ದಕ್ಷಿಣ ಸಿನಿಮಾ ರಂಗದಲ್ಲಿ ನಟಿ ನಯನತಾರಾ ಎಂದರೆ ಅವರಿಗೊಂದು ವಿಶೇಷವಾದ ಸ್ಥಾನವಿದೆ. ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಈ ನಟಿ ಸಿನಿಮಾ ರಂಗಕ್ಕೆ ಅಡಿಯಿಟ್ಟು ಬರೋಬ್ಬರಿ 19 ವರ್ಷಗಳು ಕಳೆದಿವೆ. ಹೌದು ನಟಿ ನಯನತಾರಾ ಮಲೆಯಾಳಂ ಸಿನಿಮಾ ಮೂಲಕ 2003 ರಲ್ಲಿ ಸಿನಿ ರಂಗಕ್ಕೆ ಅಡಿಯಿಟ್ಟರು. ಇಂದಿಗೂ ಸಹಾ ನಟಿಯ ಚಾರ್ಮ್, ಬೇಡಿಕೆ ಯಾವುದೂ ತಗ್ಗಿಲ್ಲ. ಮಹಿಳಾ ಪ್ರಧಾನ ಸಿನಿಮಾಗಳು, ಸ್ಟಾರ್ ನಾಯಕರ ಜೊತೆಗೆ ನಾಯಕಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿಯಾಗಿದ್ದಾರೆ.
ನಟಿ ನಯನತಾರಾ ಗಿಂತ ತಡವಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಹಲವು ನಟಿಯರು ಇಂದು ಸಿನಿಮಾ ರಂಗದಲ್ಲಿ ಇಲ್ಲ. ಅಲ್ಲದೇ ಹಲವು ನವ ನಟಿಯರಿಗೆ ಬೇಡಿಕೆ ಇಲ್ಲ. ಆದರೆ ದಶಕಕ್ಕೂ ಹೆಚ್ಚಿನ ಕಾಲದಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಯನತಾರಾ ಮಾತ್ರ ಇಂದಿನ ನವ ನಟಿಯರಿಗೂ ಸಹಾ ಪೈಪೋಟಿ ನೀಡುತ್ತಿರುವ ಪ್ರಬಲ ಪ್ರತಿಸ್ಪರ್ಧಿ ಎಂದರೆ ತಪ್ಪಾಗಲಾರದು. ದಕ್ಷಿಣ ಸಿನಿಮಾ ರಂಗದಲ್ಲಿ ನಯನತಾರ ಅವರಿಗೆ ದೊಡ್ಡ ಸ್ಟಾರ್ ಡಂ ಇರುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಇನ್ನು ತಿಂಗಳ ಹಿಂದೆಯಷ್ಟೇ ನಟಿ ನಯನತಾರಾ ತಮಿಳಿನ ಜನಪ್ರಿಯ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ದಾಂಪತ್ಯ ಜೀವನಕ್ಕೆ ಸಹಾ ಅಡಿಯಿರಿಸಿದ್ದಾರೆ. ಇವೆಲ್ಲವುಗಳ ನಡುವೆ ಮತ್ತೊಂದು ವಿಶೇಷ ಏನೆಂದರೆ ನಟಿ ನಯನತಾರಾ ಆ್ಯಟ್ಲಿ ನಿರ್ದೇಶನದ ಬಾಲಿವುಡ್ ನಟ ಶಾರೂಖ್ ಖಾನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಗೆ ತಮ್ಮ ಭರ್ಜರಿ ಎಂಟ್ರಿ ಯನ್ನು ನೀಡಲು ಸಜ್ಜಾಗಿದ್ದಾರೆ.
ಈ ವೇಳೆ ನಟಿಯ ಸಂಭಾವನೆ ಕುರಿತಾಗಿ ಒಂದು ಹೊಸ ಸುದ್ದಿ ಹೊರ ಬಂದಿದೆ. ಹೌದು ದಕ್ಷಿಣ ಸಿನಿಮಾ ರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಸಹಾ ಒಬ್ಬರು. ಈ ನಟಿಯು ಸಿನಿನಾವೊಂದಕ್ಕೆ ನಾಲ್ಕರಿಂದ ಐದು ಕೋಟಿ ರೂಗಳ ಸಂಭಾವನೆ ಪಡೆಯುತ್ತಾರೆ. ಆದರೆ ಈಗ ನಯನತಾರಾ ತಮ್ಮ ವೃತ್ತಿ ಬದುಕಿನಲ್ಲಿ ಮಹತ್ವದ ಸಿನಿಮಾ ಆಗಲು ಹೊರಟಿರುವ ತಮ್ಮ 75 ನೇ ಸಿನಿಮಾಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಸಂಭಾವನೆ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ನಯನತಾರಾ ತಮ್ಮ ಹೊಸ ಸಿನಿಮಾಕ್ಕೆ ಇಟ್ಟಿರುವ ಈ ಸಂಭಾವನೆಯ ಬೇಡಿಕೆಯ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಒಂದು ವೇಳೆ ಈ ವಿಷಯ ಅಧಿಕೃತವಾಗಿ ನಟಿ ಹತ್ತು ಕೋಟಿ ಸಂಭಾವನೆ ಪಡೆದರೆ ಖಂಡಿತ ದಕ್ಷಿಣ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆದ ನಟಿ ಎನ್ನುವ ಹೆಗ್ಗಳಿಕೆಗೆ ನಯನತಾರ ಪಾತ್ರವಾಗಲಿದ್ದಾರೆ ಮಾತ್ರವೇ ಅಲ್ಲದೇ ತನಗೆ ಇನ್ನೂ ಯಾವ ಮಟ್ಟದ ಬೇಡಿಕೆ ಇದೆ ಎನ್ನುವುದನ್ನು ಸಹಾ ನಟಿ ಪರೋಕ್ಷವಾಗಿ ಸಾಬೀತು ಮಾಡುವುದು ನಿಜ ಎನ್ನಬಹುದಾಗಿದೆ.