ಮಧ್ಯ ರಾತ್ರಿ ದಿವ್ಯ ಅರವಿಂದ್ ಮಾಡಿದ ಕೆಲಸಕ್ಕೆ, ನೇರವಾಗಿ ಪ್ರಶಾಂತ್, ಶುಭಾ ಪೂಂಜಾ ಹೇಳಿದ್ದೇನು?

Written by Soma Shekar

Published on:

---Join Our Channel---

ಬಿಗ್ ಬಾಸ್ ಸೀಸನ್ ಎಂಟು ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ನ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕೂಡಾ ನಮಗೆ ಸಿಗಲಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್ ನಲ್ಲಿ ಸಹಾ ಒಂದು ಪ್ರೇಮಿಗಳ ಜೋಡಿ ಕಾಣಿಸಿಕೊಳ್ಳುವುದು ಒಂದು ವಾಡಿಕೆಯಂತಾಗಿದೆ. ಇನ್ನು ಈ ಬಾರಿ ಕೂಡಾ ಪ್ರೇಮಿಗಳ ಒಂದು ಜೋಡಿ ಇದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಏಕೆಂದರೆ ಈಗಾಗಲೇ ದಿವ್ಯ ಉರುಡಗ ಮತ್ತು ಅರವಿಂದ್ ಕೆಪಿ ಒಬ್ಬರ ನಡುವಿನ ಆತ್ಮೀಯತೆ, ಸ್ನೇಹ ಅದನ್ನು ಮೀರಿದ ಒಡನಾಟದ ಬಗ್ಗೆ ಬಿಗ್ ಬಾಸ್ ನೋಡುವ ಎಲ್ಲರಿಗೂ ತಿಳಿದೇ ಇದೆ. ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದಾಗ ಅಪರಿಚಿತರಾಗಿ ಬಂದ ದಿವ್ಯ ಉರುಡಗ ಮತ್ತು ಅರವಿಂದ್ ಕೆಪಿ ಇದೀಗ ಮನೆಯ ಜೋಡಿ ಹಕ್ಕಿಗಳು ಎನ್ನುವಷ್ಟು ಮಟ್ಟಕ್ಕೆ ಜನಪ್ರಿಯ ಆಗಿದ್ದಾರೆ. ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಜೋಡಿಯಾಗಿ ಆಡಿದ ನಂತರ ಅವರಿಬ್ಬರೂ ರಿಯಲ್ ಆಗಿ ಕೂಡಾ ಜೋಡಿಗಳಾಗೇ ಕಾಣಿಸಿಕೊಳ್ಳುತ್ತಿದ್ದಾರೆ.

ಬಹುತೇಕ ಇಬ್ಬರೂ ಸಮಯವನ್ನು ಜೊತೆಯಾಗಿಯೇ ಕಳೆಯುವುದು ವಿಶೇಷ. ಜೋಡಿ ಟಾಸ್ಕ್ ನ ನಂತರ ಇಬ್ಬರು ಎಷ್ಟು ಹತ್ತಿರ ಆಗಿದ್ದಾರೆಂದರೆ ಅರವಿಂದ್ ತಮ್ಮ ಶರ್ಟ್ ರಿಮೂವ್ ಮಾಡಿ ದೇಹದ ಮೇಲೆ ಎಷ್ಟು ನಟ್ ಮತ್ತು ಬೋಲ್ಟ್ ಗಳಿವೆ ಎಂದು ತೋರಿಸಿದ್ದರು. ಅರವಿಂದ್ ಗೆ ದಿವ್ಯ ಉಂಗುರ ಉಡುಗೊರೆ ನೀಡಿದ್ದು, ದಿವ್ಯಾಗೆ ಆರೋಗ್ಯ ಸಮಸ್ಯೆ ಆದಾಗ ಅರವಿಂದ್ ಶುಶ್ರೂಷೆ ಮಾಡಿದ್ದು ಎಲ್ಲವೂ ಅವರ ನಡುವಿನ ಆಪ್ಯಾಯತೆಗೆ ಸಾಕ್ಷಿಯಾದವು. ಇನ್ನು ಹೊರಗೆ ಈ ಜೋಡಿಯ ವಿಚಾರವಾಗಿ ಸಾಕಷ್ಟು ಸುದ್ದಿಗಳು ಆಗಿದ್ದು ಮಾತ್ರವೇ ಅಲ್ಲದೇ ಭರ್ಜರಿ ಟ್ರೋಲ್ ಕೂಡಾ ಮಾಡಲಾಯಿತು. ಅದು ಇನ್ನೂ ನಡೆಯುತ್ತಿದೆ ಎನ್ನುವುದು ಸಹಾ ವಾಸ್ತವ.

