ಮದುವೆ ಫೋಟೋ ತಂದಿಟ್ಟ ಕುತ್ತು: ಕೋಟಿ ಕೋಟಿ ಹಣ ಕಳೆದುಕೊಂಡ ನಯನತಾರಾ, ವಿಘ್ನೇಶ್ ದಂಪತಿ

Entertainment Featured-Articles Movies News

ದಕ್ಷಿಣ ಸಿನಿರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ಜೂನ್ 9 ರಂದು ಮಹಾಬಲಿಪುರಂ ಬಳಿ ಒಂದು ಸುಪ್ರಸಿದ್ಧ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಸುದ್ದಿ ಎಲ್ಲೆಲ್ಲೂ ಸದ್ದು ಮಾಡಿದ ವಿಷಯ ಎಲ್ಲರಿಗೂ ಗೊತ್ತಿದೆ. ಈ ಮದುವೆಗೆ ಹಲವು ಜನಪ್ರಿಯ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದ್ದರು. ಅಲ್ಲದೇ‌ ನಟಿ ನಯನತಾರಾ‌ ತಮ್ಮ ಮದುವೆಗಾಗಿ ವಿಶೇಷ ವಸ್ತ್ರ ವಿನ್ಯಾಸ, ಆಭರಣಗಳ ವಿನ್ಯಾಸಗಳನ್ನು ಮಾಡಿಸಿ, ಅಪ್ಸರೆಯಂತೆ ಕಂಗೊಳಿಸಿದ್ದರು.

ಮದುವೆಯ ಒಂದಷ್ಟು ಫೋಟೋಗಳು ಎಲ್ಲೆಲ್ಲೂ ವೈರಲ್ ಆಗಿ ಸಾಕಷ್ಟು ದೊಡ್ಡ‌ ಮಟ್ಟದಲ್ಲಿಯೇ ಮೆಚ್ಚುಗೆ ಗಳು ಹರಿದು ಬಂದಿದ್ದವು. ಆದರೆ ಈಗ ಅದೇ ಫೋಟೋಗಳು ನಯನತಾರಾ ಮತ್ತು ವಿಘ್ನೇಶ್ ದಂಪತಿಗೆ ಹೊಸ ಸಮಸ್ಯೆಯೊಂದನ್ನು ಸಹಾ ಹೊತ್ತು ತಂದಿದೆ. ಹೌದು, ಓಟಿಟಿ ದಿಗ್ಗಜ ನೆಟ್ ಫ್ಲಿಕ್ಸ್ ಮದುವೆಯ ವೀಡಿಯೋ‌ ಕವರೇಜ್ ಕುರಿತಾಗಿ ಈ ಜೋಡಿಯೊಂದಿಗೆ ಒಪ್ಪಂದ ಮಾಡಿಕೊಂಡು, ಅದಕ್ಕೆ ಬರೋಬ್ಬರಿ 25 ಕೋಟಿ ಹಣವನ್ನು ಸಹಾ ನೀಡಲು ಒಪ್ಪಿಗೆ ಸೂಚಿಸಿತ್ತು.

ನೆಟ್ ಫ್ಲಿಕ್ಸ್ ಮದುವೆ ಮಂಟಪದ ಅಲಂಕಾರ, ಪಂಚತಾರಾ ಹೊಟೇಲ್ ನ‌ ಸೂಟ್ಸ್ ಬುಕ್ಕಿಂಗ್, ಮೇಕಪ್ ಖರ್ಚು, ಪ್ರತಿ ಪ್ಲೇಟ್ ಊಟಕ್ಕೆ 3500 ರಂತೆ ಹಣವನ್ನು ಸಹಾ ಖರ್ಚು ಮಾಡಿತ್ತು. ಇಷ್ಟೆಲ್ಲಾ ಆದ ಮೇಲೆ, ನಯನತಾರ ಮತ್ತು ವಿಘ್ನೇಶ್ ಜೋಡಿಯ ಮದುವೆಯ ವೀಡಿಯೋ ಮಾತ್ರ ಒಂದು ತಿಂಗಳಾದರೂ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿಲ್ಲ. ಹೌದು, ವರದಿಗಳ ಪ್ರಕಾರ ನೆಟ್ ಫ್ಲಿಕ್ಸ್ ತಾನು ಮಾಡಿಕೊಂಡಿದ್ದ ಡೀಲ್ ಅನ್ನು ರದ್ದುಗೊಳಿಸಲು ಸಜ್ಜಾಗಿದೆ ಎನ್ನಲಾಗುತ್ತಿದೆ.

ಮದುವೆಯ ಯಾವುದೇ ಫೋಟೋ ಅಥವಾ ವೀಡಿಯೋ ನೆಟ್ ಫ್ಲಿಕ್ಸ್ ನಿಂದ ಇನ್ನೂ ಹೊರ ಬಂದಿರಲಿಲ್ಲ‌. ಆದರೆ ವಿಘ್ನೇಶ್ ಶಿವನ್ ಅವರ ಇನ್ಸ್ಟಾಗ್ರಾಂ ನಲ್ಲಿ ಮದುವೆಯ ಫೋಟೋ ಗಳು ಕಾಣಿಸಿಕೊಂಡಿವೆ. ನೆಟ್ ಫ್ಲಿಕ್ಸ್ ಅದಾಗಲೇ ಫೋಟೋ ಹಾಗೂ ವೀಡಿಯೋ ಹಕ್ಕನ್ನು ಖರೀದಿ ಮಾಡಿರುವಾಗ ವಿಘ್ನೇಶ್ ಶಿವನ್ ಫೋಟೋ ಗಳನ್ನು ಶೇರ್ ಮಾಡಿದ್ದು, ಅವು ವೈರಲ್ ಆಗಿ ಎಲ್ಲೆಲ್ಲೂ ಹರಿದಾಡಿದ್ದು, ನೆಟ್ ಫ್ಲಿಕ್ಸ್ ಸಿಟ್ಟಿಗೆ ಕಾರಣವಾಗಿದೆ.

ವಿಘ್ನೇಶ್ ಶಿವನ್ ಅವರು ಬಹಳ ಉತ್ಸುಕತೆಯಿಂದ ರಜನೀಕಾಂತ್, ಶಾರೂಖ್ ಖಾನ್, ಅ್ಯಟ್ಲಿ, ಮಣಿರತ್ನಂ ಜೊತೆಗೆ ನೂತನ ಜೋಡಿ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಒಪ್ಪಂದದ ಪ್ರಕಾರ ಅವರು ಹೀಗೆ ಶೇರ್ ಮಾಡುವುದಕ್ಕೆ ಅನುಮತಿ ಇರಲಿಲ್ಲ. ಆದರೆ ವಿಘ್ನೇಶ್ ಶಿವನ್ ಒಪ್ಪಂದವನ್ನು ಮುರಿದ ಕಾರಣ ನೆಟ್ ಫ್ಲಿಕ್ಸ್ ಈಗ ತನ್ನ ಡೀಲ್ ರದ್ದು ಮಾಡಿದ್ದು, ಸ್ಟ್ಟೀಮಿಂಗ್ ರೈಟ್ಸ್ ಸಹಿತ, ಮದುವೆಗೆ ಖರ್ಚು ಮಾಡಿದ ಹಣ ಮರಳಿ ನೀಡುವಂತೆ ನವ ಜೋಡಿಗೆ ನೋಟೀಸ್ ನೀಡಿದೆ ಎನ್ನಲಾಗಿದೆ.

Leave a Reply

Your email address will not be published.