ಮದುವೆ ಮುರಿದು ಬಿತ್ತು ಎಂದವರ ಮುಖಕ್ಕೆ ಹೊಡೆದಂತೆ ಬೋಲ್ಡ್ ಫೋಟೋ ಮೂಲಕ ತಿರುಗೇಟು ಕೊಟ್ಟ ನಟಿ

Entertainment Featured-Articles Movies News

ಮದುವೆ ವಿಚಾರದಲ್ಲಿ ಈ ಹಿಂದೆ ವಂಚನೆಗೆ ಒಳಪಟ್ಟಿದ್ದರು ಬಹು ಭಾಷಾ ನಟಿ ಆಮ್ನಾ ಖಾಸಿಂ. ಈ ನಟಿ ಪೂರ್ಣಾ ಎನ್ನುವ ಹೆಸರಿನಲ್ಲೇ ಜನಪ್ರಿಯತೆ ಪಡೆದಿದ್ದಾರೆ. ಪೂರ್ಣಾ ಅವರು ಹೀಗೆ ಮೋಸ ಹೋಗಿದ್ದ ವಿಚಾರದಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅಲ್ಲದೇ ನಟಿಯೊಬ್ಬರು ಹೀಗೆ ಮದುವೆಯ ವಿಚಾರದಲ್ಲಿ ವಂಚನೆವೆ ಒಳಗಾಗಿದ್ದು ಒಂದು ಸಂಚಲನ ಸೃಷ್ಟಿಸಿತ್ತು. ಇವೆಲ್ಲವುಗಳ ನಂತರ ಆಮ್ನಾ ಖಾಸಿಂ ಅವರು ಕಳೆದ ಮೇ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡು, ಹೊಸ ಜೀವನಕ್ಕೆ ಅಡಿಯಿಡಲು ಸಜ್ಜಾಗುತ್ತಿರುವಾಗಲೇ, ಕಳೆದ ಕೆಲವು ದಿನಗಳಿಂದ ಸಹ ಅವರ ಮದುವೆಯ ವಿಚಾರ ವಾಗಿ ಹೊಸದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಹೌದು, ಅಭಿಮಾನಿಗಳಿಗೆ ಒಂದು ಕಡೆ ನಟಿ ತಮ್ಮ ಮದುವೆಯ ಸುಳಿವನ್ನು ನೀಡಿದ್ದರು. ಆದರೆ ಮತ್ತೊಂದು ಕಡೆ ನಟಿ ಪೂರ್ಣಾ ಅವರ ಮದುವೆ ಮುರಿದು ಬಿದ್ದಿದೆ ಎನ್ನುವ ಸುದ್ದಿಯೊಂದು ಬಿರುಗಾಳಿಯಂತೆ ಎಲ್ಲಾ ಕಡೆ ಸುಳಿದಾಡಲು ಪ್ರಾರಂಭಿಸಿದೆ. ಈ ಸುದ್ದಿಯನ್ನು ನೋಡಿ ಸಹಜವಾಗಿಯೇ ನಟಿ ಪೂರ್ಣಾ ಅವರ ಅಭಿಮಾನಿಗಳಲ್ಲಿ ಒಂದು ಆತಂಕ ಮೂಡಿತ್ತು. ಈ ವಿಷಯ ಸತ್ಯವೋ ಅಥವಾ ಕೇವಲ ವದಂತಿಯೋ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ನಟಿ ಪೂರ್ಣ ಅವರು ತಮ್ಮ ವಿವಾಹದ ವಿಚಾರಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ತನ್ನ ಮದುವೆಯ ವಿಚಾರವಾಗಿ ಹರಡಿರುವ ಸುದ್ದಿಗಳಿಗೆ ಸ್ಪಷ್ಟ ಉತ್ತರವನ್ನು ನೀಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಹರಡಿರುವ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ನಟಿ ಪೂರ್ಣ ಅವರು ತಮ್ಮ ಭಾವಿ ಪತಿಯೊಡನೆ ಇರುವ ಫೋಟೋಗಳನ್ನು ಜೂನ್ 1 ರಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಫೋಟೋ ಶೇರ್ ಮಾಡಿಕೊಂಡ ಅವರು ಕುಟುಂಬದ ಆಶೀರ್ವಾದದೊಂದಿಗೆ ಜೀವನದ ಮತ್ತೊಂದು ಹಂತವನ್ನು ಪ್ರವೇಶಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಮದುವೆಯ ಸುಳಿವನ್ನು ನೀಡಿದ್ದರು.

ನಟಿ ಹಂಚಿಕೊಂಡಂತ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಮತ್ತು ಸಿನಿಮಾ ಮಂದಿ ನಟಿಯ ಹೊಸ ಜೀವನಕ್ಕೆ ಶುಭ ಹಾರೈಸಿದ್ದರು. ನಟಿಯು ಜೆಬಿಎಸ್​ ಗ್ರೂಪ್​ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಶಾಜಿಜ್​ ಆಸಿಫ್​ ಅವರನ್ನು ಮದುವೆಯಾಗಲಿದ್ದು, ತಮ್ಮ ಪತಿಯನ್ನು ಅವರು ಪರಿಚಯಿಸಿದ್ಸರು. ಆದರೆ ಇದೆಲ್ಲಾ ಆದ ಮೇಲೆ ಕೆಲವರು ಟ್ರೋಲಿಗರು ಪೂರ್ಣಾ ಅವರ ಮದುವೆ ಮುರಿದು ಬಿದ್ದಿದೆ ಎನ್ನುವ ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವುದನ್ನು ನೋಡಿದ ಕೂಡಲೇ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಪೂರ್ಣಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸದೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅವರು ತಮ್ಮ ಭಾವಿ ಪತಿಯನ್ನು ಅಪ್ಪಿಕೊಂಡು, ಮುತ್ತು ನೀಡುತ್ತಿರುವ ಫೋಟೋವನ್ನು ಶೇರ್ ಮಾಡಿ, ಅದರ ಶೀರ್ಷಿಕೆಯಲ್ಲಿ, ‘ಎಂದೆಂದಿಗೂ ನನ್ನವನೇ’ ಎಂದು ಬರೆದುಕೊಂಡು ಮದುವೆ ಮುರಿದುಬಿತ್ತು ಎಂದು ವದಂತಿ ಹಬ್ಬಿಸಿದವರ ಮುಖಕ್ಕೆ ಹೊಡೆದಂತೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.