ಮಧ್ಯರಾತ್ರಿ ಸಮಂತಾಗೆ ನಕಲಿ ಶೂಟಿಂಗ್ ನಲ್ಲಿ ಭರ್ಜರಿ ಸರ್ಪ್ರೈಸ್ ಕೊಟ್ಟ ವಿಜಯ್ ದೇವರಕೊಂಡ: ವೈರಲ್ ವೀಡಿಯೋ!!

Entertainment Featured-Articles News Viral Video

ನಟಿ ಸಮಂತಾ ಪ್ರಸ್ತುತ ಸಿಕ್ಕಾಪಟ್ಟೆ ಬ್ಯುಸಿ ಇರುವ ಬಹುಭಾಷಾ ತಾರೆಯಾಗಿದ್ದಾರೆ.‌ ಸಮಂತಾ ಅವರ ವೃತ್ತಿ ಜೀವನಕ್ಕೊಂದು ಹೊಸ ತಿರುವನ್ನು ನೀಡಿದ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ನ ನಂತರ ಬಾಲಿವುಡ್ ಗಮನ ಸೆಳೆದ ಸಮಂತಾ, ಪುಷ್ಪ ಸಿನಿಮಾದಲ್ಲಿ ಊಂ ಅಂಟಾವಾ ಮಾವ ಹಾಡಿಗೆ ಹೆಜ್ಜೆ ಹಾಕಿ ನ್ಯಾಷನಲ್ ಸೆನ್ಸೇಷನ್ ಆಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡೂ ವಿಚಾರಗಳಲ್ಲೂ ಸಾಕಷ್ಟು ಸುದ್ದಿಯಾಗುವ ಸಮಂತಾ, ಸದ್ಯಕ್ಕೆ ಬೇರೆಲ್ಲಾ ನಟಿಯರಿಗಿಂತಾ ಹೆಚ್ಚು ಕ್ರೇಜ್ ಹುಟ್ಟು ಹಾಕಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ, ತೆಲುಗು, ತಮಿಳು, ಹಿಂದಿ ಹೀಗೆ ಮೂರು ಭಾಷೆಗಳ ಪ್ರಾಜೆಕ್ಟ್ ಗಳು ಮಾತ್ರವೇ ಅಲ್ಲದೇ ಜಾಹೀರಾತು ಗಳಲ್ಲೂ ಮಿಂಚುತ್ತಿದ್ದಾರೆ. ಅವರ ಅಭಿನಯದ ಶಾಕುಂತಲಂ,‌ ಯಶೋಧಾ ಸಿನಿಮಾಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿವೆ. ಇನ್ನು ಇವೆಲ್ಲವುಗಳು ನಡುವೆ ತೆಲುಗಿನ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ‌ ಜೊತೆಗಿನ ಹೊಸ ಸಿನಿಮಾ ಚಿತ್ರೀಕರಣಕ್ಕಾಗಿ ಸಮಂತಾ ಕಾಶ್ಮೀರಕ್ಕೆ ಹಾರಿದ್ದು, ಅಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಬಟಿ ಸಮಂತಾ ಇದೇ ಏಪ್ರಿಲ್ 28 ರಂದು ತಮ್ಮ 35 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸಮಂತಾಗೆ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಜನ್ಮ ದಿನದ ಶುಭಾಶಯವನ್ನು ತಿಳಿಸಿದ್ದರು. ಇನ್ನು ಜನ್ಮದಿನದಂದು ನಟಿ ಮಜಿಲಿ ಸಿನಿಮಾ ನಿರ್ದೇಶಕ ಶಿವ, ನಾಯಕ ನಟ ವಿಜಯ್ ದೇವರಕೊಂಡ ಹಾಗೂ ಅವರ ಇಡೀ ಚಿತ್ರ ತಂಡ ಕಾಶ್ಮೀರದಲ್ಲಿ ನಟಿ ಸಮಂತಾ ಗೆ ಸರ್ಪ್ರೈಸ್ ನೀಡಿದೆ. ಹೌದು, ಸಮಂತಾ ಬರ್ತಡೇಗೆ ಮಧ್ಯ ರಾತ್ರಿ ನಟ ವಿಜಯ್ ದೇವರಕೊಂಡ ಶುಭಾಶಯ ಕೋರಿ ದೊಡ್ಡ ಸರ್ಪ್ರೈಸ್ ಅನ್ನು ನೀಡಿದ್ದಾರೆ.

