ಮದುವೆ ಸಜ್ಜಾಗಿ, ರೋಮ್ಯಾಂಟಿಕ್ ಆದ ರಾಖಿ, ಆದಿಲ್ ಜೋಡಿ, ವೈರಲ್ ಆಯ್ತು ವೀಡಿಯೋ!!

Entertainment Featured-Articles Movies News Viral Video

ಬಾಲಿವುಡ್ ನಟಿ ಹಾಗೂ ಕಾಂಟ್ರವರ್ಸಿ ಕ್ವೀನ್ ಎನಿಸಿಕೊಂಡಿರುವ ರಾಖಿ ಸಾವಂತ್ ಇತ್ತೀಚಿನ ದಿನಗಳಲ್ಲಿ ತಮ್ಮ ಹೊಸ ಬಾಯ್ ಫ್ರೆಂಡ್ ಆದಿಲ್ ಖಾನ್ ಅವರ ಜೊತೆಗೆ ಇರುವಂತಹ ಸುಂದರವಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಈಗ ಈ ಜೋಡಿಯ ಲೇಟೆಸ್ಟ್ ವಿಡಿಯೋ ಒಂದು ನೆಟ್ಟಿಗರ ಮುಂದಕ್ಕೆ ಬಂದಿದ್ದು, ಈ ವಿಡಿಯೋ ನೋಡಿದ ನಂತರ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಮದುವೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ರಾಖಿ ಹಾಗೂ ಆದಿಲ್ ಜೋಡಿಯನ್ನು ನೋಡಿದ ಎಲ್ಲರಿಗೂ ಅವರ ಮದುವೆಯ ವಿಚಾರವಾಗಿ ಪ್ರಶ್ನೆಗಳು ಹುಟ್ಟುತ್ತಿವೆ.

ರಾಖಿ ಶೇರ್ ಮಾಡಿಕೊಂಡಿರುವ ಹೊಸ ವಿಡಿಯೋದಲ್ಲಿ ರಾಖಿ ಹಾಗೂ ಆದಿಲ್ ಖಾನ್ ಇಬ್ಬರೂ ಮದುವೆಯ ಗಂಡು, ಹೆಣ್ಣಿನಂತೆ ಅಲಂಕಾರ ಮಾಡಿಕೊಂಡಿದ್ದಾರೆ. ಆದಿಲ್ ಮತ್ತು ರಾಖಿ ಸಾವಂತ್ ಇನ್ನೂ ಮದುವೆಯಾಗಿಲ್ಲ. ಈ ಜೋಡಿಯುವ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ರಾಖಿ ಸಾವಂತ್ ಜೀವನದಲ್ಲಿ ಆದಿಲ್ ಆಗಮನ ಆದಾಗಿನಿಂದಲೂ ರಾಖಿಯವರ ಜೀವನ ಸಾಕಷ್ಟು ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಖಿ ಯಾವುದೇ ವಿ ವಾ ದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿಲ್ಲ. ಬದಲಾಗಿ ಆದಿಲ್ ಇಷ್ಟ ಪಡುವ ರೀತಿಯಲ್ಲಿ ತನ್ನನ್ನು ತಾನು ಬದಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಈಗ ಸದ್ಯ ಹೊಸ ವಿಡಿಯೋದಲ್ಲಿ ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಂಡಿದ್ದು, ಅವರ ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ಬಹಳ ಸಂತಸ ಪಡುತ್ತಿದ್ದಾರೆ ಹಾಗೂ ಮೆಚ್ಚುಗೆ ಗಳನ್ನು ನೀಡಿದ್ದಾರೆ.‌ರಾಖಿ ಸಾವಂತ್ ಮತ್ತು ಆದಿಲ್ ದುರಾನಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಾಖಿ ಸಾವಂತ್ ಲೆಹೆಂಗಾ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಆದಿಲ್ ಕಪ್ಪು ಬಣ್ಣದ ಶೇರ್ವಾನಿಯಲ್ಲಿ ಸಿನಿಮಾ ನಾಯಕನ ಹಾಗೆ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ.

ಇಬ್ಬರ ಬಾಂಧವ್ಯ ಮತ್ತು ಪ್ರಣಯ ಜನರ ಮನ ಗೆಲ್ಲುತ್ತಿದೆ. ರಾಖಿ ಸಾವಂತ್ ಲೆಹೆಂಗಾದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದು, ವೀಡಿಯೊದಲ್ಲಿ, ಆದಿಲ್ ರಾಖಿ ಸಾವಂತ್ ಅವರ ಪಾಪಡಿ ಬೊಟ್ಟನ್ನು ಸರಿಪಡಿಸುತ್ತಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ರಾಖಿ ಸಾವಂತ್ ಅವರು ಆದಿಲ್ ಜೊತೆ ಅದ್ಭುತ ಪೋಸ್ ನೀಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಬಾಲಿವುಡ್ ಸಿನಿಮಾದ ಒಂದು ಸೂಪರ್ ಹಿಟ್ ಹಾಡು ಪ್ಲೇ ಆಗಿದ್ದು, ಅದಕ್ಕೆ ತಕ್ಕ ಹಾಗೆ ಈ ಜೋಡಿ ಪೋಸ್ ಗಳನ್ನು ನೀಡುವ ಮೂಲಕ ಇನ್ನಷ್ಟು ರೋಮ್ಯಾಂಟಿಕ್ ವಾತಾವರಣ ನಿರ್ಮಾಣ ಮಾಡಿದ್ದಾರೆ.

Leave a Reply

Your email address will not be published.