ಮನರಂಜನಾ ಕ್ಷೇತ್ರದಲ್ಲಿ ಬಾಲಿವುಡ್ ನ ಯಾವ ಖಾನ್ ಗೂ ಇದು ಸಾಧ್ಯವಾಗಿಲ್ಲ: ಮತ್ತೊಮ್ಮೆ ಸ್ಟಾರ್ ಆದ ಅಕ್ಷಯ್ ಕುಮಾರ್

Entertainment Featured-Articles Movies News

ಮನರಂಜನಾ ಕ್ಷೇತ್ರದಲ್ಲಿ ಸ್ಟಾರ್ ಗಳಾಗಿ, ಅದೃಷ್ಟ ಒಲಿದು ಬಂದರೆ ಅಂತಹ ಸ್ಟಾರ್ ನಟರ ಆದಾಯ ಅಥವಾ ಗಳಿಕೆಯ ಬಗ್ಗೆ ನಾವು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ‌. ಸಿನಿಮಾ, ಜಾಹೀರಾತುಗಳು ಹೀಗೆ ಸಿನಿಮಾ ಸೆಲೆಬ್ರಿಟಿಗಳ ಸಂಪಾದನೆ ಕೋಟಿಗಳ ಮೊತ್ತದಲ್ಲೇ ನಡೆಯುತ್ತದೆ. ಇದಲ್ಲದೇ ಅವರ ಖಾಸಗಿ ವ್ಯಾಪಾರ ಹಾಗೂ ವ್ಯವಹಾರಗಳ ಮೂಲಕವು ಆದಾಯ ಪಡೆಯುವ ಮೂಲಕ ಐಶಾರಾಮೀ ಜೀವನ ನಡೆಸುತ್ತಾರೆ ಸೆಲೆಬ್ರಿಟಿಗಳು. ಹೀಗೆ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರ ಸಾಲಿನಲ್ಲಿ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಸಹಾ ಸೇರಿದ್ದಾರೆ.

ಬಾಲಿವುಡ್ ನಲ್ಲಿ ವರ್ಷವೊಂದಕ್ಕೆ ಐದಾರು ಅಥವಾ ಅದಕ್ಕಿಂತ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ನಟ ಅಕ್ಷಯ್ ಕುಮಾರ್. ಬೇರೆಲ್ಲಾ ನಟರಿಗಿಂತ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟ ಸಹಾ ಅಕ್ಷಯ್ ಕುಮಾರ್ ಅವರೇ ಆಗಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನಟ ಅಕ್ಷಯ್ ಕುಮಾರ್ ಅವರು ಮನರಂಜನಾ ಕ್ಷೇತ್ರದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಬಾಲಿವುಡ್ ನಟ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದು, ಈಗ ಈ ಬಾರಿಯೂ ಸಹಾ ಅಕ್ಷಯ್ ಕುಮಾರ್ ಮತ್ತೊಮ್ಮೆ ಈ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಹೌದು, ಈ ಬಾರಿಯೂ ಸಹಾ ನಟ ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ಟ್ಯಾಕ್ಸ್ ಕಟ್ಟಿದ ಬಾಲಿವುಡ್ ನಟನಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ನಟ ತಮ್ಮ ಹೊಸ ಸಿನಿಮಾ ಟೀನೂ ದೇಸಾಯಿ ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ಸದ್ಯ ಅಮೆರಿಕಾದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುದರಿಂದ ಅವರ ಪರವಾಗಿ ಅವರ ತಂಡ ಆದಾಯ ತೆರಿಗೆ ಇಲಾಖೆಯು ನೀಡಲಿರುವ “ಸಮ್ಮಾನ್ ಪಾತ್ರ” ಸರ್ಟಿಫಿಕೇಟ್ ಅನ್ನು ಸ್ವೀಕರಿಸಲಿದೆ ಎಂದು ತಿಳಿದು ಬಂದಿದೆ. ಅವರಿಗೆ ದಕ್ಕಿರುವ ಸರ್ಟಿಫಿಕೇಟ್ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಈ ವಿಚಾರ ದೊಡ್ಡ ಸುದ್ದಿಯಾದ ನಂತರ, ನಟ ಅಕ್ಷಯ್ ಕುಮಾರ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನ ನಟನ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ‌. ಕೆಲವರು ಅಕ್ಷಯ್ ಕುಮಾರ್ ಅವರನ್ನು ಒಬ್ಬ ಕೆನಡಾ ಪ್ರಜೆ ಎಂದು ಅವಹೇಳನ ಮಾಡುವವರೇ ಇಲ್ಲಿ ನೋಡಿ, ನಿಮ್ಮ ಸ್ಟಾರ್ ಗಳಿಗಿಂತ ಅಕ್ಷಯ್ ಕುಮಾರ್ ಅವರೇ ಬೆಟರ್ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ ಅಕ್ಷಯ್ ಕುಮಾರ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.

ಅವರು ಭೂಮಿ ಪಡ್ನೇಕರ್ ಜೊತೆ ನಟಿಸಿರುವ ರಕ್ಷಾ ಬಂಧನ್ ಸಿನಿಮಾ ಆಗಸ್ಟ್ 11 ಕ್ಕೆ ತೆರೆಗೆ ಬರಲು ಸಜ್ಜಾಗಿದೆ‌. ಇದಲ್ಲದೇ ಅವರು ರಾಮ ಸೇತು, ಸೆಲ್ಫಿ, ಓ ಮೈ ಗಾಡ್ 2, ಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಸೂರರೈ ಪೊಟ್ರು ಸಿನಿಮಾದ ಹಿಂದಿ ರಿಮೇಕ್ ನಲ್ಲೂ ಸಹಾ ಅಕ್ಷಯ್ ಕುಮಾರ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊನೆಯದಾಗಿ ಅವರು ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಹುನಿರೀಕ್ಷಿತ ಈ ಸಿನಿಮಾ ಫ್ಲಾಪ್ ಆಗಿ, ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ.

Leave a Reply

Your email address will not be published.