ಕಹಿ ಸತ್ಯ ನುಡಿದು, ಮನಸ್ಸಿಗೆ ನೋವುಂಟು ಮಾಡುತ್ತಿರುವ ಒಂದು ಫೋಟೋ: ವಿಶ್ವಾದ್ಯಂತ ಈಗ ಟ್ರೆಂಡಿಂಗ್
ಒಂದು ಫೋಟೋ, ಆ ಒಂದು ಫೋಟೋ ಈಗ ಜಗತ್ತಿನ ಎಲ್ಲೆಡೆ ವೈರಲ್ ಆಗಿದ್ದು, ಜನರ ಮನಸ್ಸನ್ನು ಕದಲಿಸುತ್ತಿದೆ. ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿರುವ ದಾ ಳಿ ಯು ಇದೀಗ ವಿಶ್ವದಾದ್ಯಂತ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಉಕ್ರೇನ್ ವಾಸಿಗಳ ಪರಿಸ್ಥಿತಿ ಕಂಡು ವಿಶ್ವದ ಹಲವು ರಾಷ್ಟ್ರಗಳ ಜನರು ಮರುಗುತ್ತಿದ್ದಾರೆ. ಯು ದ್ಧ ನಿಲ್ಲಿಸಿ, ರಾಜಕೀಯ ಕಾರಣಗಳಿಗಾಗಿ ಜನರ ಜೀವಕ್ಕೆ ಏಕೆ
ಕು ತ್ತು ಉಂಟು ಮಾಡುತ್ತಿರುವಿರಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಅಲ್ಲಿನ ಜನರ ಕ್ಷೇಮ ಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಇನ್ನು ಈ ವೇಳೆ ವೈರಲ್ ಆಗುತ್ತಿರುವ ಒಂದು ಫೋಟೋ ರಷ್ಯಾ ಅಧ್ಯಕ್ಷರು ರಷ್ಯನ್ನರ ಅಂಗೀಕಾರವನ್ನು ಪಡೆಯದೇ ಉಕ್ರೇನ್ ಮೇಲೆ ಯು ದ್ಧ ವನ್ನು ಘೋಷಣೆ ಮಾಡಿತಾ? ರಷ್ಯನ್ನರಿಗೆ ಈ ದಾ ಳಿ ಇಷ್ಟವಾಗಿಲ್ಲವೇ ? ಉಕ್ರೇನ್ ಜನರ ಪರಿಸ್ಥಿತಿ ಯನ್ನು ಕಂಡು ರಷ್ಯನ್ನರ ಮನಸ್ಸು ಕೂಡಾ ಭಾವುಕವಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡಲು ಆರಂಭಿಸಿದೆ. ಇನ್ನು ಈಗಾಗಲೇ ಉಕ್ರೇನ್ ನ ರಾಜಧಾನಿ ಕೀವ್ ರಷ್ಯಾ ಕೈ ವಶವಾಗಿದೆ ಎಂದು ಉಕ್ರೇನ್ ನ ಅಧ್ಯಕ್ಷರಾದ ಜೆಲೆನ್ ಸ್ಕಿ ಸ್ವತಃ ಹೇಳಿಕೆ ನೀಡಿದ್ದಾರೆ.
ಇನ್ನು ವೈರಲ್ ಫೋಟೋ ವಿಚಾರಕ್ಕೆ ಬಂದರೆ, ಈ ಫೋಟೋದಲ್ಲಿ ರಷ್ಯಾದ ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ಫಲಕವೊಂದನ್ನು ಹಿಡಿದು ಪ್ರದರ್ಶಿಸುತ್ತಿದ್ದು, ಅದೇ ವೇಳೆ ಅವರು ಉಕ್ರೇನ್ ನ ನಾಗರಿಕನನ್ನು ಅಪ್ಪಿಕೊಂಡಿರುವ ದೃಶ್ಯ ಇದಾಗಿದೆ. ರಷ್ಯಾದ ವ್ಯಕ್ತಿಯು ಹಿಡಿದಿರುವ ಫಲಕದಲ್ಲಿ ಎರಡು ಸಾಲುಗಳನ್ನು ಬರೆಯಲಾಗಿದ್ದು, ಅದರಲ್ಲಿ “ನಾನು ರಷ್ಯನ್, ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ” ( I am Russian, sorry for that ) ಎಂದು ಬರೆಯಲಾಗಿದೆ. ಈ ಫೋಟೋ ಈಗ ವಿಶ್ವ ಸಮುದಾಯದ ಗಮನವನ್ನು ಸೆಳೆದಿದೆ.
ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾ ಳಿ ಯ ಪರಿಣಾಮವಾಗಿ ಅಲ್ಲಿನ ಪ್ರಜೆಗಳು ಕಂಗಾಲಾಗಿದ್ದಾರೆ. ಹಿರಿಯರು, ಕಿರಿಯರು ಎನ್ನುವ ಬೇಧವಿಲ್ಲದೇ ಉಕ್ರೇನ್ ವಾಸಿಗಳು ರಕ್ಷಣೆಗಾಗಿ ಹಾತೊರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಉಕ್ರೇನ್ ಪರಿಸ್ಥಿತಿಯ ಹೃದಯ ವಿ ದ್ರಾ ವ ಕ ದೃಶ್ಯಗಳು ವೈರಲ್ ಆಗಿದ್ದು, ವಿಶ್ವದ ಹಲವು ರಾಷ್ಟ್ರಗಳು ರಷ್ಯಾದ ಆ ಕ್ರ ಮಣವನ್ನು ತೀವ್ರವಾಗಿ ಖಂ ಡಿ ಸುತ್ತಿವೆ.