ಮದುವೆ ಮಂಟಪದಲ್ಲಿ ವಧುವಿನ ಜೊತೆ ವರ ಮಾಡಿದ ಹಾಸ್ಯ ಕಂಡು ಹೌಹಾರಿದ ಪುರೋಹಿತರು!!

Entertainment Featured-Articles News Viral Video

ಮದುವೆಯ ವೇಳೆಯಲ್ಲಿ ನಡೆಯುವ ಕೆಲವೊಂದು ಆಸಕ್ತಿಕರ ಘಟನೆಗಳು ಮದುವೆಯನ್ನು ಮತ್ತಷ್ಟು ಸ್ಮರಣೀಯ ಹಾಗೂ ಮಧುರ ಸನ್ನಿವೇಶವನ್ನಾಗಿ ಮಾಡುತ್ತದೆ. ಅಲ್ಲದೇ ಅಂತಹ ಕ್ಷಣಗಳ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಆದರೆ ಅದು ಸ್ವಲ್ಪ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಪ್ರಸ್ತುತ ಅಂತಹುದೊಂದು ದೃಶ್ಯವನ್ನು ಒಳಗೊಂಡ ಮದುವೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮದುವೆ ಮಾಡಿಸುತ್ತಿದ್ದ ಪುರೋಹಿತರು ಹೇಳಿದ ಮಾತಿಗೆ ವರ ನೀಡಿದ ಉತ್ತರ ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ.

ಪುರೋಹಿತರು ವಧು ವರನ ಕಡೆಗೆ ನೋಡುತ್ತಾ, ಇನ್ನು ಮುಂದೆ ವಧು ಆಕೆಯ ತಂದೆಯ ಮನೆಗೂ ಹೋಗುವಂತಿಲ್ಲ. ಆಕೆ ಹಾಗೆ ಹೋಗಬೇಕಾದರೆ ಗಂಡನನ್ನು ಕೇಳಬೇಕು ಎಂದು ಹೇಳಿದ್ದಾರೆ. ಆಗ ವರನು ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ. ವರನು ನೀಡಿದ ಉತ್ತರಕ್ಕೆ ಮದುವೆಯಲ್ಲಿ ನೆರೆದಿದ್ದ ಅತಿಥಿಗಳು ನಕ್ಕಿದ್ದಾರೆ. ಅಲ್ಲದೇ ವಿಡಿಯೋ ನೋಡಿದ ಮಂದಿ ಕೂಡಾ ಈಗ ನಗುತ್ತಿದ್ದಾರೆ. ವರನ ಅದ್ಭುತವಾದ ಹಾಸ್ಯ ಪ್ರಜ್ಞೆಯನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

ತವರು ಮನೆಗೆ ಹೋಗಲು ವಧು ಗಂಡನ ಅನುಮತಿ ಕೇಳಬೇಕು ಎಂದು ಪುರೋಹಿತರು ಹೇಳಿದಾಗ, ಯಾರೂ ಊಹಿಸಿರದ ಹಾಗೆ ವರನು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಆಕೆ ಯಾವಾಗ ಬೇಕಾದ್ರು ತವರು ಮನೆಗೆ ಹೋಗ್ಲಿ, ಆದ್ರೆ ನನ್ನದೊಂದು ಷರತ್ತು ಎಂದಿದ್ದಾನೆ. ಆಗ ಎಲ್ಲರ ಕಿವಿ ನೆಟ್ಟಗಾಗಿದೆ. ವರ ಏನು ಷರತ್ತು ವಿಧಿಸುತ್ತಾನೆ ಎಂದು ಕೇಳುವ ತವಕ ಎಲ್ಲರಲ್ಲೂ ಮೂಡಿದೆ‌. ನಿಜಕ್ಕೂ ವರ ಹಾಕಿದ ಷರತ್ತು ಕೇಳಿದಾಗ ಅಲ್ಲಿದ್ದವರು ಮಾತ್ರವಲ್ಲ ಎಲ್ಲರಿಗೂ ನಗು ಬರುತ್ತದೆ‌.

ವರನು ವಧು ತವರು ಮನೆಗೆ ಯಾವಾಗ ಬೇಕಾದರೂ ಹೋಗಲಿ, ಆದ್ರೆ ಕಂಡೀಶನ್ ಏನೆಂದ್ರೆ ಆಕೆ ಕನಿಷ್ಠ ಒಂದು ತಿಂಗಳಾದ್ರೂ ಹೋಗಬೇಕು ಎನ್ನುವ ಷರತ್ತನ್ನು ಹಾಕಿದ್ದಾನೆ. ವರ ಹಾಕಿದ ಕಂಡೀಶನ್ ಕೇಳಿ ಎಲ್ಲರೂ ನಕ್ಕಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿರುವ ಈ ವೀಡಿಯೋವನ್ನು ಎಂಟು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಐದು ಲಕ್ಷಕ್ಕಿಂತ ಅಧಿಕ ಮಂದಿ ಇದಕ್ಕೆ ಮೆಚ್ಚುಗೆ ನೀಡಿದ್ದಾರೆ. ವೀಡಿಯೋ ಮೆಚ್ಚಿದ ಮಂದಿ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave a Reply

Your email address will not be published.