ಮದುವೆ ಸಡಗರದಲ್ಲಿ ದೇಶವನ್ನು ಮರೆಯದ ವಿಕ್ಕಿ-ಕತ್ರೀನಾ ಜೋಡಿ: ವೀರ ಯೋಧರಿಗೆ ವಿಶೇಷ ನಮನ ಅರ್ಪಣೆ.
ಬಾಲಿವುಡ್ ನ ಕ್ಯೂಟ್ ಕಪಲ್ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ವೈವಾಹಿಕ ಜೀವನಕ್ಕೆ ಅಡಿಯಿಟ್ಟಾಗಿದೆ. ನಿನ್ನೆ ನಡೆದ ರಂಗು ರಂಗಿನ ಅದ್ದೂರಿ ವಿವಾಹ ವೇದಿಕೆಯಲ್ಲಿ ಈ ಜೋಡಿ ಸತಿ ಪತಿಯರಾಗಿದ್ದಾರೆ. ಬಾಲಿವುಡ್ ತುಂಬೆಲ್ಲಾ ಬರೀ ವಿಕ್ಕಿ-ಕತ್ರೀನಾ ಮದುವೆಯ ಸುದ್ದಿಗಳೇ ಸದ್ದು ಮಾಡಿದೆ. ದಿನಕ್ಕೊಂದು ಹೊಸ ಅಪ್ಡೇಟ್ ಈ ಮದುವೆಯ ಬಗ್ಗೆ ಹೊರಗೆ ಬರುತ್ತಲೇ ಇದೆ. ಅಭಿಮಾನಿಗಳಿಗಂತೂ ಈ ಜೋಡಿಯ ವಿವಾಹ ಒಂದು ದೊಡ್ಡ ಕುತೂಹಲವನ್ನು ಹುಟ್ಟಿಸಿದ್ದು ಕೂಡಾ ನಿಜ. ಎಲ್ಲದರ ನಡುವೆ ಈಗ ಮದುವೆ ಶುಭ ಪ್ರದವಾಗಿ ಸಂಪನ್ನವಾಗಿದೆ.
ರಾಜಸ್ಥಾನದ ಸಿಕ್ಸ್ ಸೆನ್ಸ್ ಹೊಟೇಲ್ ಆಗಿರುವ ಬಾರ್ವಾಡಾ ಕೋಟೆಯಲ್ಲಿ ನಡೆದ ಈ ಅದ್ದೂರಿ ಮದುವೆಯ ಕುರಿತಾಗಿ ಕಳೆದ ಕೆಲವು ದಿನಗಳಿಂದಲೂ ಸಹಾ ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಕತ್ರೀನಾ ಅಥವಾ ವಿಕ್ಕಿ ಮದುವೆ ಗುಟ್ಟು ಬಿಟ್ಟುಕೊಡದ ಕಾರಣ ಅವರ ಮದುವೆ ನಡೆಯುವುದಿಲ್ಲ, ಇದೆಲ್ಲಾ ಗಾಸಿಪ್ ಮಾತ್ರವೇ ಎನ್ನುವ ಸುದ್ದಿಗಳು ಕೂಡಾ ಹರಿದಾಡಿದವು. ಆದರೆ ಈಗ ಎಲ್ಲದಕ್ಕೂ ತೆರೆ ಬಿದ್ದಾಗಿದೆ.
ವಿಕ್ಕಿ-ಕತ್ರೀನಾ ಮದುವೆ ವೈಭವದಿಂದ ನಡೆಯುತ್ತಿದೆ. ಬಿ ಟೌನ್ ನ ಸ್ಟಾರ್ ಜೋಡಿಯ ವಿವಾಹವಾದ ಕಾರಣ ಸಜವಾಗಿಯೇ ಈ ಮದುವೆಯ ಅಲಂಕಾರ, ನಡೆದ ಕಾರ್ಯಕ್ರಮಗಳು, ಅದ್ದೂರಿ ಮನರಂಜನೆ, ಬಗೆ ಬಗೆಯ ಹಾಗೂ ಭಿನ್ನ ವಿಭಿನ್ನವಾದ ಮದುವೆ ಸಿದ್ಧತೆಗಳು ಹೀಗೆ ಹಲವು ವಿಚಾರಗಳ ನಡುವೆ ಮದುವೆಯ ವೇಳೆ ವಿಕ್ಕಿ-ಕತ್ರೀನಾ ಜೋಡಿ ಮಾಡಿರುವ ಕಾರ್ಯವೊಂದಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ಮೆಚ್ಚುಗೆ ಹರಿದು ಬರುತ್ತಿದೆ.
ತಮಿಳು ನಾಡಿನಲ್ಲಿ ಮೊನ್ನೆಯಷ್ಟೇ ನಡೆದ ಭೀ ಕ ರ ವಾದ ಹೆಲಿಕಾಪ್ಟರ್ ಅ ವ ಘ ಡ ದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಜನ ಸೇನಾಧಿಕಾರಿ ಗಳು ಸಾವನ್ನಪ್ಪಿದ್ದು ಇಡೀ ದೇಶ ಈ ಘಟನೆಗೆ ಕಂಬನಿ ಮಿಡಿದಿದೆ. ಅನೇಕ ಕಡೆಗಳಲ್ಲಿ ಶೋಕಾಚರಣೆ ಮಾಡಲಾಗಿದೆ. ಈ ಆ ಘಾ ತ ಕಾ ರಿ ಸುದ್ದಿ ಕೇಳಿದ ಕೂಡಲೇ ವಿಕ್ಕಿ-ಕತ್ರೀನಾ ಜೋಡಿಯೂ ಕೂಡಾ ಅಗಲಿದ ಸೇನಾ ನಾಯಕರಿಗೆ ಬಹಳ ವಿಶೇಷ ರೀತಿಯಲ್ಲಿ ಗೌರವ ನಮನವನ್ನು ಸಲ್ಲಿಸಿದ್ದಾರೆ.
ಮದುವೆಯ ಸಂಭ್ರಮವನ್ನು ಸಂಭ್ರಮಿಸಲು ಇಡೀ ಕೋಟೆ ಝಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುವಾಗ, ಕೆಲ ಕಾಲ ಕೋಟೆ ಲೈಟ್ ಗಳನ್ನು ಆಫ್ ಮಾಡಿ, ಅಗಲಿದವರಿಗೆ ಗೌರವ ಪೂರ್ಣ ನಮನವನ್ನು ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಅದ್ದೂರಿ ಮದುವೆ ಸಂಭ್ರಮದ ನಡುವೆ ಈ ಜೋಡಿ ದೇಶದ ವೀರರಿಗೆ ಗೌರವ ನಮನ ಸಲ್ಲಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.