ಮದ್ವೆ ಆಗಿ 6 ವರ್ಷವಾದ್ರು ಹೆಂಡ್ತಿ ಅದಕ್ಕೆ ಅವಕಾಶ ಕೊಟ್ಟಿಲ್ಲ! ಅಳಲು ತೋಡಿಕೊಂಡ ಸಂಸದ

Entertainment Featured-Articles News

ಒಡಿಶಾದ ಒಂದು ತಾರಾ ದಂಪತಿಯ ವಿಚ್ಚೇದನದ ವಿಚಾರವು ಇದೀಗ ಇಡೀ ರಾಜ್ಯದಲ್ಲೊಂದು ಸಂಚಲನ ಸೃಷ್ಟಿಸಿರುವುದು ಮಾತ್ರವೇ ಅಲ್ಲದೇ ಈ ವಿಷಯ ಸುದ್ದಿಯಾದ ಮೇಲೆ ಜನರು ಸಹಾ ಅಚ್ಚರಿ ಪಡುವಂತಾಗಿದೆ. ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯ ವಿಚ್ಚೇದನದ ವಿಚಾರವಾಗಿ ಇದೀಗ ಕೋರ್ಟ್ ಇಬ್ಬರನ್ನೂ ಸಹಾ ತರಾಟೆಗೆ ತೆಗೆದುಕೊಂಡಿದೆ. ಹೌದು, ಒಡಿಶಾದಲ್ಲಿ ನಟ ಕಂ ಸಕ್ರಿಯ ರಾಜಕಾರಣಿಯೂ ಆಗಿರುವ ಅನುಭವ್ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ಅವರು ವಿಚ್ಚೇದನದ ಪ್ರಕರಣ ಅಲ್ಲಿನ ಹೈಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ.

ಪ್ರಕರಣ ಕೋರ್ಟ್‌ ನಲ್ಲಿದೆ, ವಿಚಾರಣೆ ನಡೆದಿದೆ. ಆದರೆ ಇನ್ನೊಂದು ಕಡೆ ಈ ತಾರಾ ದಂಪತಿ ಸುಮ್ಮನೆ ಇರದೆ ಸಾಮಾಜಿಕ ಜಾಲತಾಣಗಳ ಮೂಲಕ ಒಬ್ಬರ ಮೇಲೆ ಮತ್ತೊಬ್ಬರು ಕೆಸರನ್ನು ಎರಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವರ ಈ ಕಿತ್ತಾಟವು ತಾರಕಕ್ಕೇರಿದ ಬೆನ್ನಲ್ಲೇ ಇದೀಗ ಕೋರ್ಟ್ ಇಬ್ಬರಿಗೂ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಕೋರ್ಟ್ ನಲ್ಲಿರುವ ಪ್ರಕರಣವು ಒಂದು ತೀರ್ಮಾನಕ್ಕೆ ಬರುವವರೆಗೂ ಸಹಾ ಸಂಸದ, ಬಿಜೆಡಿ ರಾಜಕಾರಣಿ ಅನುಭವ್ ಮೊಹಂತಿ ತಮ್ಮ ಪತ್ನಿಯ ವಿ ರು ದ್ಧ ಯಾವುದೇ ಕಾಮೆಂಟ್ ಅಥವಾ ವೀಡಿಯೋ ಮಾಡಬಾರದೆಂದು ಕೋರ್ಟ್ ಸೂಚನೆ ನೀಡಿದೆ.

ಅನುಭವ್ ಮೊಹಂತಿ ಅವರು ಅನ್ ಟೋಲ್ಡ್ ಸ್ಟೋರಿ ಎನ್ನುವ ಹೆಸರಿನ ಯೂಟ್ಯೂಬ್ ವೀಡಿಯೋಗಳಲ್ಲಿ ತಮ್ಮ ವಿಚ್ಚೇದನದ ಕಾರಣಗಳನ್ನು ವಿವರಿಸಿದ್ದಾರೆ. ಇದರಲ್ಲಿ ಎರಡನೇ ಭಾಗದಲ್ಲಿ ಪ್ರಿಯದರ್ಶಿನಿ ಜೊತೆಗೆ ಮದುವೆಯಾಗಿ ಆರು ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ಆಕೆಯ ಜೊತೆಗೆ ಲೈಂ ಗಿ ಕ ಸಂಪರ್ಕ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅದಕ್ಕೆ ಪತ್ನಿಯ ವಿ ರೋ ಧ ಕೂಡಾ ಇದೆ ಎನ್ನುವ ಖಾಸಗಿ ವಿಚಾರವನ್ನು ಅವರು ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದಾರೆ.

ಆಕೆಯನ್ನು ಮದುವೆಯಾಗಿ ಆರು ವರ್ಷಗಳೇ ಕಳೆದರೂ ಆಕೆ ಮದುವೆಯ ಯಾವುದೇ ಹಕ್ಕುಗಳನ್ನು ನನಗೆ ನೀಡಿಲ್ಲ. ಆಕೆ ನನ್ನ ಕಲ್ಪನೆಗೆ ವಿ ರು ದ್ಧವಾಗಿಯೇ ನಡೆದುಕೊಳ್ಳುತ್ತಿದ್ದಾಳೆ. ಗಂಡನಾದವನು ಎಷ್ಟು ದಿನ ಎಂದು ಸಹಿಸಿಕೊಳ್ಳಲು ಸಾಧ್ಯ, ನನ್ನ ನಿರ್ಧಾರ ಸರಿಯೋ, ತಪ್ಪೋ ನೀವೇ ಆಲೋಚಿಸಿ ಎಂದು ಜನರ ಮುಂದೆ ಮನವಿ ಮಾಡಿದ್ದಾರೆ. ಜನರ ಮುಂದೆ ವೀಡಿಯೋಗಳ ಮೂಲಕ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಇದೀಗ ಕೋರ್ಟ್ ಇದಕ್ಕೆ ತಡೆಯನ್ನು ಹಾಕಿದೆ.

Leave a Reply

Your email address will not be published. Required fields are marked *