ಇಬ್ಬರ ಮದುವೆ ಯಾವಾಗ? ಎನ್ನುವ ವಿಚಾರಗಳು ಸುದ್ದಿಯಾದರೆ, ಒಂದಷ್ಟು ಕಡೆ ಬಿಗ್ ಬಾಸ್ ಮನೆಯಲ್ಲೇ ನಿಶ್ಚಿತಾರ್ಥ ಆಯಿತು ಎನ್ನುವ ಗಾಳಿ ಸುದ್ದಿಗಳು ಸಹಾ ಹರಡಿದ್ದಾಯ್ತು. ಇನ್ನು ಇವೆಲ್ಲವುಗಳ ನಡುವೆ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಮೇಲೆ ಇಬ್ಬರ ನಡುವೆ ಮೊದಲಿಗಿಂತ ಹೆಚ್ಚು ಪ್ರೀತಿ ಕಾಣುತ್ತಿದೆ. ಇದೇ ಕಾರಣದಿಂದ ಇಬ್ಬರೂ ಸದಾ ಅಂಟಿಕೊಂಡೇ ಇರುತ್ತಾರೆ ಕೂಡಾ. ಈ ನಡುವೆ ಅವರ ನಡುವೆ ಮಧ್ಯ ರಾತ್ರಿ ಮಾತನಾಡುವುದು ಹೆಚ್ಚಾಗಿದ್ದು ಅವರ ಮಾತಿನಿಂದ ಮನೆಯ ಅನ್ಯ ಸದಸ್ಯರಿಗೆ ತೊಂದರೆಯಾಗಿದೆ ಎಂದು ನಟಿ ಶುಭಾ ಪೂಂಜಾ ಹಾಗೂ ಪ್ರಶಾಂತ್ ಸಂಬರ್ಗಿ ನೇರವಾಗಿ ದಿವ್ಯ ಅವರಿಗೆ ಹೇಳಿದ್ದಾರೆ.

ಪ್ರಶಾಂತ್ ಮತ್ತು ಶುಭಾ ದಿವ್ಯ ಅವರನ್ನು ಬೈದಿದ್ದಾರೆ. ಶುಭಾ ಎಲ್ಲರೂ ಮಲಗಿದ ನಂತರ ದಿವ್ಯ ಅರವಿಂದ್ ಬಳಿ ಹೋಗಿ ಮಾತನಾಡುವುದು ಇತರರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ. ಬೆಳಿಗ್ಗೆ ಎಲ್ಲಾ ಮಾತನಾಡುವ ಸಮಯ ಇರುತ್ತದೆ ಮತ್ತೆ ಏಕೆ ಮಾತು ಎಂದಾಗ, ಪ್ರಶಾಂತ್ ಅರವಿಂದ್ ನಿದ್ದೆ ಮಾಡ್ತಾ ಇದ್ರೂ ಎಬ್ಬಿಸಿ ಮಾತಾಡ್ತಾರೆ ದಿವ್ಯ ಎಂದಿದ್ದು, ರಾತ್ರಿ ವೇಳೆ ಮಾತನಾಡೋ ಐಡಿಯಾಗಳು ಬರುತ್ತೆ ಎಂದಿದ್ದಾರೆ. ಅರವಿಂದ್ ಸಹಾ ನಾನು ಮಲ್ಕೋ ಹೋಗು ಅಂತ ಹೇಳ್ತೀನಿ, ಆದರೆ ಅವಳೇ ಬಿಡೋದಿಲ್ಲ ಎಂದಿದ್ದು ಆಗ ದಿವ್ಯ ಹೌದಾ ನಾನೇನಾ ಬರೋದಾ, ನೀವು ಬರೋದಿಲ್ವಾ, ಸರಿ ಸರಿ ಅಂತ ಅಲ್ಲಿಂದ ಹೋಗುತ್ತಾರೆ.

ಆಮೇಲೆ ಅರವಿಂದ್ ಅವರು ದಿವ್ಯ ಅವರನ್ನು ಕರೆದು ಆಲಿಂಗನ ನೀಡಿ ದಿವ್ಯ ಅವರಿಗೆ ಪ್ರೀತಿಯ ಸಮಾಧಾನವನ್ನು ಮಾಡುತ್ತಾರೆ. ಇನ್ನು ಹೊರಗೆ ದಿವ್ಯ ಮತ್ತು ಅರವಿಂದ್ ಸದಾ ಜೊತೆಯಾಗಿರುವುದನ್ನು ನೋಡಿ ಹೊರಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಆದರೆ ಅಭಿಮಾನಿಗಳು ಮಾತ್ರ ಅವರ ನಡುವಿನ ಪ್ರೀತಿಯನ್ನು ಕಂಡು ಸಂಭ್ರಮಿಸುತ್ತಿದ್ದಾರೆ ಅಲ್ಲದೇ ಅರವಿಂದ್ ಮತ್ತು ದಿವ್ಯ ಅವರು ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಮದುವೆ ಆಗುತ್ತಾರಾ?? ಎನ್ನುವ ಹಾಗೆ ಪ್ರಶ್ನೆಗಳನ್ನು ಸಹಾ ಮಾಡುತ್ತಿದ್ದಾರೆ.

Leave a Comment