ಮಹಾನಟಿ ಸಿನಿಮಾ ನಂತರ ಇದೀಗ ಮತ್ತೊಮ್ಮೆ ವಿಜಯ್ ದೇವರಕೊಂಡ ಮತ್ತು ಸಮಂತಾ ಮತ್ತೊಮ್ಮೆ ಜೋಡಿಯಾಗಿ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದಾರೆ. ಮಜಿಲಿ ಸಿನಿಮಾ ನಿರ್ದೇಶಕ ಶಿವ ಈ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಕಾಶ್ಮೀರದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಏಪ್ರಿಲ್ 27 ರ ರಾತ್ರಿ ಸಮಂತಾ ಗೆ ಒಂದು ಸರ್ಪ್ರೈಸ್ ನೀಡುವ ಉದ್ದೇಶದಿಂದ ಚಿತ್ರತಂಡವು ನಕಲಿ ದೃಶ್ಯವೊಂದನ್ನು ವಿವರಿಸಿ, ಅದರ ಚಿತ್ರೀಕರಣವನ್ನು ನಡೆಸುತ್ತಿದ್ದರು. ಸಮಂತಾಗೆ ಅದು ನಕಲಿ ದೃಶ್ಯ ಎಂದು ತಿಳಿದಿರಲಿಲ್ಲ.

ಅದು ಸಿನಿಮಾದ ಶೂಟಿಂಗ್ ನ ಭಾಗವೆಂದೇ ಭ್ರಮಿಸಿದ್ದ ನಟಿ ಸಮಂತಾ ಚಿತ್ರೀಕರಣದಲ್ಲಿ ತಮ್ಮ ಪಾತ್ರದ ನಟನೆ ಮಾಡುವಾಗ, ಅವರು ಡೈಲಾಗ್ ಹೇಳಿದ ನಂತರ ನಾಯಕ ವಿಜಯ್ ದೇವರಕೊಂಡ ಸಮಂತಾ ಅವರ ಪಾತ್ರದ ಹೆಸರು ಹೇಳದೇ, ಸಮಂತಾ ಎಂದು ಕರೆದಿದ್ದಾರೆ, ಈ ವೇಳೆ ನಟಿ ನಕ್ಕಿದ್ದಾರೆ. ಅನಂತರ ವಿಜಯ್ ದೇವರಕೊಂಡ ಜನ್ಮದಿನಕ್ಕೆ ಶುಭಾಶಯ ಹೇಳಿದ್ದು, ಇಡೀ ಚಿತ್ರ ತಂಡ ಖುಷಿಯಿಂದ ಕಿರುಚಿದ್ದು ಸಮಂತಾ ಶಾ ಕ್ ಆಗಿದ್ದಾರೆ.

ಇನ್ನು ಸಮಂತಾ ಒಂದು ಕ್ಷಣ ಅಚ್ಚರಿ, ಒಂದು ಕ್ಷಣ ಶಾಕ್ ಆಗಿದ್ದು, ಅನಂತರ ಚಿತ್ರ ತಂಡ ನೀಡಿದ ಸರ್ಪ್ರೈಸ್ ಗೆ ಭಾವುಕರಾಗಿದ್ದಾರೆ. ತನ್ನ ಜನ್ಮದಿನಕ್ಕೆ ಇಂತಹುದೊಂದು ವಿಶೇಷವಾದ ಉಡುಗೊರೆಯನ್ನು ನೀಡಿದ ಚಿತ್ರ ತಂಡಕ್ಕೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಸ್ತುತ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಹರಿಸುತ್ತಿದ್ದಾರೆ.

Leave a Reply

Your email address will not be published.