ದಕ್ಷಿಣ ಸಿನಿಮಾ ರಂಗದಲ್ಲಿ ಛಾಪು ಮೂಡಿಸಿ, ಬಾಲಿವುಡ್ ಗೆ ಎಂಟ್ರಿ ನೀಡಿ ಅಲ್ಲಿ ಕೂಡಾ ವೈವಿದ್ಯಮಯ ಪಾತ್ರಗಳು, ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಧಾನ ಸಿನಿಮಾಗಳ ಪಾತ್ರಗಳ ಮೂಲಕವೇ ಬಾಲಿವುಡ್ ಗಮನ ಸೆಳೆದು, ಗಾಡ್ ಫಾದರ್ ಗಳ ನೆರವಿಲ್ಲದೇ ಬೆಳೆದು, ನಟನೆಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಬಾಲಿವುಡ್ ನಲ್ಲೊಂದು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿರು ನಟಿ ಎಂದರೆ ತಾಪ್ಸಿ ಪನ್ನು. ಈಗಾಗಲೇ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ನಂತಹ ದಿಗ್ಗಜ ನಟರೊಡನೆ ನಟಿಸಿದ್ದಾರೆ ತಾಪ್ಸಿ.
ಆದರೆ ಇವೆಲ್ಲವುಗಳ ನಡುವೆಯೇ ತಾಪ್ಸಿ ಒಂದು ಬೇಸರ, ಒಂದು ಅಸಮಾಧಾನ ಅಥವಾ ಒಂದು ನೋವನ್ನು ಹೊರಹಾಕಿದ್ದಾರೆ. ತಾಪ್ಸಿ ತಾನು ಇಷ್ಟೆಲ್ಲಾ ಸಿನಿಮಾಗಳನ್ನು ಮಾಡಿದ್ದರೂ ಸಹಾ ಬಾಲಿವುಡ್ ಎ ಲಿಸ್ಟ್ ನಲ್ಲಿರುವ ಸ್ಟಾರ್ ಹೀರೋಗಳು ಮಾತ್ರ ತಮ್ಮ ಜೊತೆ ನಟಿಸಲು ಇಷ್ಟ ಪಡುತ್ತಿಲ್ಲ ಹಾಗೂ ತೆರೆಯ ಮೇಲೆ ತನ್ನೊಂದಿಗೆ ಕಾಣಿಸಲು ಅವರು ಇಷ್ಟ ಪಡುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಾಪ್ಸಿ ಹೇಗೆ ಸ್ಟಾರ್ ನಟರು ಮಹಿಳಾಧಾರಿತ ಕಥೆಗಳಿಂದ ದೂರ ಇರುತ್ತಾರೆ ಎನ್ನುವುದನ್ನು ಹೇಳಿದ್ದಾರೆ.
ತಾಪ್ಸಿ ಅವರು ಈ ವೇಳೆ ಹೊಸ ನಟರು ಕೂಡಾ ತಮ್ಮ ಜೊತೆ ನಟಿಸಲು ಬಯಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಒಬ್ಬ ನಟನಂತೂ ತಾನು ದ್ವಿಪಾತ್ರದಲ್ಲಿ ನಟಿಸುತ್ತಿದ್ದ ಸಿನಿಮಾ ವನ್ನು ತಿರಸ್ಕರಿಸಿದ್ದು ಮಾತ್ರವೇ ಅಲ್ಲದೇ ಒಬ್ಬ ತಾಪ್ಸಿ ಯನ್ನು ಸಂಭಾಳಿಸುವುದೇ ಕಷ್ಟ ಆಗಿರುವಾಗ, ಈ ಸಿನಿಮಾದಲ್ಲಿ ಇಬ್ಬರು ಎಂದರೆ ಹೇಗೆ?? ಎಂದು ಹೇಳಿದ್ದರಂತೆ. ಮತ್ತೊಬ್ಬ ನಟ ತಾಪ್ಸಿ ನಟಿಸುತ್ತಿರುವ ಲವ್ ಸ್ಟೋರಿ ಸಿನಿಮಾದಲ್ಲಿ, ಕಥೆಯ ಕೊನೆಯಲ್ಲಿ ನಾಯಕಿಯ ಮೇಲೆ ಸಿಂಪತಿ ಬರುವಂತೆ ಇರುವುದರಿಂದ ತಾನು ನಟಿಸುವುದಿಲ್ಲ ಎಂದು ಹೇಳಿದ್ದರಂತೆ.
ಆ ನಟ ತಾಪ್ಸಿ ಜೊತೆ ಮೊದಲು ಒಂದು ಸಿನಿಮಾದಲ್ಲಿ ನಟಿಸಿದ್ದವರೇ ಅಗಿದ್ದರಂತೆ. ಅವರು ತನ್ನ ಸಿನಿಮಾದಲ್ಲಿ ಖಂಡಿತ ನಟಿಸುತ್ತಾರೆಂದು ನಾನು ನಂಬಿದ್ದೆ, ಏಕೆಂದರೆ ಮೊದಲು ಅವರು ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನನ್ನ ಸಿನಿಮಾ ವಿಷಯದಲ್ಲಿ ನನ್ನ ನಂಬಿಕೆ ಸುಳ್ಳಾಯಿತು. ಅವರು ಸಿನಿಮಾ ಮಾಡಲು ಒಪ್ಪಲಿಲ್ಲ. ಇದೇ ಸತ್ಯ ಎನ್ನುವುದು ನನಗೆ ಅರ್ಥ ವಾಯಿತು ಎಂದಿದ್ದಾರೆ. ಪ್ರತಿ ಸಿನಿಮಾ ಮಾಡುವಾಗಲೂ ನಿರ್ಮಾಪಕರ ಜೊತೆ ಕುಳಿತಾಗ ಲಿಸ್ಟ್ ನಲ್ಲಿ ಇರುವ ಐದು ಜನ ಸ್ಟಾರ್ ನಟರಲ್ಲಿ ಒಂದಿಬ್ಬರು ಈ ಮೊದಲೇ ಸಿನಿಮಾ ಮಾಡಿರುತ್ತಾರೆ.
ಆದರೆ ಅವರೇ ಮತ್ತೆ ನನ್ನ ಸಿನಿಮಾಗಳಲ್ಲಿ ನಟಿಸಲು ಇಷ್ಟ ಪಡುವುದಿಲ್ಲ. ಏಕೆಂದರೆ ನಮ್ಮ ಸುತ್ತಲಿನ ಪರಿಸರ ಹೇಗೆ ನಿರ್ಮಾಣ ಆಗಿದೆಯೆಂದರೆ ತಮ್ಮ ಪಾತ್ರಕ್ಕೆ ಕೇವಲ 10% ಮಾತ್ರ ಪ್ರಾಮುಖ್ಯತೆ ಇದೆ ಎಂದು ತಿಳಿದ ಕೂಡಲೇ ನಟರು ನನ್ನ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ ಎನ್ನುವ ಮಾತನ್ನು ಹೇಳಿಕೊಂಡು, ಅಸಮಾಧಾನ, ಬೇಸರವನ್ನು ಹೊರ ಹಾಕಿದ್ದಾರೆ.