ಮನಸ್ಸಲ್ಲೇ ಇಲ್ಲದ ಪ್ರೀತಿ ಇನ್ನು ಮೈಮೇಲೆ ಏಕೆ? ಹೊಸ ನಿರ್ಧಾರಕ್ಕೆ ಮುಂದಾದ್ರಾ ನಟಿ ಸಮಂತಾ??

Entertainment Featured-Articles News
58 Views

ಸಮಂತಾ ಮತ್ತು ನಾಗಚೈತನ್ಯ ಎನ್ನುವ ಮುದ್ದಾದ ಸಿ‌ನಿ ಸೆಲೆಬ್ರಿಟಿ ಜೋಡಿ ಎನ್ನುವುದು ಈಗ ಒಂದು ಹಳೆಯ ಕಥೆ. ಇವರಿಬ್ಬರ ಪ್ರೇಮ, ಅನಂತರ ವಿವಾಹ, ಒಬ್ಬರಿಗೊಬ್ಬರು ಎನ್ನುವಂತೆ ಅಭಿಮಾನಿಗಳ ಮುಂದೆ ಕಂಡ ಇವರ ಪ್ರೀತಿ, ಬಾಂಧವ್ಯ ಎಲ್ಲವೂ ಕೂಡಾ ಇದ್ದಕ್ಕಿದ್ದಂತೆ ಕೊನೆಯಾದಾಗ ಅವರಿಗೆ ಶಾ ಕ್ ಆಗಿತ್ತೋ ಇಲ್ವೋ ಆದ್ರೆ ಅವರ ಅಭಿಮಾನಿಗಳಿಗಂತೂ ದೊಡ್ಡ ಶಾ ಕ್ ಆಗಿದ್ದು ಮಾತ್ರ ನಿಜ. ಅಲ್ಲದೇ ಅನೇಕ ಮಂದಿ ಅಭಿಮಾನಿಗಳು ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನದ ವಿಷಯ ತಿಳಿದಾಗ, ಅವರು ಮತ್ತೆ ಒಂದಾಗಬೇಕೆಂದು ಆಶಿಸಿದ್ದರು.

ಆದರೆ ಅಭಿಮಾನಿಗಳ ಆಸೆ ನೆರವೇರುವುದು ಖಂಡಿತ ಸಾಧ್ಯವಿಲ್ಲ ಎನ್ನುವ ಹಾಗೆ ಆಗಿದೆ. ವಿಚ್ಚೇದನದ ನಂತರ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಸಹಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಂತೂ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸ್ವಲ್ಪ ಸಮಯ ಸಿಕ್ಕರೆ ಸಾಕು ಪ್ರವಾಸಗಳಿಗೆ ತೆರಳುತ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಹೀಗೆ ಇಬ್ಬರೂ ಕೂಡಾ ವೃತ್ತಿ ಪರವಾಗಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಅವರ ಪ್ರೀತಿಗೆ ಸಾಕ್ಷಿ ಎನ್ನುವಂತೆ ಇಬ್ಬರೂ ಟ್ಯಾಟೂಗಳನ್ನು ಸಹಾ ಹಾಕಿಸಿಕೊಂಡರು. ಅದು ಒಂದೇ ರೀತಿಯ ವಿಶೇಷ ಟ್ಯಾಟುಗಳು, ಅವರ ಹೆಸರುಗಳು, ಮದುವೆ ದಿನಾಂಕ ಹೀಗೆ ವೈವಿದ್ಯಮಯ ಟ್ಯಾಟುಗಳನ್ನು ಹಾಕಿಸಿಕೊಂಡಿದ್ದರು. ಆಗೆಲ್ಲಾ ಅವರ ಟ್ಯಾಟೂಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹಾ ದೊಡ್ಡ ಸದ್ದನ್ನು ಮಾಡಿದ್ದವು. ಆದರೆ ಈಗ ಅದರ ಬಗ್ಗೆಯೇ ಒಂದು ಹೊಸ ವಿಷಯ ಹರಿದಾಡಿದೆ.

ಹೌದು, ನಟಿ ಸಮಂತಾ ಅಭಿಮಾನಿಗಳು ಸಹಾ ಸಮಂತಾ ಮೈಮೇಲೆ ಇರುವ ಟ್ಯಾಟುಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಚ್ಚೇದನದ ನಂತರ ಅವರು ಆ ಟ್ಯಾಟೂಗಳನ್ನು ಇರಿಸಿಕೊಂಡಿರುತ್ತಾರಾ? ಅಥವಾ ತೆಗೆಸಿ ಬಿಡುತ್ತಾರಾ? ನಾಗ ಚೈತನ್ಯ ರ ಜೊತೆಗಿನ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಿಂದ ತೆಗೆದ ಸಮಂತಾ, ಟ್ಯಾಟೂ ರೂಪದಲ್ಲಿ ಇರುವ ನೆನಪುಗಳನ್ನು ಏನು ಮಾಡಲಿದ್ದಾರೆ?? ಎಂದೆಲ್ಲಾ ಸಹಜವಾಗಿಯೇ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.

ಆದರೆ ಈಗ ಹೊಸ ಸುದ್ದಿಯೊಂದು ಹರಿದಾಡಿದ್ದು, ನಟಿ ಸಮಂತಾ ತಮ್ಮ ಪ್ರೇಮ ಹಾಗೂ ವಿವಾಹದ ಕುರುಹುಗಳಾಗಿದ್ದಂತಹ ಟ್ಯಾಟೂಗಳನ್ನು ತೆಗೆಸುವ ಆಲೋಚನೆಯನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಗಳಲ್ಲಿ ಟ್ಯಾಟುಗಳು ಕಾಣದಂತೆ ಮೇಕಪ್ ನಿಂದ ಹೇಗೋ ಕವರ್ ಮಾಡಲಾಗುತ್ತದೆ. ಇನ್ನು ವಿಚ್ಚೇದನದ ನಂತರ ಸಮಂತಾ ಕೂಡಾ ಎಲ್ಲೂ ಟ್ಯಾಟೂ ಕಾಣುವಂತ ಫೋಟೋಗಳನ್ನು ಹಂಚಿಕೊಂಡಿಲ್ಲ. ಆದರೆ ಟ್ಯಾಟೂ ತೆಗೆಸುವ ಆಲೋಚನೆಯೊಂದ‌ನ್ನು ನಟಿ ಮಾಡಿದ್ದಾರೆ ಎನ್ನುವುದು ಸುದ್ದಿ.

Leave a Reply

Your email address will not be published. Required fields are marked *