ಮದ್ವೆ ಆದ್ಮೇಲೆ ಮನೇಲಿ ಅಡುಗೆ ಮಾಡ್ಕೊಂಡು, ಪಾತ್ರೆ ತೊಳ್ಕೊಂಡು ಇರ್ಬೇಕಾ? ಗರಂ ಆದ ನಿವೇದಿತಾ ಗೌಡ
ಕನ್ನಡ ಬಿಗ್ ಬಾಸ್ ಸೀಸನ್ 5 ರ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಸೆಲೆಬ್ರಿಟಿ ಆಗಿದ್ದಾರೆ. ನಿವೇದಿತಾ ಗೌಡ ಅವರ ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಈ ವೀಡಿಯೋಗಳು ವೈರಲ್ ಆದಾಗ ಸಹಜವಾಗಿಯೇ ಟೀಕೆಗಳು ಸಹಾ ಕೇಳಿ ಬರುತ್ತವೆ. ಹೀಗೆ ತನ್ನ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುವವರಿಗೆ ನಿವೇದಿತಾ ಗೌಡ ಅವರು ಒಂದು ಖಡಕ್ ಉತ್ತರವನ್ನು ನೀಡುವ ಮೂಲಕ ಈಗ ಸುದ್ದಿಯಾಗಿದ್ದಾರೆ.
ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ತಮ್ಮ ಕ್ಯೂಟ್ ಫೋಟೋಗಳು, ಡಾನ್ಸ್ ವೀಡಿಯೋಗಳು ಮತ್ತು ಫನ್ನಿ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಲ್ಲದೇ ಕೆಲವೇ ದಿನಗಳ ಹಿಂದೆ ನಿವೇದಿತಾ ತಮ್ಮ ಯೂಟ್ಯೂಬ್ ಚಾನೆಲ್ ಕೂಡಾ ತೆರೆದಿದ್ದು, ಅದರ ಮೂಲಕವೂ ಸಹಾ ಹೊಸ ಹೊಸ ವಿಷಯಗಳು, ವಿಚಾರಗಳ ವೀಡಿಯೋಗಳನ್ನು ಹಂಚಿಕೊಳ್ಳ ತೊಡಗಿದ್ದಾರೆ. ಸೆಲೆಬ್ರಿಟಿ ಆದ ಕಾರಣ ಅವರು ಶೇರ್ ಮಾಡೋ ವಿಚಾರಗಳಿಗೆ ನೆಗೆಟಿವ್ ಕಾಮೆಂಟ್ ಗಳು ಸಹಾ ಬರುವುದು ಸಹಜ.
ಹಾಗೆ ನೆಟ್ಟಿಗರೊಬ್ಬರು “ನಿವೇದಿತಾ ಅವರೇ ಎಲ್ಲರ ಮನೆಯಲ್ಲಿ ನಿಮ್ಮಂತ ಹೆಣ್ಣು ಮಕ್ಕಳಿದ್ರೆ ಹೊಟ್ಟೆ ತುಂಬಿದ ಹಾಗೆ” ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಿವೇದಿತಾ ಅವರು ಬರೀ ಹೆಣ್ಣು ಮಕ್ಕಳು ಮಾತ್ರ ಮನೆಯಲ್ಲಿ ಕೆಲಸ ಮಾಡಬೇಕಾ?? ಹೆಣ್ಣು ಮಕ್ಕಳು ಮಾತ್ರ ಮನೆಯಲ್ಲಿ ಅಡುಗೆ ಮಾಡಬೇಕಾ? ಹೆಣ್ಣು ಮಕ್ಕಳೇ ಮಕ್ಕಳನ್ನು ನೋಡಿಕೊಳ್ಳಬೇಕಾ?? ಗಂಡು ಮಕ್ಕಳು ಮನೆಯಲ್ಲಿ ಇರೋದು ಯಾಕೆ ?ಅವರು ಇದನ್ನೆಲ್ಲಾ ಯಾವಾಗ ಕಲಿಯೋದು?
ಕೆಲಸದ ವಿಚಾರ ಬಂದಾಗ ಗಂಡು ಮತ್ತು ಹೆಣ್ಣು ಇಬ್ಬರೂ ಸಮವಾಗಿ ಕೆಲಸಗಳನ್ನು ಹಂಚಿಕೊಂಡು ಮಾಡಬೇಕು ಎಂದಿದ್ದಾರೆ. ಮತ್ತೊಬ್ಬರು, ನಿಮಗೆ ಮದುವೆ ಆಗಿದೆ, ನಿಮ್ಮ ಗಂಡನಿಗೆ ಸಪೋರ್ಟ್ ಮಾಡಿ, ಅವರ ಮರ್ಯಾದೆ ತೆಗೆಯಬೇಡಿ ಎನ್ನುವ ಮಾತನ್ನು ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲೂ ಖಡಕ್ ಉತ್ತರವನ್ನೇ ಅವರು ನೀಡಿದ್ದಾರೆ. ನಿವೇದಿತಾ ಅವರು, ಮದುವೆಯಾದ ತಕ್ಷಣ ಹೆಣ್ಣುಮಕ್ಕಳು ಬೇರೆ ಕೆಲಸ ಮಾಡಬಾರದಾ?
ಮದುವೆಯಾದ ಮೇಲೆ ಬರಿ ಮನೆಯಲ್ಲಿ ಕೂತ್ಕೊಂಡು ಅಡಿಗೆ ಮಾಡಿ ಪಾತ್ರೆ ತೊಳಿತ ಇರಬೇಕಾ? ಹುಡುಗಿಯರ ಲೈಫು ಅಷ್ಟೇನಾ? ಇಲ್ಲಾ ಹೀಗೆ ಇರಬಾರದು. ಈ ಕಾಮೆಂಟ್ ಹಾಕಿರೋದು ಕೂಡಾ ಒಬ್ಬ ಹುಡುಗಿನೇ ನಿಮಗೆ ಗೊತ್ತಿರಬೇಕು, ಇದು 21ನೇ ಶತಮಾನ, ಹುಡುಗೀರು ಸ್ವತಂತ್ರವಾಗಿರಬೇಕು. ನಾವು ಎಷ್ಟಂತ ನಮ್ಮ ಗಂಡಂದರಿಗೆ ಕಷ್ಟ ಕೊಡುವುದು. ಅವರು ಸಂಪಾದನೆ ಮಾಡಿದ್ದನ್ನೆಲ್ಲ ನಾವು ಖರ್ಚು ಮಾಡಬೇಕಾ? ಅದರ ಬದಲು ನಾವು ಕೂಡಾ ಕಷ್ಟಪಟ್ಟು ದುಡಿಯಬಹುದು ಅಲ್ಲವಾ? ಎಂದು ಪ್ರತಿಕ್ರಿಯೆ ನೀಡಿದ್ದಾರೆ.