾಗುತ್ತದೆ. ಆಸ್ಟ್ರಿಚ್‌ನಲ್ಲಿ ಇಂತಹ ಗುಣ ಬಹಿರಂಗವಾದ, ಈ ಮಾಹಿತಿಯನ್ನು ಖಚಿತಪಡಿಸಲು ವಿಜ್ಞಾನಿಗಳು ಒಂದು ಸಂಶೋಧನೆ ನಡೆಸಿದ್ದಾರೆ.

ಈ ಸಂಶೋಧನೆಗಾಗಿ, ಆಸ್ಟ್ರಿಚ್‌ಗಳ ಸಂಖ್ಯೆ ಹೆಚ್ಚಿರುವ ಇಂಗ್ಲೆಂಡ್‌ನಲ್ಲಿ ಎರಡು ಫಾರ್ಮ್‌ಗಳನ್ನು ಆಯ್ಕೆ ಮಾಡಿ, IFL ಸೈನ್ಸ್ ವರದಿಗಳಂತೆ, ಇದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಎರಡು ಅಧ್ಯಯನಗಳನ್ನು ನಡೆಸಿದರು. ಅವರ ಸಂಶೋಧನೆ ಎರಡು ವರ್ಷಗಳ ಕಾಲ ನಡೆಯಿತು. ಮೊದಲ ಅಧ್ಯಯನದಲ್ಲಿ, ಮಾನವರು ಆಸ್ಟ್ರಿಚ್ ಅನ್ನು ಹತ್ತಿರ ಇರಿಸಿಕೊಂಡಿದ್ದರು. ಆದರೆ ಎರಡನೆಯ ಅಧ್ಯಯನದಲ್ಲಿ ಅವುಗಳನ್ನು ಮನುಷ್ಯರಿಂದ ದೂರ ಇರಿಸಲಾಗಿತ್ತು.

ಬ್ರಿಟಿಷ್ ಪೌಲ್ಟ್ರಿ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಮಾನವರು ಆಸ್ಟ್ರಿಚ್‌ಗಳನ್ನು ಸಮೀಪಿಸಿದಾಗ, ಅವುಗಳ ಚಲನ ವಲನಗಳು ಬದಲಾಗಿವೆ. ಉದಾಹರಣೆಗೆ, ಮನುಷ್ಯರು ಹತ್ತಿರ ಬಂದಾಗ ಹೆಣ್ಣು ಆಸ್ಟ್ರಿಚ್‌ಗಳು ಲೈಂಗಿಕತೆಗಾಗಿ ಹೆಚ್ಚು ಹಾತೊರೆದಿವೆ. ಹೆಣ್ಣು ಆಸ್ಟ್ರಿಚ್ ನಲ್ಲಿ ಈ ನಡವಳಿಕೆಯು ಎರಡು ವರ್ಷಗಳವರೆಗೆ ಮುಂದುವರೆಯಿತು ಎನ್ನಲಾಗಿದೆ. ಆದರೆ ಕೆಲವು ಹೆಣ್ಣು ಆಸ್ಟ್ರಿಚ್‌ಗಳು ಹಾಗೆ ಮಾಡಲಿಲ್ಲ. ಅದೇ ಸಮಯದಲ್ಲಿ, ಆದರೆ ಮನುಷ್ಯರ ಅನುಪಸ್ಥಿತಿಯಲ್ಲಿ ಅವು ಸಾಮಾನ್ಯವಾಗಿರುತ್ತಿದ್ದವು.

ವಿಜ್ಞಾನಿಗಳ ಅಧ್ಯಯನವು ಬ್ರಿಟನ್‌ನಲ್ಲಿ 68 % ಆಸ್ಟ್ರಿಚ್‌ಗಳು ಮನುಷ್ಯರನ್ನು ನೋಡಿದಾಗ ಅವುಗಳ ಲೈಂಗಿಕ ಬಯಕೆ ದ್ವಿಗುಣಗೊಳ್ಳುತ್ತಿತ್ತು ಎಂದು ಕಂಡುಹಿಡಿಯಲಾಗಿದೆ. ಇದು ವಿಶೇಷವಾಗಿ ಯುವ ಆಸ್ಟ್ರಿಚ್‌ಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಸತ್ಯವನ್ನು ಈಗ ಸಂಶೋಧನೆಯಿಂದ ದೃಢೀಕರಿಸಲಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪಕ್ಷಿಗಳನ್ನು ಬೆಳೆಸುವ ರೈತರಿಗೆ ಇದು ಈಗಾಗಲೇ ತಿಳಿದಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

Leave a Reply

Your email address will not be published. Required fields are marked *