ಬಾಲಿವುಡ್ ನಲ್ಲಿ ವರ್ಷಗಳ ಹಿಂದೆ ಮೊದಲ ಸಿನಿಮಾದಲ್ಲೇ ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದ ನಟಿ ಮಲ್ಲಿಕಾ ಶೆರಾವತ್. ಮೊದಲ ಸಿನಿಮಾದಲ್ಲೇ ನಟಿ ಚಳಿ ಬಿಟ್ಟು ನಟಿಸಿದ್ದರು, ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿ ಪ್ರೇಕ್ಷಕರು ಸಹಾ ಅಚ್ಚರಿ ಪಡುವಂತೆ ಮಾಡಿದ್ದರೆ. ದಶಕದ ಹಿಂದೆ ಅಂತಹ ಪಾತ್ರ ಮಾಡುವುದು ಎಂದರೆ ಅದೊಂದು ದೊಡ್ಡ ವಿಷಯವೇ ಆಗಿತ್ತು. ಆದರೆ ಬಿಂದಾಸ್ ಆಗಿದ್ದ ಮಲ್ಲಿಕಾ ಶೆರಾವತ್ ಆ ಕಾಲಕ್ಕೆ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಂಡು ಬಾಲಿವುಡ್ ಮಂದಿಯ ಗಮನವನ್ನು ಸೆಳೆದಿದ್ದರು. ಅನಂತರ ಒಂದೆರಡು ಹಾಲಿವುಡ್ ಸಿನಿಮಾಗಳಲ್ಲಿ ಸಹಾ ನಟಿಸಿದ್ದರು.
ಹೀಗೆ ಬಹು ಬೇಡಿಕೆಯ ನಟಿಯಾಗಿದ್ದ ಮಲ್ಲಿಕಾ ಶೆರಾವತ್ ಬಾಲಿವುಡ್ ನ ಸ್ಟಾರ್ ಗಳ ಜೊತೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಹಾಗೂ ನಟಿ ತೆರೆ ಮರೆಯಾಗಿ ಹೋದರು. ಇದೀಗ ಕೆಲವೇ ದಿನಗಳ ಹಿಂದೆ ನಟಿ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಮಾದ್ಯಮಗಳ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಅಂತಹುದೇ ಒಂದು ಸಂದರ್ಶನದಲ್ಲಿ ಈಗ ಮಲ್ಲಿಕಾ ಶೆರಾವತ್ ಬಾಲಿವುಡ್ ನ ಕರಾಳ ಮುಖವನ್ನು ಅನಾವರಣ ಮಾಡಿದ್ದು, ಬಾಲಿವುಡ್ ನ ಟಾಪ್ ಹೀರೋಗಳ ಮೇಲೆಯೇ ಆರೋಪವನ್ನು ಮಾಡಿದ್ದಾರೆ ನಟಿ.
ಮಲ್ಲಿಕಾ ಶೆರಾವತ್ ಮಾತನಾಡುತ್ತಾ, ತಾನು ತೆರೆ ಮರೆಯಾಗಿದ್ದಕ್ಕೆ ಕಾರಣವೇನು ಎಂದು ಹೇಳುತ್ತಾ, ಬಾಲಿವುಡ್ ನ ಸ್ಟಾರ್ ಗಳು ನನ್ನ ಜೊತೆ ನಟಿಸಲು ಇಷ್ಟಪಡಲಿಲ್ಲ. ಏಕೆಂದರೆ ಅವರು ತಮ್ಮ ಕಂಟ್ರೋಲ್ ನಲ್ಲಿ ಇರುವ ಹಾಗೂ ತಮ್ಮೊಡನೆ ರಾಜಿ ಮಾಡಿಕೊಳ್ಳುವ ನಟಿಯರು ಎಂದರೆ ಇಷ್ಟ. ಆದರೆ ನಾನು ಯಾರದೋ ಲೈಂ ಗಿ ಕ ಆಸಕ್ತಿಯಾಗಲು ಬಯಸಿದವಳಲ್ಲ. ಒಬ್ಬ ಹೀರೋ ಕರೆ ಮಾಡಿ ಮಧ್ಯರಾತ್ರಿ ಬಾ ಅಂತಾನೇ. ಆಗ ಅವರ ಜೊತೆ ಸಿನಿಮಾ ಮಾಡುತ್ತಿದ್ದರೆ, ಅವರ ಸರ್ಕಲ್ ನಲ್ಲಿ ಇದ್ದರೆ, ಅವರು ಕರೆದಾಗ ಹೋಗದೇ ಇದ್ದರೆ ನಮ್ಮನ್ನು ಆ ಸಿನಿಮಾದಿಂದ ಹೊರಗೆ ಇಡುತ್ತಾರೆ ಎಂದಿದ್ದಾರೆ ಮಲ್ಲಿಕಾ.
ಈ ಮೂಲಕ ನಟಿ ಮಲ್ಲಿಕಾ ಶೆರಾವತ್ ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌ ಚ್ ಎನ್ನುವ ಕರಾಳ ಸತ್ಯ ಇದೆ ಎನ್ನುವುದನ್ನು ಮತ್ತೊಮ್ಮೆ ಮುನ್ನಲೆಗೆ ತಂದಿದ್ದಾರೆ. ಈ ಹಿಂದೆ ಸಹಾ ಒಂದಷ್ಟು ಜನ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸಂಚಲನ ಸೃಷ್ಟಿಸಿದ್ದರು. ಈ ಬಾರಿ ಮಲ್ಲಿಕಾ ಹೆಸರು ಹೇಳದೇ ಬಾಲಿವುಡ್ ನ ಟಾಪ್ ಸ್ಟಾರ್ ಗಳ ಮೇಲೆಯೇ ಗಂಭೀರ ಆರೋಪವನ್ನು ಮಾಡಿ ಒಂದು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ನಟಿಯ ಹೇಳಿಕೆಗಳು ಈಗ ಸಖತ್ ಸುದ್ದಿಯಾಗಿದೆ. ಆದರೆ ಬಾಲಿವುಡ್ ಮಂದಿ ಇಂತಹವುಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಜಾಯಮಾನದವರಲ್ಲ ಎನ್ನುವುದು ಸಹಾ ಸತ್ಯ.