ಕಳೆದ ಕೆಲವು ದಿನಗಳಿಂದಲೂ ಸಹಾ ಸೋಷಿಯಲ್ ಮೀಡಿಯಾಗಳಲ್ಲಿ ಮದುವೆಗಳ ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಅಂದರೆ ಮದುವೆ ವೇಳೆಯಲ್ಲಿ ನಡೆಯುವಂತಹ ಫನ್ನಿ ಘಟನೆಗಳು, ಅನಿರೀಕ್ಷಿತ ಜಗಳಗಳು, ವಧು ವರನ ವಿಚಿತ್ರ ವರ್ತನೆ ಹೀಗೆ ಹತ್ತು ಹಲವು ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಅದರಲ್ಲೂ ವೈರಲ್ ಆಗುತ್ತಿರುವ ವೀಡಿಯೋಗಳಲ್ಲಿ ಬಹುತೇಕ ಎಲ್ಲವೂ ಸಹಾ ಹಾಸ್ಯವನ್ನು ಹೊತ್ತು ತರುವಂತಹ ವೀಡಿಯೋಗಳಾಗಿದ್ದು, ಆ ಸನ್ನಿವೇಶಗಳಲ್ಲಿ ಅನಿರೀಕ್ಷಿತವಾಗಿ ನಡೆದಂತಹ ತಮಾಷೆಯನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಈ ವೈರಲ್ ವೀಡಿಯೋಗಳು ಮಾತ್ರ ಸಖತ್ ಮಜವನ್ನು ನೀಡುತ್ತಿರುವ ಮಾತು ಮಾತ್ರ ನಿಜ.
ಈಗ ಅಂತಹುದೇ ಒಂದು ವೀಡಿಯೋ ವೈರಲ್ ಆಗಿದ್ದು ಮದುವೆ ಮಂಟಪದಲ್ಲಿ ಗುಟ್ಕಾ ಜಗಿಯುತ್ತಿದ್ದ ವರನಿಗೆ ವಧು ಕೆನ್ನೆಗೆ ಬಾರಿಸಿರುವ ಘಟನೆ ಯ ದೃಶ್ಯ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ. ಹೌದು ವೀಡಿಯೋದಲ್ಲಿ ನೋಡಿದಾಗ ಮದುವೆ ಮಂಟಪದಲ್ಲಿ ಮದುವೆಯ ಶಾಸ್ತ್ರಗಳು ನಡೆಯುವಾಗ, ವಧು ಅರ್ಚಕರನ್ನು ಅವರ ಬಾಯಲ್ಲಿ ಏನೋ ಜಗಿಯುತ್ತಿರುವ ಬಗ್ಗೆ ಕೇಳುತ್ತಾಳೆ, ಅರ್ಚಕರು ಆಕೆಗೆ ಸರಿಯಾದ ಉತ್ತರ ನೀಡದೇ, ಮದುವೆ ಕಡೆ ಗಮನ ನೀಡು ಎನ್ನುತ್ತಾರೆ. ಆಗ ಕೋಪದಿಂದ ನಿನ್ನಂತಹವರಿಂದಲೇ ಗಂಡಸರು ಹಾಳಾಗೋದು ಎಂದು ಅರ್ಚಕರಿಗೆ ಒಂದೇಟು ಹಾಕಿದ್ದಾಳೆ. ಅನಂತರ ವರ ನ ಕಡೆ ತಿರುಗಿ ಮದುವೆ ಮಂಟಪದಲ್ಲಿ ಗುಟ್ಕಾ ಬೇಕಾ ಎಂದು ಆತನಿಗೂ ಹೊಡೆದಿದ್ದಾಳೆ.
ನಂತರ ವರನು ಮೇಲೆದ್ದು ತಾನು ಅಗಿಯುತ್ತಿದ್ದ ಗುಟ್ಕಾ ವನ್ನು ಉಗಿದು ಬಂದು ಕುಳಿತಿದ್ದಾನೆ. ಇನ್ನು ಈ ವೀಡಿಯೋ ಎಲ್ಲಿನದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲವಾದರೂ, ಈ ದೃಶ್ಯಕ್ಕೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೀಡಿಯೋ ನೋಡಿದ ಜನರು ವಧು ಗುಟ್ಕಾ ಹಾಕಿದ ವರ ನಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾಳೆ ಎಂದು ಮೆಚ್ಚುಗೆ ನೀಡಿದ್ದಾರೆ. ಕೆಲವರು ಹಾಸ್ಯ ಮಾಡುತ್ತಾ ಅರ್ಚಕರು ಮತ್ತು ಮದುವೆ ಗಂಡು ಅಜಯ್ ದೇವಗನ್ ಅಭಿಮಾನಿಗಳ ಅದಕ್ಕೆ ಗುಟ್ಕಾ ಹಾಕಿ ಬಂದಿದ್ದಾರೆ ಎಂದು ಕಾಮೆಡಿ ಮಾಡಿದ್ದಾರೆ.