ಮದುವೇಲಿ ಇಂತಾ ಗಿಫ್ಟ್ ಕೂಡಾ ಕೊಡ್ತಾರಾ ಸ್ನೇಹಿತರು??ಗಿಫ್ಟ್ ನೋಡಿ ನಾಚಿಕೊಂಡ ವಧು!! ವೈರಲ್ ವೀಡಿಯೋ

Entertainment Featured-Articles News Viral Video

ಸಾಮಾಜಿಕ ಜಾಲತಾಣಗಳಲ್ಲಿ ಖಜಾನೆಯಲ್ಲಿ ಫನ್ನಿ ವಿಡಿಯೋಗಳು ಭಂಡಾರವು ತೆರೆದುಕೊಂಡಾಗ ಇಲ್ಲಿ ನೋಡಲು ಸಿಗುವ ಹಲವಾರು ವಿಡಿಯೋಗಳು ಜನರನ್ನು ಅದರಲ್ಲೇ ಕಳೆದುಹೋಗುವಂತೆ ಮಾಡುತ್ತವೆ. ಇಂತಹ ವಿಡಿಯೋಗಳನ್ನು ನೋಡುವ ಮೂಲಕ ತಮ್ಮ ನಿತ್ಯ ಜೀವನದ ಒತ್ತಡವನ್ನು ಮರೆಯುವುದು ಮಾತ್ರವೇ ಅಲ್ಲದೇ ಸ್ವಲ್ಪ ಸಮಯ ನಗುವ ಮೂಲಕ ಒಂದು ಹೊಸ ಚೈತನ್ಯವನ್ನು ಪಡೆದುಕೊಳ್ಳುತ್ತಾರೆ. ಫನ್ನಿ ವಿಡಿಯೋಗಳಲ್ಲಿ ವಿಶೇಷವಾಗಿ ಸ್ನೇಹಿತರು ತಮ್ಮ ಅನ್ಯ ಸ್ನೇಹಿತರೊಡನೆ ಮಾಡುವ ತಮಾಷೆಯ ಸನ್ನಿವೇಶಗಳು ಬಹಳ ಗಮನಸೆಳೆಯುತ್ತವೆ.

ಈಗಂತೂ ಮದುವೆಯ ಸೀಸನ್ ನಡೆಯುತ್ತಿದೆ. ಇಂತಹ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬ ಗೆಳೆಯನು ಕೂಡಾ ತನ್ನ ಗೆಳೆಯನ ಮದುವೆಯನ್ನು ಸ್ಮರಣೀಯ ಮಾಡಬೇಕೆಂದು ಆಲೋಚನೆಯನ್ನು ಮಾಡುತ್ತಾನೆ. ಅದಕ್ಕಾಗಿ ಮದುವೆಯ ಸಂದರ್ಭಗಳಲ್ಲಿ ಕೆಲವೊಂದು ಹಾಸ್ಯವನ್ನು ಉಂಟುಮಾಡುವ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಾರೆ. ಇಂತಹ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ನೀವು ಕೂಡ ಅಂತಹವುಗಳನ್ನು ನೋಡಿ ನಕ್ಕಿರಬಹುದು.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅಂತಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ಮದುವೆಯ ವೇದಿಕೆಯಲ್ಲಿ ವಧು-ವರರಿಗೆ ಉಡುಗೊರೆಯನ್ನು ನೀಡಲು ಬಂದ ಸ್ನೇಹಿತರು ನೀಡಿದ ಉಡುಗೊರೆಯನ್ನು ಕಂಡು ವಧು-ವರರಿಬ್ಬರೂ ನಗುವಂತಾಗಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧು ಹಾಗೂ ವರ ವೇದಿಕೆಯ ಮೇಲೆ ನಿಂತಿರುತ್ತಾರೆ. ಬ್ಯಾಕ್ ಗ್ರೌಂಡ್ ನಲ್ಲಿ ಹಿಂದಿ ಸಿನಿಮಾ ಒಂದರ ಹಾಡು ಪ್ಲೇ ಆಗುತ್ತಾ ಇರುತ್ತದೆ. ಆ ಸಂದರ್ಭದಲ್ಲಿ ಅಲ್ಲಿಗೆ ಬರುವ ವರನ ಸ್ನೇಹಿತನೊಬ್ಬ ಗೆಳೆಯನಿಗೆ ಒಂದು ಪ್ಲಾಸ್ಟಿಕ್ ಬಕೆಟ್ ಉಡುಗೊರೆಯಾಗಿ ನೀಡುತ್ತಾನೆ.

ಅವನು ಪ್ಲಾಸ್ಟಿಕ್ ಬಕೆಟ್ ಉಡುಗೊರೆಯನ್ನು ನೀಡಿದಾಗ ಅದನ್ನು ಸ್ವೀಕರಿಸಿದ ವಧು-ವರ ಇಬ್ಬರಿಗೂ ನಗುವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ಉಡುಗೊರೆಗಳನ್ನು ನೀಡುವ ಸರದಿಯು ಅಲ್ಲಿಗೆ ಮುಗಿಯುವುದಿಲ್ಲ. ವರನ ಸ್ನೇಹಿತರು ಒಬ್ಬರಾದ ಮೇಲೆ ಮತ್ತೊಬ್ಬರು ಎನ್ನುವಂತೆ ವೇದಿಕೆಗೆ ಬಂದು ಡಸ್ಟ್ ಕೆಲಕ್ಟರ್, ಪೊರಕೆ, ಹಾರ್ಪಿಕ್, ನೆಲ ಒರೆಸುವ ಕಡ್ಡಿ, ಪ್ಲಾಸ್ಟಿಕ್ ನಿಂದ ಮಾಡಿದ ಬ್ಯಾಟ್ ಮತ್ತು ಬಾಲ್ ಹೀಗೆ ಚಿತ್ರವಿಚಿತ್ರವಾದ ಉಡುಗೊರೆಗಳನ್ನು ನೀಡುತ್ತಾರೆ. ಆಗ ಅಲ್ಲಿದ್ದವರು ತಾನೇ ಹೇಗೆ ನಗದಿರಲು ಸಾಧ್ಯ ಹೇಳಿ??

ಇಂತಹ ಸುಂದರವಾದ ಫನ್ನಿ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಡಾಕ್ಟರ್ ಅಜಿತ್ ವರ್ವಾಂಡಕರ್ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿದವರು ಶೀರ್ಷಿಕೆಯಲ್ಲಿ “ಇಂತಹ ಅದ್ಭುತವಾದ ಉಡುಗೊರೆಗಳನ್ನು ಯಾವುದೇ ಸ್ನೇಹಿತರು ನೀಡಲು ಸಾಧ್ಯವಿಲ್ಲ. ವಿಡಿಯೋ ನೋಡಿ ಬಹಳ ಖುಷಿಯಾಯಿತು” ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸಹ ಮೆಚ್ಚುತ್ತಾ ಲೈಕುಗಳನ್ನು ನೀಡಿದ್ದು, ಕಾಮೆಂಟ್ ಮಾಡಿದವರ ಬಹಳ ಉಪಯುಕ್ತವಾದ ವಸ್ತುಗಳನ್ನು ಗಿಫ್ಟಾಗಿ ನೀಡಿದ್ದಾರೆ ಎಂದು ಹೊಗಳಿದ್ದಾರೆ.

Leave a Reply

Your email address will not be published.